ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Dubai Rain: ವರುಣನ ಆರ್ಭಟಕ್ಕೆ ದುಬೈ ಒದ್ದಾಟ; ವಿಮಾನ ನಿಲ್ದಾಣ ಜಲಾವೃತ; ಶಾಲೆಗಳಿಗೆ ರಜೆ, ಜನಜೀವನ ಅಸ್ತವ್ಯಸ್ಥ

Dubai Rain: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ಪ್ರಮುಖ ನಗರಗಳಲ್ಲಿ ಒಂದಾದ ದುಬೈನಲ್ಲಿ ಧಾರಾಕಾರ ಮಳೆಯು ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
09:15 AM Apr 17, 2024 IST | ಸುದರ್ಶನ್
UpdateAt: 11:58 AM Apr 17, 2024 IST
Advertisement

Dubai Rain: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ಪ್ರಮುಖ ನಗರಗಳಲ್ಲಿ ಒಂದಾದ ದುಬೈನಲ್ಲಿ ಧಾರಾಕಾರ ಮಳೆಯು ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ (ಏಪ್ರಿಲ್ 16) ಸುರಿದ ಭಾರಿ ಮಳೆಗೆ ರಸ್ತೆ, ಮನೆ, ಮಾಲ್ ಗಳು ಜಲಾವೃತಗೊಂಡಿರುವ ದೃಶ್ಯಗಳು ವೈರಲ್‌ ಆಗಿದೆ.

Advertisement

https://www.instagram.com/reel/C51H9vZSAoc/?igsh=bzZienIyYTQxZmJw

ಇದನ್ನೂ ಓದಿ: Dharawada: ಮದ್ಯಕ್ಕಾಗಿ ಶೋಧಿಸಿದಾಗ ಸಿಕ್ತು ಕಂತೆ ಕಂತೆ ಹಣ; ಪತ್ತೆಯಾಯ್ತು 16 ಕೋಟಿ ಹಣ

Advertisement

ಭಾರೀ ಮಳೆಯಿಂದಾಗಿ ದುಬೈನಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೊಲ್ಲಿಯಲ್ಲಿ ಚಂಡಮಾರುತದಿಂದಾಗಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇವೆಗಳ ವ್ಯತ್ಯಯ ಉಂಟಾಯಿತು. ಹಲವಾರು ಗಂಟೆಗಳ ಕಾಲ ಇಲ್ಲಿಂದ ವಿಮಾನಗಳು ಟೇಕಾಫ್ ಆಗಲಿಲ್ಲ. ರನ್‌ವೇ ಮೊಣಕಾಲಿನ ಆಳದಲ್ಲಿ ನೀರಿತ್ತು. ಮಳೆಯಿಂದಾಗಿ 50ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ.

ಇದನ್ನೂ ಓದಿ: Ayodhya: ಬಾಲ ರಾಮನಿಗೆ ಇಂದು ಸೂರ್ಯ ತಿಲಕ

ಈ ಗಲ್ಫ್ ನಗರದಲ್ಲಿ ಮಳೆ ಸಾಮಾನ್ಯವಲ್ಲ. ಇಲ್ಲಿ ಅಪರೂಪದ ಸಂದರ್ಭಗಳಲ್ಲಿ ಮಳೆಯಾಗುತ್ತದೆ. ಈ ಕಾರಣದಿಂದ ಮಂಗಳವಾರ ಧಾರಾಕಾರ ಮಳೆ ಆರಂಭವಾದಾಗ ರಸ್ತೆಯಿಂದ ಹಿಡಿದು ಮನೆಗಳವರೆಗೂ ಆವರಿಸಿಕೊಂಡಿತ್ತು. ಮಳೆ ನೀರು ಜನರ ಮನೆಗಳಿಗೂ ನುಗ್ಗಿದೆ.

ಮಳೆಯಿಂದಾಗಿ ಯುಎಇಯಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ಬುಧವಾರವೂ ಮುಚ್ಚುವ ನಿರೀಕ್ಷೆಯಿದೆ. ಯುಎಇಯ ಕೆಲವು ಭಾಗಗಳಲ್ಲಿ 24 ಗಂಟೆಗಳಲ್ಲಿ 80 ಮಿಮೀ ಮಳೆಯಾಗಿದೆ. ಇದರಿಂದಾಗಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯುಎಇ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದ್ದು, ಬುಧವಾರ ಇಡೀ ದೇಶವನ್ನು ಆವರಿಸಲಿದೆ ಎಂದು ಎಚ್ಚರಿಸಿದೆ. ಜನರು ಅತ್ಯಂತ ಜಾಗರೂಕರಾಗಿರಲು ಕೋರಲಾಗಿದೆ. ದುಬೈ ಮತ್ತು ಅಬುಧಾಬಿಯ ಕೆಲವು ಭಾಗಗಳಲ್ಲಿ ಮಂಗಳವಾರ ಆಲಿಕಲ್ಲು ಮಳೆಯಾಗಿದೆ.

ಯುಎಇಯ ದುಬೈ ನಗರ ಮಾತ್ರ ಮಳೆಯಿಂದ ಹಾನಿಗೊಳಗಾಗಿದೆ ಎಂದಲ್ಲ. ದೇಶದ ಇತರ ಎಮಿರೇಟ್‌ಗಳಲ್ಲಿಯೂ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಶಾರ್ಜಾ, ಅಜ್ಮಾನ್, ರಾಸ್ ಅಲ್-ಖೈಮಾ, ಉಮ್ ಅಲ್-ಕುವೈನ್ ಮತ್ತು ಫುಜೈರಾದಲ್ಲೂ ಮಳೆಯಾಗಿದೆ.

ಮಳೆಯಿಂದಾಗಿ ದುಬೈನಲ್ಲಿರುವ ಜನರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ. ತೀರಾ ಅಗತ್ಯವಿದ್ದಾಗ ಮಾತ್ರ ಜನರು ಮನೆಯಿಂದ ಹೊರಗೆ ಬರುವಂತೆ ತಿಳಿಸಲಾಗಿದೆ. ವಾಹನಗಳು ನೀರಿನಲ್ಲಿ ಮುಳುಗುತ್ತಿರುವ ದೃಶ್ಯವೂ ಕಂಡು ಬಂದಿದೆ.

Advertisement
Advertisement