7th pay commission: 7ನೇ ವೇತನ ಆಯೋಗ ಜಾರಿ - ಸದನದಲ್ಲಿ ಸಿದ್ದರಾಮಯ್ಯ ಮಹತ್ವದ ಹೇಳಿಕೆ!!
7th pay commission: ರಾಜ್ಯದಲ್ಲಿ ರಾಜ್ಯ ಸರ್ಕಾರಿ ನೌಕರರು 7ನೇ ವೇತನ ಆಯೋಗದ(7th pay commission)ಜಾರಿಯ ನಿರೀಕ್ಷೆಯಲ್ಲಿ ಕಾದು ಕಾದು ಸೋತು ಸುಣ್ಣವಾಗಿದ್ದಾರೆ. ಬದಲಾಗುವ ಸರ್ಕಾರಗಳು ಈ ಕುರಿತು ಕೊಳ್ಳು ಭರವಸೆಗಳನ್ನು ನೀಡಿ ಅವರನ್ನು ನಿರಾಶದಾಯಕರನ್ನಾಗಿ ಮಾಡಿಬಿಟ್ಟಿದೆ. ಆದರೀಗ ಸಿಎಂ ಸಿದ್ದರಾಮಯ್ಯನವರು(CM Siddaramaiah)ಏಳನೇ ವೇತನ ಆಯೋಗ ಜಾರಿ ಕುರಿತು ವಿಧಾನಸಭೆಯಲ್ಲಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ಹೌದು, ಕೆಲ ಸಮಯದ ಹಿಂದಷ್ಟೇ ಕೆ. ಸುಧಾಕರ್ ರಾವ್(Sudhakar rao) ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು 15/3/2024ರವರೆಗೆ ವಿಸ್ತರಿಸಿ ಆದೇಶಿಸಿದೆ. ಇದರ ಕುರಿತು ಇಂದು ಬೆಳಗಾವಿಯ ಅಧಿವೇಶನದಲ್ಲಿ ಪ್ರಶ್ನೆಯೊಂದನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯನವರು ಮಹತ್ವದ ಹೇಳಿಕೆ ನೀಡಿದ್ದು, ಈ ಹೇಳಿಕೆ ರಾಜ್ಯ ಸರ್ಕಾರಿ ನೌಕರರಿಗೆ ಸಂತಸ ಉಂಟುಮಾಡಿದೆ.
ಅಂದಹಾಗೆ ವಿಧಾನಸಭೆಯಲ್ಲಿ(Vidhanasabhe) ಕಲಾಪದ ಪ್ರಶ್ನೋತ್ತರದ ವೇಳೆ ಶಾಸಕ ಐಹೊಳೆ ದುರ್ಯೋಧನ ಅವರು 7ನೇ ರಾಜ್ಯ ವೇತನ ಆಯೋಗದ ಕುರಿತು 7ನೇ ವೇತನ ಆಯೋಗವನ್ನು ಜಾರಿ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ?. ಹಾಗಿದ್ದಲ್ಲಿ ಯಾವಾಗ ಜಾರಿ ಮಾಡಲಾಗುವುದು? ಪದೇ ಪದೇ ಅವಧಿ ವಿಸ್ತರಿಸುವುದೇಕೆ ಎಂದು ಪ್ರಶ್ನೆ ಕೇಳಿದರು.
ಇದಕ್ಕೆ ಸಿದ್ದರಾಮಯ್ಯ ಅವರು 2022ರಲ್ಲಿ ರಚನೆಯಾದ ಆಯೋಗದ ಅವಧಿಯನ್ನು ಈಗಾಗಲೇ ಎರಡು ಬಾರಿ ವಿಸ್ತರಿಸಲಾಗಿದೆ. ಇದೀಗ ನಮ್ಮ ಸರ್ಕಾರವು ಅವಧಿಯನ್ನು ವಿಸ್ತರಿಸಿದ್ದು ಈ ಮೂಲಕ ಪ್ರಸ್ತುತ ರಾಜ್ಯ ಸರ್ಕಾರವು ವೇತನ ಆಯೋಗದ ಅಂತಿಮ ವರದಿಯ ನಿರೀಕ್ಷೆಯಲ್ಲಿರುತ್ತದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ. ಹಾಗಿದ್ದರೆ ಇದೀಗ ವಿಸ್ತರಿಸಿರುವ ಅವಧಿಯಲ್ಲಿ ಬರುವ ವರದಿ ಆಧರಿಸಿ 7ನೇ ವೇತನ ಆಯೋಗ ಜಾರಿ ಮಾಡವಾಗುವುದು ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಹೇಳಿದ್ದು ಇದು ರಾಜ್ಯದ ಸರ್ಕಾರಿ ನೌಕರರಿಗೆ ಹರ್ಷ ಉಂಟುಮಾಡಿದೆ.