Dharmasthala: ಶಿವರಾತ್ರಿ ಬೆನ್ನಲ್ಲೇ ಧರ್ಮಸ್ಥಳ ಭಕ್ತರಿಗೆ ವಿಶೇಷ ಮಾಹಿತಿ !!
Dharmasthala ಶ್ರೀ ಮಂಜುನಾಥ ಸ್ವಾಮಿಯ ಭಕ್ತಾದಿಗಳಿಗೆ ಮಹತ್ವದ ಮಾಹಿತಿಯೊಂದನ್ನು ನಾವಿಲ್ಲಿ ತಿಳಿಸಲು ಹೊಟಿದ್ದೇವೆ. ಅದೇನೆಂದರೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸಾಮಾನ್ಯ ಸೇವೆಗಳ ದರಪಟ್ಟಿ ಇಲ್ಲಿದೆ.
ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ಪವಿತ್ರ ಕ್ಷೇತ್ರವೆಂದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ. ಭಕ್ತಾದಿಗಳು ಕ್ಷೇತ್ರಕ್ಕೆ ಬಂದ ಸಂದರ್ಭದಲ್ಲಿ ಕೆಲವು ವಿಚಾರಗಳಲ್ಲಿ ಗೊಂದಲಕ್ಕೊಳಗಾಗುತ್ತಾರೆ. ಅಂತೆಯೇ ಯಾವ ಯಾವ ಸೇವೆಗಳು ಲಭ್ಯವಿದೆ ಎಂಬ ಮಾಹಿತಿಯೂ ಜನಸಂದಣಿಯಿಂದ ತಿಳಿಯುವದಿಲ್ಲ. ಇನ್ನೇನು ಕೆಲವೇ ಸಮಯದಲ್ಲಿ ಬೇಸಿಗೆ ರಜೆ ಶುರುವಾಗಲಿದ್ದು ಸಾಗರೋಪಾದಿಯಲ್ಲಾ ಭಕ್ತಾದಿಗಳು ಕ್ಷೇತ್ರಕ್ಕೆ ಬರುತ್ತಾರೆ. ಹೀಗಾಗಿ ಮೊದಲೇ ನಾವು ಇಲ್ಲಿ ಲಭ್ಯವಿರುವ ಸೇವೆಗಳ ವಿವರವನ್ನು ತಿಳಿಯಪಡಿಸುತ್ತೇವೆ.
ಶ್ರೀ ಗಣಪತಿ ದೇವರ ಸೇವೆಗಳು
• ಪಂಚಾಮೃತ ಅಭಿಷೇಕ-150 ರೂಪಾಯಿ
• ಪಂಚಕಜ್ಜಾಯ-20 ರೂಪಾಯಿ
• ಅಪ್ಪ ನೈವೇದ್ಯ-20 ರೂಪಾಯಿ
• ಮಂಗಳಾರತಿ-2 ರೂಪಾಯಿ
ಶ್ರೀ ಮಂಜುನಾಥ ಸ್ವಾಮಿಯ ಸೇವೆಗಳು
• ಶತರುದ್ರಾಭಿಷೇಕ-500 ರೂಪಾಯಿ
• ಪಂಚಾಮೃತ ಅಭಿಷೇಕ, ಏಕಾದಶ ರುದ್ರಾಭಿಷೇಕ, ಸಹಿತ ಬ್ರಹ್ಮಾದಾಯ, ಬ್ರಹ್ಮಾರ್ಪಣೆ ಕೂಡಾ-250 ರೂಪಾಯಿ
• ಶ್ರೀ ಪ್ರಸಾದ-70 ರೂಪಾಯಿ
• ಬಿಲ್ವಪತ್ರಾರ್ಚನೆ- 10 ರೂಪಾಯಿ
• ತೀರ್ಥ ಬಾಟ್ಲಿ- 20 ರೂಪಾಯಿ
ಶ್ರೀ ಅಣ್ಣಪ್ಪ ಸ್ವಾಮಿಯ ಸೇವೆಗಳು
• ವಿಶೇಷ ಪೂಜೆ ಬಲಿವಾಡ ಸಹಿತ-100 ರೂಪಾಯಿ
• ಬೆಲ್ಲಕಾಯಿ ನೈವೇದ್ಯ-20 ರೂಪಾಯಿ
• ಕರ್ಪೂರಾರತಿ-2 ರೂಪಾಯಿ
ಶ್ರೀ ಅಮ್ಮನವರ ಸೇವೆಗಳು
• ಪವಮಾನಾಭಿಷೇಕ-500 ರೂಪಾಯಿ
• ಹೂವಿನ ಪೂಜೆ- 300 ರೂಪಾಯಿ
• ಪಂಚಾಮೃತ ಅಭಿಷೇಕ-150 ರೂಪಾಯಿ
• ಕುಂಕುಮಾರ್ಚನೆ-20 ರೂಪಾಯಿ
• ಕರ್ಪೂರಾರತಿ-2 ರೂಪಾಯಿ