ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Chennai: ರಾಜೀವ್‌ ಗಾಂಧಿ ಹತ್ಯೆ ಅಪರಾಧಿ ಶಾಂತನ್‌ ನಿಧನ

11:15 AM Feb 28, 2024 IST | ಹೊಸ ಕನ್ನಡ
UpdateAt: 11:15 AM Feb 28, 2024 IST
Advertisement

Chennai: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆಗೆ ಒಳಗಾಗಿದ್ದ ಏಳು ಅಪರಾಧಿಗಳ ಪೈಕಿ ಒಬ್ಬರಾದ ಶಾಂತನ್‌ ಅವರು ಇಂದು ಚೆನ್ನೈನಲ್ಲಿ ಮೃತ ಹೊಂದಿದ್ದಾರೆ. ಶ್ರೀಲಂಕಾದ ಟಿ ಸುತೇಂದ್ರರಾಜ ಆಲಿಯಾಸ್‌ ಸಂತಸ್‌ (55 ವರ್ಷ) ಅವರು ತಮ್ಮ ಜೀವನದ 32 ವರ್ಷಗಳನ್ನು ಕಳೆದು, ಬಿಡುಗಡೆ ಹೊಂದಿದ್ದರು. ಲಿವರ್‌ ವೈಫಲ್ಯ, ಬಹು ಅಂಗಾಗ ವೈಫಲ್ಯದಿಂದ ಜನವರಿ ತಿಂಗಳಲ್ಲಿ ಚೆನ್ನೈನ ರಾಜೀವ್‌ ಗಾಂಧಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಸಂತನ್‌ ಅವರು ಇಂದು (ಫೆ.28) ರಂದು ಮೃತ ಹೊಂದಿದ್ದಾರೆ.

Advertisement

ಇದನ್ನೂ ಓದಿ: Shivalinga: ಶಿವಲಿಂಗಕ್ಕೂ ಮಹಾಶಿವರಾತ್ರಿಗೂ ಸಂಬಂಧವೇನು? ಶಿವಲಿಂಗವನ್ನು ಮೊಟ್ಟಮೊದಲು ಪೂಜಿಸಿದವರು ಯಾರು?

2022 ರಲ್ಲಿ ರಾಜೀವ್‌ ಗಾಂಧಿ ಹತ್ಯೆ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದ್ದು, ಇತರ ಅಪರಾಧಿಗಳು ಶ್ರೀಲಂಕಾಗೆ ಮರಳಿದ್ದರೆ, ಸಂತನ್‌ ಅವರ ಬಳಿ ಪಾಸ್‌ಪೋರ್ಟ್‌ ಸೇರಿ ಯಾವುದೇ ದಾಖಲೆ ಇಲ್ಲದ ಕಾರಣ ತಿರುಚಿ ಕಾರಾಗೃಹದ ವಿಶೇಷ ಶಿಬಿರಕ್ಕೆ ಕಳುಹಿಸಲಾಗಿತ್ತು. ಹಾಗಾಗಿ ಸಂತನ್‌ ಅವರು ಜೈಲಿನಿಂದ ಹೊರ ಬಂದಿದ್ದರೂ ತವರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ತನ್ನ ಕುಟುಂಬದವರನ್ನು ನೋಡಲು ಆಗಿರಲಿಲ್ಲ. 2023 ರಲ್ಲಿ ಸಂತನ್‌ ಅವರು ಮದ್ರಾಸ್‌ ಹೈಕೋರ್ಟ್‌ಗೆ ವಿಶೇಷ ಅರ್ಜಿಯನ್ನು ಸಲ್ಲಿಸಿದ್ದು, ಜೈಲಿನಿಂದ ಬಿಡುಗಡೆಗೊಂಡಿರುವ ತನಗೆ ತವರಿಗೆ ಮರಳಲು ಸಾಧ್ಯವಾಗುತ್ತಿಲ್ಲ, ತನ್ನ ಬಳಿ ಪಾಸ್‌ಪೋರ್ಟ್‌ ಸೇರಿ ಯಾವುದೇ ದಾಖಲೆ ಇಲ್ಲ ಎಂದು ಹೇಳಿ ತನ್ನ ತವರಿಗೆ ಮರಳಲು ಅವಕಾಶ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಇದೀಗ ಅವರು ಬಹುಅಂಗಾಂಗ ವೈಫಲ್ಯದಿಂದ ಮೃತ ಹೊಂದಿದ್ದಾರೆ.

Advertisement

Advertisement
Advertisement