For the best experience, open
https://m.hosakannada.com
on your mobile browser.
Advertisement

Maharashtra: SSLC ಪರೀಕ್ಷೆ ವೇಳೆ ಉತ್ತರ ತೋರಿಸದ ಸಹಪಾಠಿ ಮೇಲೆ ವಿದ್ಯಾರ್ಥಿಗಳಿಂದ ಚಾಕು ಇರಿತ

Maharashtra: ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು, ಈ ಸಮಯದಲ್ಲೇ ವಿದ್ಯಾರ್ಥಿಗಳು ಚೂರಿಯಿಂದ ಇರಿದ ಘಟನೆಯೊಂದು ನಡೆದಿದೆ.
02:00 PM Mar 28, 2024 IST | ಸುದರ್ಶನ್
UpdateAt: 02:03 PM Mar 28, 2024 IST
maharashtra  sslc ಪರೀಕ್ಷೆ ವೇಳೆ ಉತ್ತರ ತೋರಿಸದ ಸಹಪಾಠಿ ಮೇಲೆ ವಿದ್ಯಾರ್ಥಿಗಳಿಂದ ಚಾಕು ಇರಿತ
Advertisement

Maharashtra: ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು, ಈ ಸಮಯದಲ್ಲೇ ವಿದ್ಯಾರ್ಥಿಗಳು ಚೂರಿಯಿಂದ ಇರಿದ ಘಟನೆಯೊಂದು ನಡೆದಿದೆ. ಈ ಘಟನೆ ಮಂಗಳವಾರ ನಡೆದಿದೆ.

Advertisement

ಇದನ್ನೂ ಓದಿ: Puttur: ದರ್ಬೆಯಲ್ಲಿ ಸ್ಕೂಟಿ-ಬೈಕ್‌ ಡಿಕ್ಕಿ; ಇಬ್ಬರಿಗೆ ಗಾಯ

ಪರೀಕ್ಷೆ ಸಮಯದಲ್ಲಿ ಉತ್ತರ ಪತ್ರಿಕೆಯನ್ನು ತೋರಿಸಲಿಲ್ಲ ಎಂಬ ಕಾರಣದಿಂದ ಕೋಪಗೊಂಡ ಮೂವರು ವಿದ್ಯಾರ್ಥಿಗಳು ತಮ್ಮ ಸಹಪಾಠಿಗೆ ಚೂರಿಯಿಂದ ಇರಿದ ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭೀವಂಡಿಯಲ್ಲಿ ನಡೆದಿದೆ. 

Advertisement

ಇದನ್ನೂ ಓದಿ:  Puttur: ದರ್ಬೆಯಲ್ಲಿ ಸ್ಕೂಟಿ-ಬೈಕ್‌ ಡಿಕ್ಕಿ; ಇಬ್ಬರಿಗೆ ಗಾಯ

ಚೂರಿ ಇರಿತಕ್ಕೊಳಗಾದ ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಹೇಳಲಾಗಿದೆ.

ಸಂತ್ರಸ್ತ ವಿದ್ಯಾರ್ಥಿ ತನ್ನ ಉತ್ತರ ಪತ್ರಿಕೆಯನ್ನು ತೋರಿಸಲು ನಿರಾಕರಿಸಿದ್ದಕ್ಕೆ ಕೋಪಗೊಡ ಮೂವರು ಪರೀಕ್ಷಾ ಕೊಠಡಿಯಿಂದ ಹೊರ ಬಂದ ಕೂಡಲೇ ಆತನನ್ನು ತಡೆದು ಥಳಿಸಿ, ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Priyank Kharge: ನನ್ನ ಹೆಣ ಬೀಳಿಸಿಯಾದ್ರೂ ಚುನಾವಣೆ ಗೆಲ್ಲುವ ಪ್ಲಾನ್; ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

ವಿದ್ಯಾರ್ಥಿ ಜೀವಾಪಾಯದಿಂದ ಪಾರಾಗಿರುವುದಾಗಿ ವರದಿಯಾಗಿದೆ. ಮೂವರು ಅಪ್ರಾಪ್ತ ಆರೋಪಿಗಳ ವಿರುದ್ಧ ಭಿವಂಡಿಯ ಶಾಂತಿ ನಗರ ಪೊಲೀಸ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ ಪ್ರಕಾರ 324 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Advertisement
Advertisement
Advertisement