covishield vaccine: ಕೋವಿಶೀಲ್ಡ್ ಅಡ್ಡಪರಿಣಾಮ: ಸುಪ್ರೀಂ ಕೋರ್ಟ್ ಗೆ ಅರ್ಜಿ
covishield vaccine: ಜನರಲ್ಲಿ ಆತಂಕ ಮೂಡಿಸಿರುವ ಕೋವಿಡ್ ಪ್ರತಿರೋಧಕ ಲಸಿಕೆ ಕೋವಿಶೀಲ್ಡ್ ಅಡ್ಡ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ಇದನ್ನೂ ಓದಿ: Iphone 14: ಫ್ಲಿಪ್‌ಕಾರ್ಟ್‌ನಲ್ಲಿ ಬಂಪರ್ ಆಫರ್- ಊಹಿಸದಷ್ಟು ಕಡಿಮೆ ಬೆಲೆಗೆ ಸಿಗ್ತಿದೆ Apple iPhone 14 !!
ಕೋವಿಶೀಲ್ಡ್ ಅಭಿವೃದ್ಧಿಪಡಿಸಿದ ಲಸಿಕೆ ಆಸ್ಟ್ರಾಜೆನಿಕಾ ಔಷಧ ತಯಾರಿಕಾ ಕಂಪನಿಯು ಬ್ರಿಟನ್ ಕೋರ್ಟ್‌ನಲ್ಲಿ ಇತ್ತೀಚೆಗೆ ಕೆಲವು ಅಪರೂಪದ ಪ್ರಕರಣಗಳಲ್ಲಿ ಲಸಿಕೆಯಿಂದ ಅಡ್ಡಪರಿಣಾಮಗಳಾಗಿವೆ ಎಂಬ ಸಂಗತಿಯನ್ನು ಒಪ್ಪಿಕೊಂಡಿತ್ತು. ರಕ್ತ ಹೆಪ್ಪುಗಟ್ಟುವಿಕೆ ಇಲ್ಲವೇ ಪ್ಲೇಟ್‌ಲೆಟ್‌ಗಳ ಸಂಖ್ಯೆ ಇಳಿಕೆಯಾಗುವ ಲಕ್ಷಣ ಕಾಣಿಸಿಕೊಳ್ಳಬಹುದು ಎಂದು ಹೇಳಿತ್ತು.
ಇದನ್ನೂ ಓದಿ: SSLC Result: 8 ಕ್ಕೆ SSLC ರಿಸಲ್ಟ್?
ವಕೀಲ ವಿಶಾಲ್ ತಿವಾರಿ, "ಭಾರತದಲ್ಲಿ ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳ ಕುರಿತು ಅಧ್ಯಯನ ನಡೆಸಲು ದಿಲ್ಲಿಯ ಏಮ್ಸ್ ತಜ್ಞರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಸರಕಾರಕ್ಕೆ ಆದೇಶಿಸಬೇಕು. ಲಸಿಕೆ ಪಡೆದವರಲ್ಲಿ ಯಾರಾದರೂ ಅಂಗವಿಕಲರಾಗಿದ್ದರೆ, ಮೃತಪಟ್ಟಿದ್ದರೆ ಅಂಥ ಕುಟುಂಬಗಳಿಗೆ ಪರಿಹಾರ ನೀಡುವಂತೆ ಸರಕಾರಕ್ಕೆ ಆದೇಶಿಸಬೇಕು,'' ಎಂದು ಕೋರಿದ್ದಾರೆ.