ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Watermelon : ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿಂದ್ರೆ ಇಷ್ಟೆಲ್ಲಾ ಲಾಭ ಇದೆ ಗೊತ್ತಾ?!

01:24 PM Mar 09, 2024 IST | ಹೊಸ ಕನ್ನಡ

Watermelon : ಮಾರುಕಟ್ಟೆಯಲ್ಲಿ ಈಗ ಎಲ್ಲಿ ನೋಡಿದರೂ ಕಲ್ಲಂಗಡಿ(Watermelon)ಹಣ್ಣಿನದೇ ಕಾರುಬಾರು. ಬಿರು ಬೇಸಿಗೆಯ ದಾಹ ತಣಿಸಲು ಕಲ್ಲಂಗಡಿ ಹಣ್ಣು ಬೆಸ್ಟ್‌. ಇದನ್ನು ತಿನ್ನುವುದರಿಂದ ದೇಹ ತಂಪಾಗುವುದು ಮಾತ್ರವಲ್ಲ, ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಸಿಹಿಯಾದ ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದರೆ ಆಹಾ ಎನ್ನಿಸುವುದು ಸುಳ್ಳಲ್ಲ. ಆದರೆ ಬೇಸಗೆಯಲ್ಲಿ ಕಲ್ಲಂಗಡಿ ತಿಂದರೆ ಎಷ್ಟೊಂದು ಲಾಭ ಇದೆ ಗೊತ್ತಾ?

Advertisement

 

ಹೌದು, ಕಲ್ಲಂಗಡಿ ಹಣ್ಣು ನಮ್ಮನ್ನು ಸದಾ ತಂಪಾಗಿರಿಸುತ್ತೆ ಎಂಬುದು ಸತ್ಯ. ಅದರೊಂದಿಗೆ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಿದರೆ ಬೇಸಿಗೆಯಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಕಲ್ಲಂಗಡಿ ಸೇವನೆಯಿಂದ ಆಗುವ ಲಾಭಗಳೇನು ಎಂಬುದನ್ನು ಈಗ ತಿಳಿಯೋಣ.

Advertisement

 

• ನಿರ್ಜಲೀಕರಣಕ್ಕೆ(Dehydration) ರಾಮಬಾಣ:

ಬೇಸಿಗೆಯಲ್ಲಿ ಎಷ್ಟೇ ನೀರು ತೆಗೆದುಕೊಂಡರೂ ಈ ಸಮಸ್ಯೆ ಎದುರಾಗುತ್ತದೆ. ಅದರಲ್ಲೂ ಹೊರಗೆ ಓಡಾಡುವವರು ನಿರ್ಜಲೀಕರಣಕ್ಕೆ ತುತ್ತಾಗುತ್ತಾರೆ. ಹಾಗಾಗಿ ಬೇಸಿಗೆಯಲ್ಲಿ ಕಲ್ಲಂಗಡಿ ಸೇವಿಸಬೇಕು ಎನ್ನುತ್ತಾರೆ. ಕಲ್ಲಂಗಡಿಯಲ್ಲಿ ಶೇ. 92 ರಷ್ಟು ನೀರು ಇರುತ್ತದೆ.

 

• ತೂಕ ಇಳಿಸಲು ಸಹಾಯಕ:

ಕಲ್ಲಂಗಡಿ ಕ್ಯಾಲೋರಿಗಳಲ್ಲಿ ತುಂಬಾ ಕಡಿಮೆಯಾಗಿದೆ. ಇದಲ್ಲದೆ, ಕಲ್ಲಂಗಡಿ ತಿಂದ ತಕ್ಷಣ ಪೂರ್ಣತೆಯ ಭಾವನೆ ಉಂಟಾಗುತ್ತದೆ. ತೂಕ ಕಡಿಮೆ ಮಾಡುವಲ್ಲಿ ಕಲ್ಲಂಗಡಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.

 

• ಚರ್ಮದ ಕಾಂತಿ ಕಾಪಾಡುತ್ತದೆ.

ಇದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಹೀಗಾಗಿ ವಾಟರ್ ಮಿಲನ್ ಚರ್ಮದ ಸಮಸ್ಯೆಗಳಿಗೆ ಪವಾಡ ಪರಿಹಾರವಾಗಿಯೂ ಕಾರ್ಯನಿರ್ವಹಿಸುತ್ತದೆ.

 

• ಕ್ಯಾನ್ಸರ್(Cancer)ತಡೆಯುತ್ತದೆ:

ವಾಟರ್ ಮಿಲನ್‌ನಲ್ಲಿರುವ ವಿಟಮಿನ್ ಸಿ, ಕ್ಯಾರೊಟಿನಾಯ್ಡ್, ಲೈಕೋಪೀನ್, ಕುಕುರ್ಬಿಟಾಸಿನ್ ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಿಂದ ಕ್ಯಾನ್ಸರ್‌ನಂತಹ ತೊಂದರೆಗಳನ್ನು ತಡೆಯಬಹುದು.

 

• ಜೀರ್ಣಕ್ರಿಯೆಗೆ ನೆರವಾಗುತ್ತದೆ:

ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಲ್ಲಂಗಡಿ ಅತ್ಯುತ್ತಮ ಆಯ್ಕೆ ಎಂದೂ ಹೇಳಬಹುದು. ಫೈಬರ್ ಕರುಳಿನ ಆರೋಗ್ಯವನ್ನು ಧೃಢಗೊಳಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯಿಂದ ತ್ಯಾಜ್ಯವನ್ನು ಹೊರಹಾಕುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಇದನ್ನೂ ಓದಿ : ಬೇಸಿಗೆಗೆ ನಿಮ್ಮ ಮುಖದ ಕಾಂತಿಯನ್ನು ಹೀಗೆ ಕಾಪಾಡಿಕೊಳ್ಳಿ,ಸಿಂಪಲ್ ಟಿಪ್ಸ್ ಫಾಲೋ ಮಾಡಿ

Advertisement
Advertisement
Next Article