ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Cucumber: ಸೌತೆಕಾಯಿಯನ್ನು ಹೀಗೆ ಸೇವಿಸಿ, ಒಂದೇ ತಿಂಗಳಲ್ಲಿ 5 ಕೆಜಿ ತೂಕ ಇಳಿಸಿ !!

05:16 PM Apr 11, 2024 IST | ಸುದರ್ಶನ್ ಬೆಳಾಲು
UpdateAt: 05:16 PM Apr 11, 2024 IST
Advertisement

Cucumber: ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಅವರೆಲ್ಲರಿಗೂ ಕೂಡ ತಾವು ಚಂದವಾಗಿ ಕಾಣಬೇಕು, ಸ್ಮಾರ್ಟ್ ಆಗಿ ಕಾಣಬೇಕು ಎಂಬ ಆಸೆ. ಆದರೆ ಏನು ಮಾಡೋದು, ಅವರಿರುವ ಎತ್ತರ, ವಿಪರೀತವಾಗಿ ಬೆಳೆದ ಬೊಜ್ಜು, ದಡೂತಿ ದೇಹ ಇದೆಲ್ಲದಕ್ಕೂ ಅಡ್ಡಿ ಬರುತ್ತದೆ. ಹೀಗಾಗಿ ಸಣ್ಣಗಾಗಲು ಅನೇಕರು ಹಲವು ವಿಧಧ ಪ್ರಯೋಗ ಮಾಡುತ್ತಾರೆ. ಆದರೆ ಯಾವುದೂ ಫಲ ಕೊಡುವುದಿಲ್ಲ. ಆದರೆ ಸೌತೆಕಾಯಿ(Cucumber) ಯನ್ನು ನೀವು ಹೀಗೆ ಬಳಸುವುದರಿಂದ ತಿಂಗಳಿಗೆ ಭರ್ತಿ 5 ಕೆ.ಜಿಯಷ್ಟು ತೂಕ ಇಳಿಸಬಹುದು.

Advertisement

ಹೌದು, ಸೌತೆಕಾಯಿ ನಮಗೆ ತಂಪನ್ನುಂಟುಮಾಡುವುದಲ್ಲದೆ ನಮ್ಮ ದೇಹದ ತೂಕವನ್ನು ಇಳಿಸಲು ಕೂಡ ಸಹಾಯ ಮಾಡುತ್ತದೆ. ಸೌತೆಕಾಯಿ ತೂಕ ಇಳಿಕೆಗೆ ಬೆಸ್ಟ್ ಮದ್ದು, ಇದನ್ನು ಜ್ಯೂಸ್ ಮಾಡಿ ಕೂಡಿದರೆ ಬೇಗ ಸಣ್ಣಗಾಗಬಹುದು. ಯಾಕೆಂದರೆ ಇದರ ಜ್ಯೂಸ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ತೂಕ ನಿಯಂತ್ರಣ ಮಾಡಲು ಇದರಷ್ಟು ಬೆಸ್ಟ್‌ ಮತ್ತೊಂದಿಲ್ಲ ಎಂದು ಹೇಳಲಾಗುತ್ತದೆ.

ಸೌತೆಕಾಯಿಯಿಂದ ಆಗುವ ಪ್ರಯೋಜನಗಳು :

Advertisement

• ಸೌತೆಕಾಯಿಗಳು ವಿಟಮಿನ್ ಸಿ ಮತ್ತು ಕೆ, ಪೊಟ್ಯಾಸಿಯಮ್, ಮೆಗ್ನಿಸಿಯಮ್, ಸತು, ಪ್ಲೇವನಾಯ್ಡಳು, ಉತ್ಕರ್ಷಣ ನಿರೋಧಕಗಳು ಮತ್ತು ರಂಜಕದಂತಹ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.
• ಡಯೆಟ್ ಫುಡ್‌'ನಲ್ಲಿ ಸೌತೆಕಾಯಿಯನ್ನು ಸೇರಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯೂ ಬಲಗೊಳ್ಳುತ್ತದೆ.
• ಇದರ ಸೇವನೆಯಿಂದ ಮಲಬದ್ಧತೆಯಂತಹ ಸಮಸ್ಯೆಗಳು ಸಹ ದೂರವಾಗುತ್ತೆ.
• ಸೌತೆಕಾಯಿ ದೇಹದಲ್ಲಿನ ನೀರಿನ ಕೊರತೆಯನ್ನು ಹೋಗಲಾಡಿಸುತ್ತದೆ.

Advertisement
Advertisement