ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

CoviShield Vaccine: ಪುನೀತ್ ರಾಜಕುಮಾರ್ ಸಾವಿಗೆ ಕೊರೋನ ವ್ಯಾಕ್ಸಿನ್ ಕಾರಣವೇ ?! ಅಸಲಿ ಸತ್ಯ ಬಿಚ್ಚಿಟ್ಟ ಡಾ. ಅಂಜನಪ್ಪ

Covishield Vaccine: ಪುನೀತ್ ರಾಜ್ ಕುಮಾರ್(Puneeth Rajkumar) ನನ್ನು ನಾವು ಇದೇ ಕಾರಣಕ್ಕೆ ಕಳೆದುಕೊಂಡ್ವಿ ಅನ್ನೋ ವಿಚಾರ ಕೂಡ ಚರ್ಚೆಗೆ ಬಂದಿದೆ. ಹಾಗಿದ್ರೆ ಏನಿದರ ಸತ್ಯಾಸತ್ಯತೆ?
09:29 AM May 04, 2024 IST | ಸುದರ್ಶನ್
UpdateAt: 10:02 AM May 04, 2024 IST
Advertisement

CoviShield Vaccine: ಕೊರೊನಾ ಸಂಕಷ್ಟ ಕಾಲದಲ್ಲಿ ದೇಶದ ಜನತೆಗೆ ಸಂಜೀವಿನಿಯಂತಾಗಿದ್ದ ಪೈಕಿ ಕೋವಿಶೀಲ್ಡ್(( CoviShield vaccine ) ಲಸಿಕೆ ಕೂಡ ಒಂದು. ಭಾರತದಲ್ಲಿ ನೀಡಿದ್ದ ಲಸಿಕೆಯಲ್ಲಿ ಕೋವಿಶೀಲ್ಡ್ ಕೂಡಾ ಒಂದಾಗಿತ್ತು. ಆಕ್ಸ್‌ಫರ್ಡ್‌ ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ ಈ ಲಸಿಕೆಯನ್ನು ಅಭಿವೃದ್ಧಿ ಮಾಡಲಾಗಿತ್ತು. ಆದರೀಗ ಈ ಲಸಿಕೆ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಸಾಕಷ್ಟು ಅಡ್ಡಪರಿಣಾಮವನ್ನು ಬೀರುತ್ತಾ? ಎಂಬ ಭೀತಿ ಎದುರಾಗಿದೆ. ಅಷ್ಟೇ ಅಲ್ಲದೆ ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್ ಕುಮಾರ್(Puneeth Rajkumar) ನನ್ನು ನಾವು ಇದೇ ಕಾರಣಕ್ಕೆ ಕಳೆದುಕೊಂಡ್ವಿ ಅನ್ನೋ ವಿಚಾರ ಕೂಡ ಚರ್ಚೆಗೆ ಬಂದಿದೆ. ಹಾಗಿದ್ರೆ ಏನಿದರ ಸತ್ಯಾಸತ್ಯತೆ?

Advertisement

ಇದನ್ನೂ ಓದಿ: 7th Pay Commission: ಕೇಂದ್ರ ನೌಕರರಿಗೆ ಭತ್ಯೆಗಳ ಏರಿಕೆ

ಮೇ 2ರಂದು ಚಿಕ್ಕಬಳ್ಳಾಪುರದಲ್ಲಿರುವ(Chikkaballapura) ಸಿದ್ದರಾಮಯ್ಯ ಕಾನೂನು ಕಾಲೇಜಿನ ಪ್ರಾಂಶುಪಾಲರು, ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕೆಲವೊಂದು ಎಚ್ಚರಿಕೆ ಮತ್ತು ಕೆಲವೊಂದು ಅಂಶಗಳನ್ನು ಪಾಲಿಸಬೇಕೆಂದು ಸರ್ಕ್ಯೂಲರ್ ಹೊರಡಿಸಿದ್ದಾರೆ, ಆ ಪತ್ರ ಈಗ ವೈರಲ್ ಆಗಿದೆ. ಅದರಲ್ಲಿ ಆರೋಗ್ಯ ಇಲಾಖೆಯು ತಿಳಿಸಿರುವ ಮಾಹಿತಿಯ ಪ್ರಕಾರ, ಎಲ್ಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ರೀತಿಯ ಫ್ರಿಜ್ ನೀರು,ಎಸ್ ಕ್ರೀಮ್ ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು. ಏಕೆಂದರೆ ಕೋವಿಡ್ ಸಮಯದಲ್ಲಿ ಕೋವಿಡ್ ಶೀಲ್ಡ್ ಹಾಕಿಸಿಕೊಂಡಿರುವ ಪರಿಣಾಮ ರಕ್ತ ಹೆಪ್ಪುಗಟ್ಟುವುದು ದಿಡೀರ್ ಹೃದಯಾಘಾತ ಸಂಭವಿಸಿ ಪ್ರಾಣಹಾನಿಯಾಗುತ್ತಿದೆ.

Advertisement

ಇದನ್ನೂ ಓದಿ: APL Card: ಪಡಿತರ ಚೀಟಿ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ; ಜೂನ್ ನಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ

ಹಾಗಾಗಿ ಮೇಲೆ ತಿಳಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು ಹಾಗೂ ತಮ್ಮ ಪೋಷಕರಿಗೆ ಮತ್ತು ಇತರರಿಗೆ ಪಾಲಿಸಲು ಹೇಳುವುದು. ಇನ್ನೂ ಎರಡು ತಿಂಗಳು ಬೇಸಿಗೆ ಹೆಚ್ಚಾಗುತ್ತಿರುವ ಕಾರಣದಿಂದ ಬಿಸಿಲು ಹೆಚ್ಚಾಗಿ (ಸನ್ ಸ್ಟೋಕ್) ಸೂರ್ಯಾಘಾತ ಒಡೆಯುತ್ತಿದೆ. ಆದ್ದರಿಂದ ಎಲ್ಲರೂ ತಲೆಯ ಮೇಲೆ ಟೋಪಿ ಅಥವಾ ಬಟ್ಟೆ ಅಥವಾ ಭತ್ತಿ ಹಿಡಿದು ಓಡಾಡಬೇಕೆಂದು ಸೂಚಿಸಲಾಗಿದೆ. ಈ ವಿಷಯವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸುತ್ತ ತಮ್ಮ ಪೋಷಕರಿಗೆ ಮತ್ತು ಇತರರಿಗೆ ತಿಳಿಸಬೇಕೆಂದು ಕೋರಲಾಗಿದೆ' ಎಂದು ಬರೆಯಲಾಗಿದೆ. ಈ ವಿಚಾರ ಭಾರೀ ಸಂಚಲನ ಸೃಷ್ಟಿಸಿದ್ದು ಜನರನ್ನು ಭಯಭೀತರಾಗಿಸಿದೆ. ಅದರೊಂದಿಗೆ ಪುನೀತ್ ರಾಜ್ ಕುಮಾರ್ ಸಾವನ್ನು ಕೂಡ ಇದರೊಂದಿಗೆ ತಳುಕು ಹಾಕಲಾಗುತ್ತಿದೆ. ಆದರೀಗ ಈ ಕುರಿತು ನಾಡಿನ ಹೆಸರಾಂತ ವೈದ್ಯ ಡಾ. ಅಂಜನಪ್ಪ(Dr Anjanappa) ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಖಾಸಗೀ ಮಾಧ್ಯಮವೊಂದು ಡಾ. ಅಂಜನಪ್ಪ ಅವರನ್ನು ಭೇಟಿ ಮಾಡಿ ಮಾತನಾಡಿಸಿದ್ದು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕೋವಿಡ್ ಶೀಲ್ಡ್ ವ್ಯಾಕ್ಸಿನ್ ಪಡೆದು ನಾವು ಅಪ್ಪು ಅವರನ್ನು ಕಳೆದುಕೊಂಡೆವು ಎಂದು ಹೇಳುತ್ತಿದ್ದಾರೆ. ಇದರ ಬಗ್ಗೆ ಏನು ಹೇಳುತ್ತೀರಿ ಎಂದಾಗ, ನಾನು ಕೂಡ ಪುನೀತ್ ರಾಜ್ ಕುಮಾರ್ ಅಭಿಮಾನಿ ಎಂದು ಮಾತು ಆರಂಭಿಸುವ ಡಾ ಅಂಜನಪ್ಪ ಅವರು ಜನರ ಮಾತುಗಳಿಗೆ ಕಿವಿಗೊಡಬೇಡಿ, ಬೇಕಾಬಿಟ್ಟಿ ಕೆಲವರು ಮೆಸೇಜ್, ಕಮೆಂಟ್ ಹಾಕುತ್ತಾರೆ. ಆದರೆ ನೀವು ಈ ವಿಚಾರದಲ್ಲಿ ಒಬ್ಬ ನುರಿತ ವೈದ್ಯರ ಮಾತನ್ನು ಮಾತ್ರ ಕೇಳಿ. ನಿಜವಾಗಿಯೂ ಪುನೀತ್ ಮರಣ ಹೊಂದಿದಕ್ಕೊ, ಅಥವಾ ಇನ್ನಾವುದೇ ಯಂಗ್ ಸ್ಟಾರ್ ಗಳು ಸಾವನಪ್ಪಿರುವುದು ಕೋವಿಡ್ ಶೀಲ್ಡ್ ನಿಂದ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ ಈ ವ್ಯಾಕ್ಸಿನ್ ನಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಯಾವುದೇ ಸೈಡ್ ಎಫೆಕ್ಟ್ ಆಗಲ್ಲ, ಜನ ಭಯ ಪಡುವ ಅಗತ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.

ಅಲ್ಲದೆ ಸ್ವತಃ ಕಂಪೆನಿಯವರೇ ಸಣ್ಣ ಪುಟ್ಟ ಎಫೆಕ್ಟ್ ಆಗುತ್ತದೆ ಹೊರತು, ಜೀವ ಹೋಗುವ ಹಾನಿ ಆಗಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಇದು ವಿಜ್ಞಾನ, ವಿಜ್ಞಾನವನ್ನು ನೀವು ನಂಬಿ. ಇಂದು ಹೃದಯಾಘಾತ, ಸಾವುಗಳು ಸಂಭವಿಸುವುದು ಜನರು ಮಾಡುವ ತಪ್ಪುಗಳಿಂದ, ಜಂಕ್ ಫುಡ್ ತಿನ್ನುವುದು, ಹೆಚ್ಚು ಆಯಾಸ ಪಡೈವುದು, ಸ್ಟ್ರೆಸ್ ಮಾಡಿಕೊಳ್ಳುವುದು ಮುಖ್ಯ ಕಾರಣವಾಗಿದೆ. ಆರೋಗ್ಯದ ಕಡೆ ಗಮನ ಕೊಡಿ, ಎಲ್ಲದೂ ಸರಿಯಾಗುತ್ತದೆ. ವ್ಯಾಕ್ಸಿನ್ ನಿಂದ ಯಾವ ಸಮಸ್ಯೆ ಕೂಡ ಇಲ್ಲ, ಆರಾಮಾಗಿರಿ ಎಂದು ಡಾ. ಅಂಜನಪ್ಪ ತಿಳಿಸಿದ್ದಾರೆ.

Advertisement
Advertisement