ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Pain Killer: ನೀವು ನೋವು ನಿವಾರಕ ಮಾತ್ರಗಳನ್ನು ತೆಗೆದುಕೊಳ್ಳುತ್ತೀರಾ..? ಭವಿಷ್ಯದಲ್ಲಿ ಇದೇ ನಿಮಗೆ ಸಾವು ತರಬಹದು.. ಎಚ್ಚರ..!

Pain-killer ಅಂದರೆ ನೋವು ನಿವಾರಕ. ಇಂದಿನ ಜೀವನವು ತುಂಬಾ ಒತ್ತಡದಿಂದ ಕೂಡಿದೆ. ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ.
03:37 PM Aug 02, 2024 IST | ಸುದರ್ಶನ್
UpdateAt: 03:37 PM Aug 02, 2024 IST
Advertisement

Pain-killer ಅಂದರೆ ನೋವು ನಿವಾರಕ. ಇಂದಿನ ಜೀವನವು ತುಂಬಾ ಒತ್ತಡದಿಂದ ಕೂಡಿದೆ. ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಈ ಬಿಡುವಿಲ್ಲದ ಜೀವನಶೈಲಿಯಿಂದಾಗಿ, ಯಾರಿಗೂ ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ಸಮಯವಿಲ್ಲ, ಆದ್ದರಿಂದ ಅವರು ವಿವಿಧ ರೋಗಗಳನ್ನು ಎದುರಿಸುತ್ತಾರೆ.

Advertisement

ಕೆಲವೊಮ್ಮೆ ಈ ನೋವುಗಳು ಅಸಹನೀಯವಾಗುತ್ತವೆ ಮತ್ತು ಸಮಯದ ಕೊರತೆಯಿಂದಾಗಿ ನೋವು ನಿವಾರಕಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ಅವರು ತಮ್ಮ ಮುಂದಿನ ಕೆಲಸವನ್ನು ಮುಂದುವರಿಸಬಹುದು. ಆದರೆ, ಈ ಮಾತ್ರೆಗಳನ್ನು ತೆಗೆದುಕೊಳ್ಳುವುದು ನೋವಿಗೆ ಅಥವಾ ಕಾಯಿಲೆಗೆ ಶಾಶ್ವತ ಪರಿಹಾರವಲ್ಲ. ಅದು ತಾತ್ಕಾಲಿಕ ಮತ್ತು ಭವಿಷ್ಯದಲ್ಲಿ ಈ ನೋವು ನಿವಾರಕಗಳಿಂದ ಕೆಟ್ಟ ಅಡ್ಡ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದು ಅನೇಕರಿಗೆ ತಿಳಿದಿರುವುದಿಲ್ಲ.

ಜನರು ಏಕೆ ಹೆಚ್ಚು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ?
ನಾವು ನೋವು ಅನುಭವಿಸಿದಾಗ ಮತ್ತು ನೋವು ಅಸಹನೀಯವಾದಾಗ, ನೋವನ್ನು ನಿವಾರಿಸಲು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತೇವೆ. ಈ ಮಾತ್ರೆಗಳು ತಕ್ಷಣದ ಪರಿಹಾರವನ್ನು ನೀಡುತ್ತವೆ ಮತ್ತು ನಿಧಾನವಾಗಿ ನಾವು ಈ ಮಾತ್ರೆಗಳಿಗೆ ಒಗ್ಗಿಕೊಳ್ಳುತ್ತೇವೆ. ನಾವು ಈ ಮಾತ್ರೆಗಳನ್ನು ಸೇವಿಸುವುದನ್ನು ಮುಂದುವರೆಸಿದರೆ, ಇದು ದೀರ್ಘಾವಧಿಯಲ್ಲಿ ನಮಗೆ ಅಪಾಯಕಾರಿಯಾಗಬಹುದು. ಕೆಲವರಿಗೆ ನೋವು ಸಹಿಸುವ ಶಕ್ತಿಯು ಕಡಿಮೆ ಇರುತ್ತದೆ, ತಾಳ್ಮೆ ಇರುವುದಿಲ್ಲ. ಅಂಥವರು ಸ್ವಲ್ಪ ನೋವುಂಟಾದರೂ ತಕ್ಷಣ ಮಾತ್ರೆ ನುಂಗುವ ಅಭ್ಯಾಸ ಹೊಂದಿರುತ್ತಾರೆ.

Advertisement

ನೋವು ನಿವಾರಕ ಮಾತ್ರೆಗಳಿಂದಾಗುವ ಹಾನಿ
- ಅತಿಯಾದ ನೋವು ನಿವಾರಕಗಳನ್ನು ಸೇವಿಸುವುದರಿಂದ ವಯಸ್ಸಾದವನಂತೆ ಕಾಣುತ್ತಾರೆ.
- ಖಾಲಿ ಹೊಟ್ಟೆಯಲ್ಲಿ ಇಂತಹ ಮಾತ್ರೆಗಳನ್ನು ಎಂದಿಗೂ ಸೇವಿಸಬೇಡಿ ಇದರಿಂದ ಜಠರದಲ್ಲಿ ತೀವ್ರ ಆಮ್ಲತೆ ಅಥವಾ ಪಿತ್ತ ಹೆಚ್ಚಾಗುತ್ತದೆ. ಮೊದಲೇ ಪಿಚ್ಚರ್ ಪ್ರಕೃತಿಯವರು ಅಥವಾ ಅಲ್ಸರ್ ಇರುವವರು ಇದ್ದರೆ ತುರ್ತು ಪರಿಸ್ಥಿತಿ ಉಂಟಾಗಬಹುದು.
- ಕಿಡ್ನಿ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಉಂಟಾಗುತ್ತವೆ.
- ಇಂತಹ ಮಾತ್ರೆಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ನಮಗೆ ನರ್ವಸ್, ನಿದ್ರಾಹೀನತೆ, ಚಡಪಡಿಕೆ ಕೂಡ ಹೆಚ್ಚುತ್ತದೆ.
- ಅತಿಯಾಗಿ ನೋವು ನಿವಾರಕಗಳನ್ನು ಸೇವಿಸುವುದರಿಂದ ರಕ್ತದೊತ್ತಡವೂ ಕಡಿಮೆಯಾಗುತ್ತದೆ.

ನೋವು ನಿವಾರಕಗಳನ್ನು ಸೇವಿಸುವುದು ಅನಿವಾರ್ಯವಾಗಿದ್ದಾಗ ಕೆಲವು ವಿಶೇಷ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೀವು ನೋವು ನಿವಾರಕಗಳನ್ನು ತೆಗೆದುಕೊಳ್ಳಬೇಕು.
* ಆಹಾರ ಸೇವಿಸಿದ ನಂತರ ಈ ಮಾತ್ರೆಗಳನ್ನು ತೆಗೆದುಕೊಳ್ಳಿ.
* ಸಾಧ್ಯವಾದಷ್ಟು ಕಡಿಮೆ ನೋವು ನಿವಾರಕಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ.
* ನೋವು ಒಂದೇ ಆಗಿದ್ದರೆ ಮತ್ತು ಇದು ಅಸಹನೀಯವಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ. ನೋವು ನಿವಾರಕಗಳನ್ನು ಯಾವಾಗಲೂ ನೀರಿನೊಂದಿಗೆ ತೆಗೆದುಕೊಳ್ಳಬೇಕು.
* ನೋವು ನಿವಾರಕ ಮಾತ್ರೆಗಳನ್ನು ಯಾವಾಗಲೂ ವೈದ್ಯರ ಸಲಹೆಯೊಂದಿಗೆ ತೆಗೆದುಕೊಳ್ಳಬೇಕು.

Actress Rekha: ʼ ನನಗೆ ಮೂರು ಮದುವೆಯಾಗಿದೆ ಅದಕ್ಕೇ ಹಣೆಗೆ ಸಿಂಧೂರ ಹಚ್ಚುತ್ತೇನೆ’ ಸತ್ಯ ಬಿಚ್ಚಿಟ್ಟ ನಟಿ ರೇಖಾ!

Advertisement
Advertisement