ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Central Health Department: ಕೇಂದ್ರ ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ;ರೋಗಿಗಳಿಗೆ ವೈದ್ಯರು ಆ್ಯಂಟಿಬಯೋಟಿಕ್ ನೀಡುವಾಗ ಕಾರಣ ತಿಳಿಸೋದು ಕಡ್ಡಾಯ!!

11:17 AM Jan 19, 2024 IST | ಅಶ್ವಿನಿ ಹೆಬ್ಬಾರ್
UpdateAt: 11:58 AM Jan 19, 2024 IST
Advertisement

Central Health Department: ಕೇಂದ್ರ ಆರೋಗ್ಯ ಇಲಾಖೆ(Central Health Department) ಹೊಸ ನಿಯಮ ಜಾರಿಗೆ ತಂದಿದ್ದು, ಇನ್ನು ಮುಂದೆ ವೈದ್ಯರು ರೋಗಿಗೆ ಆ್ಯಂಟಿಬಯೋಟಿಕ್ ನೀಡುವುದು ಏಕೆ ಅನಿವಾರ್ಯ ಎಂದು ಉಲ್ಲೇಖಿಸಲು ಸೂಚನೆ ನೀಡಿದೆ. ದೇಶದಲ್ಲಿ ಆ್ಯಂಟಿಬಯೋಟಿಕ್‌ಗಳ ದುರ್ಬಳಕೆಯಿಂದಾಗಿ ಜನರಲ್ಲಿ ಹೆಚ್ಚುತ್ತಿರುವ 'ಆ್ಯಂಟಿ ಬಯೋಟಿಕ್ ಪ್ರತಿರೋಧ' ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.

Advertisement

ಇದನ್ನೂ ಓದಿ: Online Game ಪಾಸ್‌ವರ್ಡ್‌ ಕೊಟ್ಟಿಲ್ಲವೆಂದು ಯುವಕನ ಬರ್ಬರ ಹತ್ಯೆ ಮಾಡಿದ ಸ್ನೇಹಿತರು!!!

ಈ ನಿಟ್ಟಿನಲ್ಲಿ ವೈದ್ಯರು(Doctors)ರೋಗಿಗಳಿಗೆ ಆ್ಯಂಟಿಬಯೋಟಿಕ್(Antibiotic)ಔಷಧಗಳನ್ನು ಬರೆಯುವ ಸಂದರ್ಭ ಅದಕ್ಕೆ ಕಾರಣ ನೀಡುವುದನ್ನು ಕಡ್ಡಾಯಗೊಳಿಸಿದೆ. ಮೆಡಿಕಲ್ ಶಾಪ್‌ಗಳು (Medical Shop)ವೈದ್ಯರ ಶಿಫಾರಸಿಲ್ಲದೆ ಯಾವುದೇ ಕಾರಣಕ್ಕೂ ಆಂಟಿ ಬಯೋಟಿಕ್‌ಗಳನ್ನು ಜನರಿಗೆ ನೀಡಬಾರದು ಎಂದು ಸ್ಪಷ್ಟವಾಗಿ ತಾಕೀತು ಮಾಡಿದೆ.

Advertisement

ಕೇಂದ್ರ ಆರೋಗ್ಯ ಇಲಾಖೆಯ(Central Health Department)ಅಧೀನದಲ್ಲಿ ಬರುವ ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶನಾಲಯ ದೇಶದ ಎಲ್ಲಾ ವೈದ್ಯರು, ವೈದ್ಯಕೀಯ ಕಾಲೇಜುಗಳ ಉಪನ್ಯಾಸಕರು ಹಾಗೂ ಫಾರ್ಮಸಿಸ್ಟ್‌ಗಳಿಗೆ (ಮೆಡಿಕಲ್ ಶಾಪ್) ಸುತ್ತೋಲೆಯನ್ನು ರವಾನಿಸಿದೆ. ಅದರಲ್ಲಿ ಆ್ಯಂಟಿಬಯೋಟಿಕ್‌ಗಳ ದುರ್ಬಳಕೆ ಅಥವಾ ಅತಿಯಾದ ಬಳಕೆಯಿಂದಾಗಿ ವರ್ಷದಿಂದ ವರ್ಷಕ್ಕೆ 'ಆ್ಯಂಟಿಬಯೋಟಿಕ್ ಪ್ರತಿರೋಧ'ವನ್ನು ತಡೆಯಲು ಇನ್ನು ಮುಂದೆ ಎಲ್ಲಾ ವೈದ್ಯರು ರೋಗಿಗಳಿಗೆ ಔಷಧ ಚೀಟಿ ಬರೆಯುವಾಗ ಆ್ಯಂಟಿಬಯೋಟಿಕ್‌ಗಳನ್ನು ಸೂಚಿಸಿದರೆ, ಅದಕ್ಕೆ ಕಾರಣವನ್ನು ಸ್ಪಷ್ಟವಾಗಿ ಬರೆಯಬೇಕು. ಇದರ ಜೊತೆಗೆ ರೋಗಿಗೆ ಏಕೆ ಆ್ಯಂಟಿ ಬಯೋಟಿಕ್ ನೀಡುವುದು ಅನಿವಾರ್ಯ ಎಂಬುದನ್ನು ಸೂಚಿಸಬೇಕು ಎಂದು ತಿಳಿಸಿದೆ.

Advertisement
Advertisement