ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Coconut water: ಈ ಸಮಯದಲ್ಲಿ ಎಳನೀರು ಕುಡಿದರೆ ತೂಕ ತನ್ನಷ್ಟಕ್ಕೆ ಇಳಿದುಬಿಡುತ್ತೆ !!

02:11 PM Feb 23, 2024 IST | ಹೊಸ ಕನ್ನಡ
UpdateAt: 02:58 PM Feb 23, 2024 IST
Advertisement

Coconut water: ಎಳನೀರು ಕುಡಿಯೋದು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಜೊತೆಗೆ ಇದು ತೂಕ ಇಳಿಕೆಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ಆದ್ರೆ ಯಾವ ಸಮಯದಲ್ಲಿ ಎಳನೀರು(Coconut water)ಕುಡಿಬೇಕು ಅನ್ನೋದು ಕೂಡ ಮುಖ್ಯ. ಯಾವ ಹೊತ್ತಿನಲ್ಲಿ ಕುಡಿದ್ರೆ ಹೆಚ್ಚು ಪ್ರಯೋಜನ ಎಂಬುದು ನಿಮಗೆ ಗೊತ್ತಿಲ್ಲ ಅಂದ್ರೆ ಈ ಸ್ಟೋರಿ ನೋಡಿ.

Advertisement

ಇದನ್ನೂ ಓದಿ: Physical relationship : ಪುರುಷರೆ, ಇದೊಂದು ಹಣ್ಣು ಸಾಕು ನಿಮ್ಮ ಲೈಂಗಿಕ ಸಾಮರ್ಥ್ಯ ದುಪ್ಪಟ್ಟು ಮಾಡಲು !!

ಹೌದು, ಬಹುತೇಕರು ಬೆಳಗ್ಗೆದ್ದು ಎಳನೀರು ಕುಡಿಯುತ್ತಾರೆ. ಮತ್ತೆ ಕೆಲವರು ಮಧ್ಯಾಹ್ನ ಊಟವಾದ ಬಳಿಕ ಎಳನೀರು ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಆದರೆ ಇದರಲ್ಲಿ ಯಾವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದು ಎಂದು ನಿಮಗೆ ಗೊಂದಲವಿರಬಹುದು. ಎಳನೀರನ್ನು ಸೇವಿಸಲು ಯಾವುದೇ ಸಮಯದ ಮಿತಿಯಿಲ್ಲ. ನೀವು ಇದನ್ನು ಹಗಲು, ರಾತ್ರಿಯಲ್ಲಿಯೂ ಸಹ ಕುಡಿಯಬಹುದು. ಆದರೆ ಕೆಲವು ನಿರ್ದಿಷ್ಟ ಸಮಯದಲ್ಲಿ ಅದನ್ನು ಕುಡಿಯುವುದರಿಂದ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು.

Advertisement

ಅಂದಹಾಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಕೇವಲ ಒಂದು ಲೋಟ ತೆಂಗಿನ ನೀರನ್ನು ಕುಡಿಯುವುದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಚರ್ಮದ ಜಲಸಂಚಯನವನ್ನು ಸುಧಾರಿಸುತ್ತದೆ ಮತ್ತು ಬ್ಯಾಕ್ಟೀರಿಯಾದ ಸೋಂಕನ್ನು ತಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಕುಡಿಯುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಯಾಕೆಂದರೆ ಇದರಲ್ಲಿ ಲಾರಿಕ್ ಆಮ್ಲವಿದ್ದು, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಷ್ಟವನ್ನು ಸುಲಭಗೊಳಿಸುತ್ತದೆ. ನಿರ್ಜಲೀಕರಣ ಮತ್ತು ಮಲಬದ್ಧತೆಯ ವಿರುದ್ಧ ಹೋರಾಡಲು ಗರ್ಭಿಣಿಯರಿಗೆ ಎಳನೀರನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ.

ಎಳನೀರಿಂದ ಏನೆಲ್ಲಾ ಲಾಭ?

ತೆಂಗಿನ ನೀರಿನಲ್ಲಿ ಕ್ಯಾಲೋರಿ ಕಡಿಮೆ ಇರುವ ಕಾರಣ ಇದನ್ನು ಕುಡಿಯೋದ್ರಿಂದ ಆರೋಗ್ಯಕ್ಕೆ ಯಾವ್ದೇ ರೀತಿಯಲ್ಲಿ ತೊಂದರೆಯಿಲ್ಲ. ಒಂದು ಕಪ್ ನಲ್ಲಿ ಕೇವಲ 45 ಕ್ಯಾಲೋರಿಗಳಿವೆ. ಹೀಗಾಗಿ, ನೀವು ಸೋಡಾ ಅಥವಾ ಇತರ ಸಕ್ಕರೆ ಪಾನೀಯಗಳನ್ನು ಕುಡಿಯಬೇಕು ಅನಿಸಿದಾಗಲ್ಲೆಲ್ಲಾ ಎಳನೀರು ಕುಡಿಯುವುದು ಉತ್ತಮ.

Related News

Advertisement
Advertisement