CET ಮರು ಪರೀಕ್ಷೆ ಇಲ್ಲ - ಮೇ ಅಂತ್ಯಕ್ಕೆ ರಿಸಲ್ಟ್ !!
CET: ಎಂಜಿನಿಯರಿಂಗ್ ಸೇರಿ ಹಲವು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (CET 2024) ಔಟ್ ಆಫ್ ಸಿಲಬಸ್ (Out Of Syllabus) ಪ್ರಶ್ನೆಗಳನ್ನು ಕೇಳಿದ್ದು ಮರು ಪರೀಕ್ಷೆ ನಡೆಸಲಾಗುತ್ತದೆ ಎನ್ನಲಾಗಿತ್ತು. ಆದರೀಗ ಶಿಕ್ಷಣ ಇಲಾಖೆಯು CET ಮರುಪರೀಕ್ಷೆ ಮಾಡೋಲ್ಲ ಎಂದು ಹೇಳಿದೆ.
ಇದನ್ನೂ ಓದಿ: Puttur: ಕೆಲಸದ ಆಮಿಷ ನೀಡಿ ಅತ್ಯಾಚಾರ ಯತ್ನ ಪ್ರಕರಣ; ಪ್ರಮುಖ ಆರೋಪಿಗೆ ಜಾಮೀನು
ಏಪ್ರಿಲ್ 18 ಮತ್ತು 19ರಂದು ನಡೆದ ಸಿಇಟಿ ಪರೀಕ್ಷೆಯಲ್ಲಿ 4 ವಿಷಯಗಳಲ್ಲಿ ಕನಿಷ್ಠ 45 ಪ್ರಶ್ನೆಗಳು ಕೈಬಿಟ್ಟ ಪಠ್ಯದಿಂದ ಬಂದಿರುವುದಾಗಿ ಆರೋಪ ಮಾಡಲಾಗಿತ್ತು. ಸಿಇಟಿ ಗೊಂದಲ ತನಿಖೆಗೆ ಸರ್ಕಾರದಿಂದ ನೇಮಕ ಮಾಡಿದ್ದ ನಾಲ್ವರು ವಿಷಯ ತಜ್ಞರ ಒಳಗೊಂಡ ಸಮಿತಿಯು ಪಠ್ಯದಿಂದ ಹೊರತಾದ ಪ್ರಶ್ನೆ ಕೇಳಿರುವುದನ್ನು ದೃಢಪಡಿಸಿದೆ. ಹೀಗಾಗಿ ಮರು ಪರೀಕ್ಷೆ ನಡೆಸಲಾಗುತ್ತದೆ ಎನ್ನಲಾಗಿತ್ತು.
ಇದನ್ನೂ ಓದಿ: Srinivas Prasad passed away: ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ವಿಧಿವಶ !!
ಇಲಾಖೆ ಹೇಳಿದ್ದೇನು?
ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಕೈಬಿಡಲು ಉನ್ನತ ಶಿಕ್ಷಣ ಇಲಾಖೆ (Higher Education Department) ನಿರ್ಧರಿಸಿದ್ದು, ಸಿಇಟಿ ಮರು ಪರೀಕ್ಷೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಭೌತಶಾಸ್ತ್ರದ 9, ರಸಾಯನಶಾಸ್ತ್ರ 15, ಗಣಿತ 15, ಜೀವಶಾಸ್ತ್ರ 11 ಅಂಕಗಳ ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಕೈಬಿಡಲು ತಜ್ಞರ ಸಮಿತಿ ಶಿಫಾರಸು ಮಾಡಿತ್ತು. ತಜ್ಞರ ವರದಿ ಆಧರಿಸಿ ಪ್ರಶ್ನೆಗಳನ್ನು ಕೈ ಬಿಡಲು ಇಲಾಖೆ ನಿರ್ಧರಿಸಿದೆ.
ರಿಸಲ್ಟ್ ಯಾವಾಗ?
• ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಬಿಟ್ಟು ಉಳಿದ ಪ್ರಶ್ನೆಗಳನ್ನು ಅಂಕಕ್ಕೆ ಪರಿಗಣಿಸಲು ಇಲಾಖೆ ನಿರ್ಧರಿಸಿದೆ.
• ಅಲ್ಲದೇ ಸಮಿತಿ ಶಿಫಾರಸಿನಂತೆ 2 ಪ್ರಶ್ನೆಗೆ ಗ್ರೇಸ್ ಅಂಕ ನೀಡಲು ಕೆಇಎ ಪರಿಗಣಿಸಿದೆ.
• ಮೇ ತಿಂಗಳ ಕೊನೆ ವಾರದಲ್ಲಿ ಸಿಇಟಿ ಫಲಿತಾಂಶ ಪ್ರಕಟ ಮಾಡುವುದಾಗಿ ತಿಳಿಸಿದೆ.
ಈಗ ಮೌಲ್ಯಮಾಪನ ಹೇಗೆ? ಉಳಿದ ಪ್ರಶ್ನೆಗಳ ವಿವರ:
• ಭೌತಶಾಸ್ತ್ರ- 51 ಪ್ರಶ್ನೆಗಳು ಅಂತಿಮ
• ರಸಾಯನಶಾಸ್ತ್ರ- 45 ಪ್ರಶ್ನೆಗಳು ಅಂತಿಮ
• ಗಣಿತ- 45 ಪ್ರಶ್ನೆಗಳು ಅಂತಿಮ
• ಜೀವಶಾಸ್ತ್ರ- 49 ಪ್ರಶ್ನೆಗಳು ಅಂತಿಮವಾಗಿ ಲೆಕ್ಕ ಹಾಕಲಾಗುತ್ತದೆ.