For the best experience, open
https://m.hosakannada.com
on your mobile browser.
Advertisement

Explosives Found : ಬೆಂಗಳೂರಿನ ಶಾಲೆ ಬಳಿ ಬೃಹತ್‌ ಪ್ರಮಾಣದ ಸ್ಫೋಟಕ ಪತ್ತೆ; ಚುನಾವಣೆ ಸಮಯದಲ್ಲಿ ಆತಂಕ ಸೃಷ್ಟಿಸಿದ ಕೃತ್ಯ

11:40 AM Mar 19, 2024 IST | ಹೊಸ ಕನ್ನಡ
UpdateAt: 11:50 AM Mar 19, 2024 IST
explosives found   ಬೆಂಗಳೂರಿನ ಶಾಲೆ ಬಳಿ ಬೃಹತ್‌ ಪ್ರಮಾಣದ ಸ್ಫೋಟಕ ಪತ್ತೆ  ಚುನಾವಣೆ ಸಮಯದಲ್ಲಿ ಆತಂಕ ಸೃಷ್ಟಿಸಿದ ಕೃತ್ಯ
Advertisement

ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ  ಬ್ಲಾಸ್ಟ್ ಪ್ರಕರಣ ಮಾಸುವ ಮುನ್ನವೇ ಇದೀಗ ಬೆಂಗಳೂರಿನಲ್ಲಿ ಶಾಲೆಯೊಂದರ ಬಳಿ ಸ್ಪೋಟಕಗಳು ಪತ್ತೆಯಾಗಿರುವುದನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ.

Advertisement

ಇದನ್ನೂ ಓದಿ: Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ; ಕಾಲುಗಳಿಗೆ ಗಂಭೀರ ಗಾಯ

ಬೆಳ್ಳಂದೂರಿನ ಪ್ರಕ್ರಿಯಾ ಶಾಲೆ ಮುಂಬಾಗದ ಖಾಲಿ ಜಮೀನಿನಲ್ಲಿ ಬಾಂಬ್ ತಯಾರಿಸಲು ಬಳಸುವ ಜಿಲೆಟಿನ್ ಕಡ್ಡಿ, ಡಿಟೋನೇಟರ್ ಹಾಗೂ ಇತರ ಕೆಲವು ವಸ್ತುಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

Advertisement

ಇದನ್ನೂ ಓದಿ: Accident: ಬಸ್‌ ಪಲ್ಟಿ; ಚಾಲಕ ಸಾವು, ವಿದ್ಯಾರ್ಥಿಗಳು ಸೇರಿ 20 ಮಂದಿಗೆ ಗಾಯ

ಸ್ಫೋಟಕಗಳನ್ನು ಟ್ರಾಕ್ಟರ್ ಒಂದರಲ್ಲಿ ಇಟ್ಟಿರುವುದು ಕಂಡು ಬಂದಿದ್ದು ಮೇಲ್ನೋಟಕ್ಕೆ ಕಟ್ಟಡ ನಿರ್ಮಾಣ ಮಾಡುವ ಜಾಗದಲ್ಲಿ ಬಂಡೆಗಳ ಸ್ಫೋಟಿಸಲು ಸ್ಫೋಟಕಗಳನ್ನು ತಂದಿರುವ ಸಾಧ್ಯತೆ ಇದೆ ಎನ್ನಲಾಗಿದ್ದರೂ ಪೊಲೀಸರ ವಿಶೇಷ ತಂಡ ಸ್ಪೋಟಕಗಳ ಕುರಿತು ತನಿಖೆ ಆರಂಭಿಸಿದೆ.

ಟ್ರ್ಯಾಕ್ಟರ್ ಅನ್ನು ಅಕ್ರಮ ವಸ್ತುಗಳನ್ನು ಸಾಗಿಸುವುದಕ್ಕಾಗಿ ಬಳಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಸ್ಫೋಟಕಗಳ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಈ ಘಟನೆಗಳಿಗೆ ಸಂಬಂಧಿಸಿದಂತೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement
Advertisement