For the best experience, open
https://m.hosakannada.com
on your mobile browser.
Advertisement

Conversion: ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರವಾಗುವಿರಾ? ಹಾಗಾದರೆ ಇದನ್ನು ಕಡ್ಡಾಯ ಪಾಲಿಸಬೇಕು-ಸರಕಾರದಿಂದ ಆದೇಶ

Conversion: ಮತಾಂತರದಂತಹ ಪ್ರಕ್ರಿಯೆಗಳು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವುದರಿಂದ ಗುಜರಾತ್‌ ಸರಕಾರ ಮತಾಂತರಕ್ಕೆ ಸಂಬಂಧ ಪಟ್ಟಂತೆ ಈ ನಿರ್ಧಾರ
01:05 PM Apr 12, 2024 IST | ಸುದರ್ಶನ್
UpdateAt: 01:08 PM Apr 12, 2024 IST
conversion  ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರವಾಗುವಿರಾ  ಹಾಗಾದರೆ ಇದನ್ನು ಕಡ್ಡಾಯ ಪಾಲಿಸಬೇಕು ಸರಕಾರದಿಂದ ಆದೇಶ

Conversion: ಒಬ್ಬ ವ್ಯಕ್ತಿಯು ತನ್ನ ಧರ್ಮವನ್ನು ಬದಲಾಯಿಸಿದರೆ ಮತ್ತು ಹಿಂದೂ, ಬೌದ್ಧ, ಸಿಖ್‌ ಅಥವಾ ಜೈನ ಧರ್ಮವನ್ನು ಅಳವಡಿಸಿಕೊಂಡರೆ, ಗುಜರಾತ್‌ ಧರ್ಮದ ಸ್ವಾತಂತ್ರ್ಯ ಕಾಯಿದೆ 2003 ರ ನಿಬಂಧನೆಯ ಅಡಿಯಲ್ಲಿ ಜಿಲ್ಲ ಮ್ಯಾಜಿಸ್ಟ್ರೇಟ್‌ನಿಂದ ಅನುಮತಿ ಪಡೆಯಬೇಕು ಎಂದು ಸರಕಾರ ಹೇಳಿದೆ. ಮತಾಂತರದಂತಹ ಪ್ರಕ್ರಿಯೆಗಳು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವುದರಿಂದ ಗುಜರಾತ್‌ ಸರಕಾರ ಮತಾಂತರಕ್ಕೆ ಸಂಬಂಧ ಪಟ್ಟಂತೆ ಈ ನಿರ್ಧಾರ ಕೈಗೊಂಡಿದೆ.

Advertisement

ಇದನ್ನೂ ಓದಿ: Actor Yash: ಬಾಲಿವುಡ್‌ ಸಿನಿಮಾ ʼರಾಮಾಯಣʼ ಚಿತ್ರಕ್ಕೆ ಯಶ್‌ ನಿರ್ಮಾಪಕ

ಈ ಸುತ್ತೋಲೆಯನ್ನು ಗುಜರಾತ್‌ ಗೃಹ ಇಲಾಖೆಯು ಎಪ್ರಿಲ್‌ 8 ರಂದು ಆದೇಶ ಹೊರಡಿಸಿದೆ ಎಂದುವ ವರದಿಯಾಗಿದೆ.

Advertisement

ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ಬಯಸುವವರು ಕೂಡಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ನಿಂದ ಅನುಮತಿ ಪಡೆಯಬೇಕು. ಬೌದ್ಧ ಧರ್ಮ ಪ್ರತ್ಯೇಕ ಧರ್ಮ ಎಂದು ಸ್ಪಷ್ಟ ಪಡಿಸಿ ಗುಜರಾತ್‌ ಸರಕಾರ ಸುತ್ತೋಲೆಯನ್ನು ಹೊರಡಿಸಿದೆ.

ಇದನ್ನೂ ಓದಿ: Bank Loan: ಯಾವುದೇ ಆಸ್ತಿ ಪತ್ರ ಇಟ್ಟು ಸಾಲ ಪಡೆದವರಿಗೆ RBIಯಿಂದ ಮುಖ್ಯ ಮಾಹಿತಿ!!

ಮತಾಂತರದ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮತಾಂತರಕ್ಕೆ ಪೂರ್ವಾನುಮತಿ ಕೋರಿ ಸಿಖ್‌, ಜೈನ, ಬೌದ್ಧ ಧರ್ಮಗಳು ಸಂವಿಧಾನ ವ್ಯಾಪ್ತಿಯಲ್ಲಿದೆ ಎಂದು ಪರಿಗಣಿಸಿ ಅಂತಹ ಅರ್ಜಿಗಳನ್ನು ಸಂಬಂಧಪಟ್ಟ ಕಚೇರಿಗಳು ವಿಲೇವಾರಿ ಮಾಡುತ್ತದೆ. ಆರ್ಟಿಕಲ್‌ 25(2) ಅಡಿಯಲ್ಲಿ ಗುಜರಾತ್‌ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ಪ್ರಕಾರ ಬೌದ್ಧ ಧರ್ಮವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಲಾಗುವುದು ಎಂದು ಸರಕಾರ ಹೇಳಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್‌ನಿಂದ ಪೂರ್ವಾನುಮತಿ ಪಡೆದೇ ಒಬ್ಬ ವ್ಯಕ್ತಿಯನ್ನು ಬೌದ್ಧ, ಸಿಖ್‌, ಜೈನ ಧರ್ಮಕ್ಕೆ ಮತಾಂತರಿಸಬೇಕು. ಅಲ್ಲದೇ ಜಿಲ್ಲಾಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಧರ್ಮ ಪರಿವರ್ತನೆ ಮಾಡುವವರು ಮಾಹಿತಿ ನೀಡಬೇಕು.

Advertisement
Advertisement