Diamonds in Noodles: ನ್ಯೂಡಲ್ಸ್ ಪ್ಯಾಕೆಟ್‌ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಸಾಗಣೆ; ವ್ಯಕ್ತಿಯ ಬಂಧನ
Diamonds in Noodles: ವಿಮಾನ ನಿಲ್ದಾಣದಲ್ಲಿ ಯಾವ ಯಾವ ರೂಪದಲ್ಲಿ ಚಿನ್ನ ಕಳ್ಳ ಸಾಗಾಣೆ ಮಾಡುವ ವಿವಿಧ ಸುದ್ದಿಗಳನ್ನು ನೀಡುವ ಓದಿರಬಹುದು. ಅಂತಹುದೇ ಒಂದು ವಿಚಿತ್ರ ಘಟನೆಯೊಂದು ಇದೀಗ ಮುಂಬೈ ಏರ್‌ಪೋರ್ಟ್ ನಲ್ಲಿ ನಡೆದಿದೆ. ಮುಂಬೈ ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ 4 ಕೋಟಿ 44 ಲಕ್ಷ ಮೌಲ್ಯದ ಚಿನ್ನ ಮತ್ತು 2 ಕೋಟಿ 2 ಲಕ್ಷ ಮೌಲ್ಯದ ವಜ್ರಗಳನ್ನು ವಶಪಡಿಸಿಕೊಂಡಿರುವ ಘಟನೆಯೊಂದು ನಡೆದಿದೆ. ಅಷ್ಟಕ್ಕೂ ಈ ಕಳ್ಳಸಾಗಾಣೆ ಮಾಡುತ್ತಿದ್ದ ವ್ಯಕ್ತಿ ಇವುಗಳನ್ನು ಬಚ್ಚಿಟ್ಟದ್ದು ಎಲ್ಲಿ ಗೊತ್ತೇ? ನೂಡಲ್ಸ್ ಪ್ಯಾಕೆಟ್‌ನಲ್ಲಿ.
ಏಪ್ರಿಲ್ 19 ರಂದು ಈ ಘಟನೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಆರೋಪಿ ಮುಂಬೈಗೆ ಬರುತ್ತಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಅನುಮಾನಾಸ್ಪದವಾಗಿ ವರ್ತನೆ ಮಾಡುತ್ತಿದ್ದು, ಈತನನ್ನು ವಿಚಾರಣೆ ಮಾಡಿದಾಗ, ಈತನ ಲಗೇಜ್ ಹಾಗೂ ಬ್ಯಾಗ್ ಗಳನ್ನು ಪರಿಶೀಲಿಸಿದಾಗ ನೂಡಲ್ಸ್ ಪ್ಯಾಕೆಟ್ ನಲ್ಲಿ ಬಚ್ಚಿಟ್ಟಿದ್ದ ವಜ್ರ ಪತ್ತೆಯಾಗಿದೆ. ಆರೋಪಿ ಬೆಂಗಳೂರಿನಿಂದ ವಿಮಾನ ಹತ್ತಿ ಮುಂಬೈಗೆ ಬಂದಿಳಿದಿದ್ದರು ಮತ್ತು ಬ್ಯಾಂಕಾಕ್‌ಗೆ ಸಂಪರ್ಕ ವಿಮಾನವನ್ನು ತೆಗೆದುಕೊಳ್ಳಬೇಕಾಗಿತ್ತು. ಮಾಹಿತಿ ಪ್ರಕಾರ ಆರೋಪಿಗಳು ವಜ್ರಗಳನ್ನು ಬ್ಯಾಂಕಾಕ್‌ನಲ್ಲಿರುವ ವ್ಯಕ್ತಿಗೆ ಹಸ್ತಾಂತರಿಸಬೇಕಿತ್ತು.
ವಿಚಾರಣೆ ವೇಳೆ ತಾನು ಬ್ಯಾಂಕಾಕ್‌ನಲ್ಲಿ ವಜ್ರಗಳನ್ನು ಡೆಲಿವರಿ ಮಾಡಲು ಹೊರಟಿದ್ದು, ಕೇವಲ ಡೆಲಿವರಿ ಬಾಯ್ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ಕರ್ನಾಟಕದ ಅಲಿಪುರ ನಿವಾಸಿ 28 ವರ್ಷದ ಸಯೀದ್ ಜಾಫರ್ ಎಂದು ಪೊಲೀಸರು ಗುರುತಿಸಿದ್ದಾರೆ.
ಇದನ್ನೂ ಓದಿ: Vitla: ಬಾವಿಯೊಳಗೆ ಆಕ್ಸಿಜನ್ ಕೊರತೆ; ರಿಂಗ್ ಕಾರ್ಮಿಕರ ಸಾವು