For the best experience, open
https://m.hosakannada.com
on your mobile browser.
Advertisement

Death News: ಕೆರೆ ಸ್ವಚ್ಚಗೊಳಿಸುವಾಗ ನೀರಲ್ಲಿ ಮುಳುಗಿ ವ್ಯಕ್ತಿ ಸಾವು

Death News: ಕೆರೆಯಲ್ಲಿ ಕಸ ಹಾಗೂ ಸತ್ತಿರುವ ಮೀನುಗಳನ್ನು ತೆಗೆದು ಸ್ವಷ್ಷಗೊಳಿಸಲು ಕೆರೆಗೆ ಇಳಿದು ಕೆಲಸ ನಿರ್ವಹಿಸುತ್ತಿದ್ದಾಗ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟ
07:42 AM Apr 23, 2024 IST | ಸುದರ್ಶನ್
UpdateAt: 09:36 AM Apr 23, 2024 IST
death news  ಕೆರೆ ಸ್ವಚ್ಚಗೊಳಿಸುವಾಗ ನೀರಲ್ಲಿ ಮುಳುಗಿ ವ್ಯಕ್ತಿ ಸಾವು

Advertisement

ಕಾಣಿಯೂರು: ಕೆರೆಯಲ್ಲಿ ಕಸ ಹಾಗೂ ಸತ್ತಿರುವ ಮೀನುಗಳನ್ನು ತೆಗೆದು ಸ್ವಷ್ಷಗೊಳಿಸಲು ಕೆರೆಗೆ ಇಳಿದು ಕೆಲಸ ನಿರ್ವಹಿಸುತ್ತಿದ್ದಾಗ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ‌ ಕಾಯಿಮಣ ಗ್ರಾಮದ ಅನವುಮೂಲೆ ಎಂಬಲ್ಲಿ ಸೋಮವಾರ ನಡೆದಿದೆ.

ಮೃತಪಟ್ಡವರನ್ನು ಅನವುಮೂಲೆ ನಿವಾಸಿ ಜಗದೀಶ (41) ಎಂದು ಗುರುತಸಲಾಗಿದೆ.

Advertisement

ಇದನ್ನೂ ಓದಿ:  Revenue Department : ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ - ಸರ್ಕಾರದ ಖಡಕ್ ಆದೇಶ !!

ಇವರು ತಮ್ಮ ತೋಡಿನಲ್ಲಿದ್ದ ಕೆಲವು‌ ಮೀನುಗಳನ್ನು‌ ಭಾನುವಾರ ಇವರ ತೋಟದ ಕೆರೆಗೆ ತಂದು ಬಿಟ್ಟಿದ್ದರು.‌ ಆದರೆ ಅವುಗಳು ಸೋಮವಾರ ಸತ್ತು ಹೋಗಿದ್ದವು ಇವುಗಳನ್ನು‌ಹಾಗೂ ಕೆರೆಯಲ್ಲಿದ್ದ ಕಸಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಕೆರೆಗೆ ಇಳಿದಿದ್ದರು. ಆದರೆ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿದ್ದರು.ಈ ಬಗ್ಗೆ ಮೃತರ ಪತ್ನಿ ಸುಪ್ರೀತ ನೀಡಿದ ದೂರಿನಂತೆ ಬೆಳ್ಳಾರೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:  Health Tips: ಈರುಳ್ಳಿ ತಿಂದಾಗ ಬಾಯಿ ವಾಸನೆಯನ್ನು ಹೀಗೆ ನಿವಾರಣೆ ಮಾಡಿ !!

Advertisement
Advertisement