For the best experience, open
https://m.hosakannada.com
on your mobile browser.
Advertisement

Child Death: ಬರ್ತ್ ಡೇ ಕೇಕ್ ತಿಂದು ಬಾಲಕಿ ಸಾವು ಪ್ರಕರಣ: ಕೇಕ್ ನಲ್ಲಿ ಹೆಚ್ಚಿನ ಪ್ರಮಾಣದ ಸಿಹಿ ರುಚಿ ಪತ್ತೆ

Child Death: ಪಂಜಾಬ್ ನ 10 ವರ್ಷದ ಬಾಲಕಿ ಮಾನ್ವಿ ಎಂಬಾಕೆ ತನ್ನ ಹುಟ್ಟುಹಬ್ಬದಂದು ಕೇಕ್ ತಿಂದು ಸಾವನ್ನಪ್ಪಿದ ಘಟನೆಯೊಂದು ಇತ್ತೀಚೆಗೆ ನಡೆದಿತ್ತು
12:12 PM Apr 23, 2024 IST | ಸುದರ್ಶನ್
UpdateAt: 12:26 PM Apr 23, 2024 IST
child death  ಬರ್ತ್ ಡೇ ಕೇಕ್ ತಿಂದು ಬಾಲಕಿ ಸಾವು ಪ್ರಕರಣ  ಕೇಕ್ ನಲ್ಲಿ ಹೆಚ್ಚಿನ ಪ್ರಮಾಣದ ಸಿಹಿ ರುಚಿ ಪತ್ತೆ

Child Death: ಪಂಜಾಬ್ ನ 10 ವರ್ಷದ ಬಾಲಕಿ ಮಾನ್ವಿ ಎಂಬಾಕೆ ತನ್ನ ಹುಟ್ಟುಹಬ್ಬದಂದು ಕೇಕ್ ತಿಂದು ಸಾವನ್ನಪ್ಪಿದ ಘಟನೆಯೊಂದು ಇತ್ತೀಚೆಗೆ ನಡೆದಿತ್ತು. ಈ ದುರಂತದ ನಂತರ ಜನರು ಕೇಕ್ ತಿನ್ನೋಕೆ ಹೆದರುವಂತಹ ಪರಿಸ್ಥಿತಿ ಉಂಟು ಮಾಡಿತ್ತು.

Advertisement

ಇದನ್ನೂ ಓದಿ:  Helicopters Collide in Malaysia: ಆಕಾಶದಲ್ಲೇ ಡಿಕ್ಕಿ ಹೊಡೆದ ಎರಡು ಹೆಲಿಕಾಪ್ಟರ್‌ಗಳು; 10 ಮಂದಿ ಸಾವು

ಮೃತಪಟ್ಟ ಬಾಲಕಿಯ ಮರೋಣೋತ್ತರ ಪರೀಕ್ಷೆಯಲ್ಲಿ ಇದೀಗ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಬಾಲಕಿ ತಿಂದ ಕೇಕ್ ನ್ನು ಆರೋಗ್ಯ ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿದ್ದು, ಇದೀಗ ಅದರಲ್ಲಿ ಹೆಚ್ಚಿನ ಪ್ರಮಾಣದ ಸಿಹಿ ರುಚಿಯ ಸಿಂಥೆಟಿಕ್ ಅನ್ನು ಬಳಸಲಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಅತಿಯಾಗಿ ಕೇಕ್ ತಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

Advertisement

ಇದನ್ನೂ ಓದಿ:  Money Rules Changing: ಮೇ 1 ರಿಂದ ಹಣಕ್ಕೆ ಸಂಬಂಧಿಸಿದ ಈ ನಿಯಮಗಳ ಬದಲಾವಣೆ; ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ

ಆರೋಗ್ಯ ಅಧಿಕಾರಿ, ಡಿಎಚ್‌ಒ ಡಾ ವಿಜಯ್ ಜಿಂದಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಸ್ಯಾಕ್ರರಿನ್ ಅನ್ನು ಆಹಾರ ಮತ್ತು ಪಾನೀಯಗಳಲ್ಲಿ ಬಳಸಿದರೆ ರಕ್ತದಲ್ಲಿನ ಗ್ಲೋಕೋಸ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುವಲ್ಲಿ ಇದು ಕಾರಣವಾಗುತ್ತದೆ. ಹೀಗಾಗಿ ಸಾವುಗಳು ಕೂಡ ಸಂಭವಿಸಬಹುದು ಎಂದು ತಿಳಿಸಿದ್ದಾರೆ.

Advertisement
Advertisement