Electricity Rate cut: ವಿದ್ಯುತ್ ದರ ಇಳಿಕೆ, ಇಂದಿನಿಂದ ಜಾರಿ
Electricity Rate cut: ಇಂದಿನಿಂದ ರಾಜ್ಯದಲ್ಲಿ ಭಾರೀ ವಿದ್ಯುತ್ ದರ ಕಡಿತ ಜಾರಿಯಾಗುತ್ತದೆ. ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ಆಯೋಗ (KERC) ವಿದ್ಯುತ್ ಪರಿಷ್ಕರಣೆ ಮಡಿರುವ ಆದೇಶ ಇಂದಿನಿಂದ (ಎ.1) ರಿಂದ ಜಾರಿಯಾಗಲಿದ್ದು, 100 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಪ್ರತಿ ಯುನಿಟ್‌ಗೆ 1.10 ರೂ ಕಡಿಮೆಯಾಗುತ್ತದೆ. 15 ವರ್ಷಗಳ ನಂತರ ರಾಜ್ಯದಲ್ಲಿ ವಿದ್ಯುತ್ ದರ ಕಡಿಮೆಯಾಗಿದೆ.
ಗೃಹಜ್ಯೋತಿ ಉಚಿತ ವಿದ್ಯುತ್ ಬಳಕೆದಾರರಿಗೆ ವಿದ್ಯುತ್ ದರ ಪರಿಷ್ಕರಣೆಯ ಹೊರೆ ಇಲ್ಲ. ಏಕೆಂದರೆ ಗೃಹಜ್ಯೋತಿಯ ಯಾವುದೇ ಷರತ್ತುಗಳಲ್ಲಿ ಬದಲಾವಣೆ ಇಲ್ಲ. ವಾರ್ಷಿಕ ಸರಾಸರಿ ಮಾನದಂಡವು ಗೃಹಜ್ಯೋತಿ ಯೋಜನೆಗೆ ಇದೆ. ಇದರಲ್ಲಿ ವರ್ಷದ ಸರಾಸರಿ ಪಡೆದು ಅದರ ಮೇಲೆ 10 ಯುನಿಟ್ ಉಚಿತ ನೀಡಲಾಗುತ್ತಿರುವದರಿಂದ ವಿದ್ಯುತ್ ದರ ಪರಿಷ್ಕರಣೆಯ ಹೊರೆ ಗೃಹಜ್ಯೋತಿಗೆ ಅನ್ವಯವಾಗುವುದಿಲ್ಲ.
ಇದನ್ನೂ ಓದಿ: Exam: 5, 8, 9ನೇ ಕ್ಲಾಸ್ ಮಕ್ಕಳಿಗೆ ಮತ್ತೆ ಪರೀಕ್ಷೆ
ಏಕರೂಪದ ವಿದ್ಯುತ್ ದರ
ಪ್ರತಿಯುನಿಟ್‌ಗೆ 5.90 ರೂ.ಗಳತೆ ದರ ನಿಗದಿ ಮಾಡಲಾಗಿದೆ. ಎಷ್ಟೇ ಯುನಿಟ್ ಬಳಕೆ ಮಾಡಿದರೂ ಈ ದರ ಅನ್ವಯವಾಗಲಿದೆ. ಏಕರೂಪದ ಗೃಹಬಳಕೆ ವಿದ್ಯುತ್ ದರ ಎಲ್ಲಾ ಎಸ್ಕಾಂಗಳಿಗೆ ನಿಗದಿ ಮಾಡಲಾಗಿದೆ. 100ಕ್ಕಿಂತ ಹೆಚ್ಚು ಯುನಿಟ್ ಬಳಕೆ ಮಾಡಿದರೆ 7 ರೂ. ಬದಲಿಗೆ ಪ್ರತಿ ಯುನಿಟ್‌ಗೆ 5.90 ರೂ. ಮಾತ್ರ ಶುಲ್ಕ ವಿಧಿಸಲಾಗುವುದು.
ಒಂದು ವೇಳೆ ನೀವು 100 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಇಲ್ಲಿಯವರೆಗೆ ಪ್ರತಿ ಯುನಿಟ್‌ಗೆ 4.75 ರೂ. ನಿಗದಿ ಮಾಡಲಾಗಿತ್ತು. 100 ಯುನಿಟ್ ಕಡಿಮೆ ವಿದ್ಯುತ್ ಬಳಸುವವರಿಗೆ ಪ್ರತಿ ಯುನಿಟ್‌ಗೆ 1.15 ಶುಲ್ಕದ ಹೆಚ್ಚಳ ಹೊರೆ ಬೀಳಲಿದೆ. ಆದರೆ ಶೇ.97 ರಷ್ಟು ವಿದ್ಯುತ್ ಬಳಕೆದಾರರು ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಿರುವುದರಿಂದ ದರ ಏರಿಕೆ ಬಿಸಿ ತಟ್ಟಲ್ಲ.
ಎಲ್.ಟಿ. ಸಂಪರ್ಕ ಹೊಂದಿರುವ ಆಸ್ಪತ್ರೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ಯೂನಟಿಗೆ 7.75 ರೂ. ನಿಗದಿ ಮಾಡಲಾಗಿತ್ತು. ಇದೀಗ 50 ಪೈಸೆ ಇಳಿಸಲಾಗಿದೆ. ಅಂದರೆ 7.25 ಪ್ರತಿ ಯೂನಿಟ್‌ಗೆ ಬೀಳಲಿದೆ. ಎಲ್‌ಟಿ ವಾಣಿಕ್ಯ ಬಳಕೆಯ ಸಂಪರ್ಕಗಳಿಗೆ ಡಿಮ್ಯಾಂಡ್ ಆಧಾರದ ಮೇಲೆ ಶುಲ್ಕ ನಿಗದಿ ಮಾಡಲಾಗಿದ್ದು, ಹಾಗಾಗಿ ಸ್ಲ್ಯಾಬ್ ಪದ್ಧತಿ ರದ್ಧು ಮಾಡಲಾಗಿದೆ. ಪ್ರತಿ ಯುನಿಟ್‌ಗೆ 8.50 ಇದ್ದ ಬೆಲೆ 8 ರೂ.ಗೆ ಇಳಿಕೆ ಮಾಡಿದೆ.
ಹಿಂದಿನ ದರ ಈ ರೀತಿ ಇತ್ತು; 0-100 ಯುನಿಟ್ ಗೆ 4.75 ರೂ.
100 ಕ್ಕಿಂತ ಹೆಚ್ಚು - 7 ರೂ. ಇತ್ತು.
ಪರಿಷ್ಕೃತ ದರ- ಎಲ್ಲಾ ಯೂನಿಟ್‌ಗೆ 5.90 ರೂ. ಮಾಡಲಾಗಿದೆ.