For the best experience, open
https://m.hosakannada.com
on your mobile browser.
Advertisement

Waqf Board: ಮದರಸಾದಲ್ಲಿ ತಾಲಿಬಾನ್ ಶಿಕ್ಷಣ ನಡೆಸುತ್ತಿರುವ ಆರೋಪ- ಮಹತ್ವದ ಹೇಳಿಕೆ ನೀಡಿದ ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ

05:17 PM Nov 27, 2023 IST | ಅಶ್ವಿನಿ ಹೆಬ್ಬಾರ್
UpdateAt: 05:42 PM Nov 27, 2023 IST
waqf board  ಮದರಸಾದಲ್ಲಿ ತಾಲಿಬಾನ್ ಶಿಕ್ಷಣ ನಡೆಸುತ್ತಿರುವ ಆರೋಪ  ಮಹತ್ವದ ಹೇಳಿಕೆ ನೀಡಿದ ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ
Advertisement

Waqf Board: ದರೂಲ್ ಉಲೂಮ್ ಅನಾಥಾಶ್ರಮದಲ್ಲಿ ತಾಲಿಬಾನ್ ಶಿಕ್ಷಣ ನಡೆಸುತ್ತಿರುವ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷ ಗಂಭೀರ ಆರೋಪ ಮಾಡಿದ್ದು, ಈ ಕುರಿತಂತೆ ಚಿತ್ರದುರ್ಗದಲ್ಲಿ (Chitraduurga)ಮಾಧ್ಯಮ ಪ್ರತಿನಿಧಿಯವರು ಕೇಳಿದ ಪ್ರಶ್ನೆಗೆ ಮದರಸಗಳ ಕೇಂದ್ರ ಸ್ಥಾನಗಳ ಅಧ್ಯಕ್ಷರಾದ ಅಮಿರತ್ ಶರೀಯತ್ ಅವರ ವ್ಯಾಪ್ತಿಗೆ ಬರುತ್ತೆ ಎಂದು ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಅನ್ವರ್ ಬಾಷಾ(waqf board state president anwar bhasha,) ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಮದರಸಾದಲ್ಲಿ ಇಸ್ಲಾಂ ಎಲ್ಲ ಧರ್ಮಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವುದನ್ನು ಕಲಿಸುತ್ತದೆ. ತಾಲಿಬಾನ್ ವಿಚಾರ, ಇನ್ನೊಬ್ಬರ ಬಗ್ಗೆ ವಿರೋಧಿ ಚಟುವಟಿಕೆ ಮಾಡುವುದು ನಮ್ಮ ಧರ್ಮದಲ್ಲಿಲ್ಲ. ಬಹಳಷ್ಟು ಮದರಸಗಳು ರಾಜ್ಯದಲ್ಲಿ ಈ ರೀತಿ ನಡೆಸುತ್ತಿದ್ದಾರೆ. ಅಮೀರ್ ಶರಿಯತ್ ನವರು ಅವರ ವ್ಯಾಪ್ತಿಯಲ್ಲಿ ಸಾಕಷ್ಟು ಮದಾರಸಗಳು ನಡೆಯುತ್ತಿವೆ. ನಮ್ಮ ಕಂಟ್ರೋಲ್ನಲ್ಲಿ ಇರಬೇಕು ಎಂಬ ಕಾರಣಕ್ಕೆ ಹೆಚ್ಚು ಮುಂಜಾಗ್ರತೆ ವಹಿಸುತ್ತೇವೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಅಂದುಕೊಂಡಿರುವ ಹಾಗೇ ಯಾವುದೇ ಅಹಿತಕರ ಘಟನೆ ಅಲ್ಲಿ ನಡೆಯುತ್ತಿಲ್ಲ ಎಂಬುದು ನಮ್ಮ ಅನಿಸಿಕೆಯಾಗಿದೆ. ಯಾವ ತಾಲಿಬಾನ್ ಶಿಕ್ಷಣವನ್ನು ನೀಡಲಾಗುತ್ತಿಲ್ಲ ಇವೆಲ್ಲಾ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

ಬೇರೆಯವರು ಯಾರು ಮದರಸಾಗಳನ್ನು ನಡೆಸುತ್ತಿದ್ದಾರೋ ಅವರು ಜವಾಬ್ದಾರರಾಗಿರಿತ್ತಾರೆ. ನಮ್ಮ ಇಸ್ಲಾಂ ಶಿಕ್ಷಣದ ಜೊತೆಗೆ ದಿನನಿತ್ಯದ ಶಿಕ್ಷಣ ಕೂಡ ಎಲ್ಲಾ ಮದರಸಗಳಲ್ಲಿ ಅಳವಡಿಸಿಕೊಂಡಿದ್ದಾರೆ. ನಮ್ಮ ಜಿಲ್ಲೆಯಲ್ಲಿರುವ ಮದರಸಾದಲ್ಲಿ ಎಲ್ಲಾ ರೀತಿಯ ಶಿಕ್ಷಣ ನೀಡಲಾಗುತ್ತಿದೆ. ಇತ್ತೀಚೆಗೆ ಮದರಸಾಗಳಲ್ಲಿ ಒಳ್ಳೆಯ ವಿದ್ಯಾಭ್ಯಾಸ ಕೂಡ ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಸಾಕಷ್ಟು ಮದರಸಗಳು ನಡೆಯುತ್ತಿವೆ. ಅವೆಲ್ಲವುಗಳು ನಮ್ಮ ಕಂಟ್ರೋಲ್ನಲ್ಲಿರುತ್ತವೆ. ನಾವು ಅವರಿಗೆ ಅನುಮತಿ ನೀಡುತ್ತೇವೆ. ಆದರೆ ಬೆಂಗಳೂರಿನ ದರೂಲ್ ಉಲೂಮ್ ಮದರಸಾ ನಮ್ಮಲ್ಲಿ ನೊಂದಾಣಿ ಆಗಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement

ನಮ್ಮ ಸಚಿವರಾದ ಜಮೀರ್ ಅಹ್ಮದ್ ಅವರ ಜೊತೆ ಚರ್ಚಿಸಿ ಅಲ್ಲಿಗೆ ಭೇಟಿ ನೀಡುತ್ತೇವೆ. ಅಲ್ಲಿ ಏನಾದರು ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸುತ್ತೇವೆ. ಸಂಬಂಧಿಕರ ನಡುವೆ ವ್ಯತ್ಯಾಸ ಆಗಿರುವ ಹಿನ್ನೆಲೆ ಈ ಘಟನೆ ಬೆಳಕಿಗೆ ಬಂದಿದೆ. ಮಕ್ಕಳ ಹಕ್ಕುಗಳ ಅಧ್ಯಕ್ಷರು ಬರುವ ನಿಟ್ಟಿನಲ್ಲಿ ಇವರೇ ಮಾಹಿತಿ ಕೊಟ್ಟು ಕರೆಸಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ. ನಾವು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಎಲ್ಲವನ್ನು ವಿವರವಾಗಿ ಹೇಳುತ್ತೇವೆ ಎಂದಿದ್ದಾರೆ.

ಇದನ್ನು ಓದಿ: High court: ಇಂತಹ ಹೆಂಡತಿಯರು ಇನ್ಮುಂದೆ ಈ ಸೌಲಭ್ಯ ಪಡೆಯಲು ಅರ್ಹರಲ್ಲ !!

Advertisement
Advertisement
Advertisement