ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Congress : ಪಕ್ಷ ಭಹಿಷ್ಕರಿಸಿದ್ರೂ ಅಯೋಧ್ಯೆಯ ರಾಮನ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಸಚಿವ !!

07:02 PM Jan 22, 2024 IST | ಹೊಸ ಕನ್ನಡ
UpdateAt: 07:02 PM Jan 22, 2024 IST
Advertisement

Congress : ಅಯೋಧ್ಯೆಯಲ್ಲಿ(Ayodhya) ರಾಮನ ಪ್ರಾಣ ಪ್ರತಿಷ್ಠಾಪನೆ ನಡೆದಿರುವುದು ಕೋಟ್ಯಾಂತರ ಹಿಂದೂಗಳ ಕನಸು ನೆರವೇರಿಸದಂತಾಗಿದೆ. ಈ ದಿನಕ್ಕಾಗಿ ಅದೆಷ್ಟು ಜೀವಗಳು ಕಾದು ಕುಳಿತಿದ್ದವೋ ತಿಳಿಯದು. ಇಂದು ಎಷ್ಟು ಜೀವಗಳು ಆನಂದ ಭಾಷ್ಪ ಸುರಿಸಿದ್ದಾವೋ ತಿಳಿಯದು. ಒಟ್ಟಿನಲ್ಲಿ ಎಲ್ಲೆಡೆ ಸಂಭ್ರಮ, ಸಂಭ್ರಮ ಅಷ್ಟೆ. ನಾಡಿನ ಜನ ಇಷ್ಟೆಲ್ಲಾ ಸಂಭ್ರಮಿಸುವಾಗ ಕಾಂಗ್ರೆಸ್ ಈ ಮಹಾ ಸಮಾರಂಭವನ್ನೇ ಭಹಿಷ್ಕಿರಿಸಿತ್ತು. ಆದರೆ ಅಚ್ಚರಿ ಏನಂದ್ರೆ ಕಾಂಗ್ರೆಸ್ ಇದನ್ನು ಭಹಿಷ್ಕರಿಸಿದರೂ ಕಾಂಗ್ರೆಸ್(Congress)ಸಚಿವರೊಬ್ಬರು ಅಯೋಧ್ಯಾ ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

ಹೌದು, ರಾಮ ನಮ್ಮೆಲ್ಲರ ಆರಾಧ್ಯ ದೈವ, ನಮ್ಮ ಸಂಸ್ಕೃತಿಯ ನಾಯಕ ಎಂಬುದನ್ನು ಹಿಮಾಚಲ ಪ್ರದೇಶದ ಕಾಂಗ್ರೆಸ್ ಮಾಜಿ ಸಿಎಂ ಪುತ್ರ, ಹಾಲಿ ಕಾಂಗ್ರೆಸ್ ಸರ್ಕಾರದ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ನಿಜ ಮಾಡಿದ್ದಾರೆ. ಯಾಕೆಂದರೆ ರಾಜಕೀಯ ಪ್ರೇರಿತ ಕಾರ್ಯಕ್ರಮ ಎಂದು ಹೇಳಿ ಮಂದಿರ ಉದ್ಘಾಟನೆಯಿಂದ ಕಾಂಗ್ರೆಸ್ ದೂರ ಉಳಿದರೂ ಕೂಡ ಕಾಂಗ್ರೆಸ್ ಸರ್ಕಾರದ ಸಚಿವರಾಗಿರುವ ವಿಕ್ರಮಾದಿತ್ಯ ಸಿಂಗ್(Vikramaditya singh) ಅವರು ಆಯೋಧ್ಯೆಯ ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಹಾಜರಾಗಿದ್ದಾರೆ. ಇದರಿಂದ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಿದೆ.

ಇಷ್ಟೇ ಅಲ್ಲದೆ ವಿಕ್ರಮಾದಿತ್ಯ ಸಿಂಗ್ ಜೊತೆ ಹಿಮಾಚಲ ಪ್ರದೇಶ ಕಾಂಗ್ರೆಸ್ ಶಾಸಕ ಸುಧೀರ್ ಶರ್ಮಾ ಕೂಡ ಪಾಲ್ಗೊಂಡಿದ್ದಾರೆ. ರಾಮ ಮಂದಿರ ಬಿಜೆಪಿ ಕಾರ್ಯಕ್ರಮ, ಹೀಗಾಗಿ ಪಾಲ್ಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಅಧಿಕೃತ ಪ್ರಕಟಣೆಯಿಂದ ಹಲವು ನಾಯಕರು ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಂಡಿಲ್ಲ. ಆದರೆ ವಿಕ್ರಮಾದಿತ್ಯ ಸಿಂಗ್ ಹಾಗೂ ಸುಧೀರ್ ಶರ್ಮಾ ಹೈಕಮಾಂಡ್ ಆದೇಶದ ನಡುವೆಯೂ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಂಡು, ಪ್ರಭು ಶ್ರೀರಾಮನ ಆಶಿರ್ವಾದ ಪಡೆದಿದ್ದಾರೆ.

Advertisement

ಜೊತೆಗೆ ಈ ಬಗ್ಗೆ ಪ್ರತಿಕ್ರಿಯಿಸಿದ ವಿಕ್ರಮಾದಿತ್ಯ ಸಿಂಗ್ 'ಇದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ. ಈ ಪವಿತ್ರ ದಿನದಲ್ಲಿ ಆಯೋಧ್ಯೆ ರಾಮನಗರಿಯಲ್ಲಿ ಭಗವಾನ್ ಶ್ರೀರಾಮನ ಮನೆಗೆ ಬಂದಿದ್ದೇವೆ. ಶ್ರೀರಾಮನ ಆಶೀರ್ವಾದ ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ' ಎಂದಿದ್ದಾರೆ.

Related News

Advertisement
Advertisement