Covid-19: ಸಿಂಗಾಪುರದಲ್ಲಿ ಕೊರೋನ ಸ್ಫೋಟ, ಒಂದೇ ವಾರದಲ್ಲಿ 25,900 ಕೇಸ್ ದಾಖಲು !! ಎಲ್ಲೆಡೆ ಮಾಸ್ಕ್ ಕಡ್ಡಾಯ !!
Covid-19: ಕೋವಿಡ್ ಮಹಾಮಾರಿಯನ್ನು ಜನ ಮರೆತು ನೆಮ್ಮದಿಯಿಂದ ಜೀವನ ನಡೆಸುವಾಗಲೇ ಈ ರೋಗ ಮತ್ತೆ ಹೊಸ ರೂಪದಲ್ಲಿ ವಕ್ಕರಿಸಿಕೊಂಡು, ಸಿಂಗಾಪುರ(Singapura) ದಲ್ಲಿ ಸ್ಪೋಟಗೊಂಡಿದೆ.
ಹೌದು, 2020 ರಲ್ಲಿ ಎಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಕೋವಿಡ್ – 19(Covid-19) ಅಲೆ ಸಿಂಗಾಪುರದಲ್ಲಿ ಮತ್ತೆ ಹೊಸ ರೂಪದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ. ಮೇ 5 ರಿಂದ 11 ರವರೆಗೆ ಬರೋಬ್ಬರಿ 25,900 ಪ್ರಕರಣ ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಈ ಬೆನ್ನಲ್ಲೇ ಸಿಂಗಾಪುರ ಸರ್ಕಾರ(Singapura Government) ಮತ್ತೆ ಮಾಸ್ಕ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.
ಸಾವಿರಗಟ್ಟಲೆ ಪ್ರಕರಣ ದಾಖಲಾದ ಬಳಿಕ ಎಚ್ಚೆತ್ತು ಸಿಂಗಾಪುರ ಸರ್ಕಾರ ಕೋವಿಡ್ ಮಾರ್ಗಸೂಚಿಯನ್ನು ನೀಡಿದೆ. ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು, ಜಸಂದಣಿಯಿಂದ ದೂರವಿರುವುದು, ಅನಾರೋಗ್ಯ, ಕೋವಿಡ್ ಲಕ್ಷಣ ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ವೈದ್ಯರು, ಆಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಿದೆ.
ಕಾಂಗ್ರೆಸ್ ಅಧಿಕಾರ ಹಿಡಿದು 1 ವರ್ಷ; ಬಿಯರ್ ಬೆಲೆ ಏರಿದ್ದು 3 ಸಲ!!
ಇನ್ನು ಆರೋಗ್ಯ ಸಚಿವ ಓಂಗ್ ಯೆ ಕುಂಗಾ ಅವರು 'ನಾವು ಹೊಸ ಅಲೆಯ ಆರಂಭಿಕ ಹಂತದಲ್ಲಿದ್ದೇವೆ. ದಿನೇ ದಿನೇ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಮುಂದಿನ ಎರಡರಿಂದ ನಾಲ್ಕು ವಾರಗಳಲ್ಲಿ ಅಲೆಯು ಉತ್ತುಂಗಕ್ಕೇರುತ್ತದೆ ಎಂದು ಊಹಿಸಲಾಗಿದೆ. ಅಂದರೆ ಜೂನ್ ಮಧ್ಯ ಮತ್ತು ಅಂತ್ಯದ ನಡುವೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ
ಇತ್ತ ಲಸಿಕೆಯಿಂದ ಅಡ್ಡಪರಿಣಾಮ ಕುರಿತು ವರದಿ ಬಹಿರಂಗವಾದ ಬಳಿಕ ಆತಂಕ ಹೆಚ್ಚಾಗಿದೆ. ಹೀಗಾಗಿ ಕೋವಿಡ್ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ಕೋವಿಡ್ ಅಲೆ ಕಾಣಿಸಿಕೊಂಡಿರುವುದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಇದನ್ನೂ ಓದಿ: Ayodhya: ಅಯೋಧ್ಯೆಗೆ ಬಾರದ ಭಕ್ತರು - ಒಮ್ಮೆಲೆ ಕುಗ್ಗಿದ ಸಂಖ್ಯೆ !!