For the best experience, open
https://m.hosakannada.com
on your mobile browser.
Advertisement

Actress Leelavathi: ಅಜ್ಜಿ ಲೀಲಾವತಿ ಕುರಿತು ಮತ್ತೊಂದು ಸತ್ಯ ಬಿಚ್ಚಿಟ್ಟ ಮೊಮ್ಮಗ - ಇಷ್ಟು ವರ್ಷ ಲೀಲಾವತಿ ಇದನ್ನು ಗೌಪ್ಯವಾಗಿ ಇಟ್ಟದ್ದೇಕೆ?

04:03 PM Dec 10, 2023 IST | ಕಾವ್ಯ ವಾಣಿ
UpdateAt: 04:03 PM Dec 10, 2023 IST
actress leelavathi  ಅಜ್ಜಿ ಲೀಲಾವತಿ ಕುರಿತು ಮತ್ತೊಂದು ಸತ್ಯ ಬಿಚ್ಚಿಟ್ಟ ಮೊಮ್ಮಗ   ಇಷ್ಟು ವರ್ಷ ಲೀಲಾವತಿ ಇದನ್ನು ಗೌಪ್ಯವಾಗಿ ಇಟ್ಟದ್ದೇಕೆ

Actress Leelavathi: ಲೀಲಾವತಿ ಅವರ ಮೊಮ್ಮಗ ಯುವರಾಜ್​ (leelavathi grandson yuvaraj) ಕೂಡ ಚೆನ್ನೈನಿಂದ ಬಂದು ಅಜ್ಜಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿ ಆಗಿದ್ದಾರೆ. ಹಿರಿಯ ನಟಿ ಲೀಲಾವತಿ ಅವರ (Actress Leelavathi) ಅಂತ್ಯ ಸಂಸ್ಕಾರ ನೆಲಮಂಗಲದ ಸೋಲದೇವನಹಳ್ಳಿಯ ತೋಟದ ಮನೆ ಬಳಿ ಕುಟುಂಬಸ್ಥರು ಸೇರಿ ಸಾವಿರಾರು ಜನರ ಸಮ್ಮುಖದಲ್ಲಿ ಶನಿವಾರ(ಡಿ.9) ಸಂಜೆ ನೆರವೇರಿತು. ಸಕಲ ಸರ್ಕಾರಿ ಗೌರವದೊಂದಿಗೆ ಹಿಂದು ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನಡೆದಿದೆ. ಸದ್ಯ ಲೀಲಾವತಿ ಬಗ್ಗೆ ಮಾಧ್ಯಮ ಜೊತೆಗೆ ಯುವರಾಜ್‌ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Advertisement

ಯುವರಾಜ್ ಅವರು ʻʻ ನನಗೆ ಕನ್ನಡ ಹೇಳಿಕೊಟ್ಟಿದ್ದು ನನ್ನ ಅಜ್ಜಿ, ನನಗೆ ಅಷ್ಟಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಅವರು ಇದ್ದಿದ್ದರೆ ಇನ್ನೂ ಚೆನ್ನಾಗಿ ಕನ್ನಡ ಕಲಿತಾ ಇದ್ದೆ. ಅಲ್ಲದೇ ಜೀವನದಲ್ಲಿ ಹೇಗೆ ಇರಬೇಕು ಎಂಬುದು ಅಜ್ಜಿ ನನಗೆ ಕಲಿಸಿದ್ದಾರೆ. ನನ್ನ ತಂದೆ ಕಲಾವಿದರು. ನನ್ನ ಫೇವರೇಟ್‌ ಹೀರೊ ಕೂಡ ನನ್ನ ತಂದೆನೆ’ ಎಂದರು.

ನನಗೆ ಯುವರಾಜ್​ ಎಂದು ಲೀಲಾವತಿ ಅಜ್ಜಿ ಅವರೇ ನಾಮಕರಣ ಮಾಡಿದ್ದರು. ಆ ಎಲ್ಲ ವಿಷಯಗಳನ್ನು ಯುವರಾಜ್​ ಮೆಲುಕು ಹಾಕಿದ್ದಾರೆ. ‘ಅಂದು ನಾನು ಬಂದು ಅಜ್ಜಿ ಎಂದು ಕರೆದಾಗ ಕಣ್ಣು ಬಿಟ್ಟಿದ್ದರು. ಯುವರಾಜಾ ಎಂದು ನನ್ನನ್ನು ಕರೆದಿದ್ದರು. ಅದು ನನಗೆ ತುಂಬ ಫೀಲ್​ ಆಗುತ್ತಿದೆ’ ಎಂದು ಅವರು ಹೇಳಿದ್ದಾರೆ.

Advertisement

ಇನ್ನು ಪುತ್ರನ ಬಗ್ಗೆಯೂ ಮಾತನಾಡಿದ ವಿನೋದ್ ರಾಜ್, ‘‘ನನ್ನ ಪುತ್ರ ಯುವರಾಜ್ ಎಂದರೆ ಅಮ್ಮನಿಗೆ ಬಹಳ ಪ್ರೀತಿ. ಕಳೆದ ಬಾರಿ ಬಂದಿದ್ದಾಗ ಅಜ್ಜಿ ಎಂದು ಕರೆದಾಗ ಕಣ್ಣು ಬಿಟ್ಟು ನೋಡಿದ್ದರು. ಅವನನ್ನು ಚಿತ್ರರಂಗಕ್ಕೆ ತರಬೇಕೆಂಬ ಆಸೆ ಅಮ್ಮನಿಗೆ ಇರಲಿಲ್ಲ. ಆದರೆ ವಿದ್ಯಾಭ್ಯಾಸ ಮಾಡಬೇಕು ಎಂಬ ಆಸೆಯಿತ್ತು, ಹಾಗೆಯೇ ಅವನು ಒಳ್ಳೆಯ ವಿಧ್ಯಾಭ್ಯಾಸ ಮಾಡಿದ್ದಾನೆ. ಸಾಫ್ಟ್​ವೇರ್ ಉದ್ಯೋಗ ಮಾಡುತ್ತಿದ್ದಾನೆ’’ ಎಂದಿದ್ದಾರೆ.

ಇದನ್ನೂ ಓದಿ: ಜುಟ್ಚು ಹಿಡಿದು ನಡು ರಸ್ತೆಯಲ್ಲೇ ಹೊರಲಾಡಿ ಹೊಡೆದಾಡಿಕೊಂಡ ಹುಡುಗಿಯರು !!

Advertisement
Advertisement