For the best experience, open
https://m.hosakannada.com
on your mobile browser.
Advertisement

Camille Alexander: ತನ್ನ ಕಂಕುಳು, ಖಾಸಗಿ ಭಾಗದ ಕೂದಲು ಮಾರಿ ಲಕ್ಷ ಲಕ್ಷ ಗಳಿಸುತ್ತಾಳೆ ಈಕೆ - ಕೊಳ್ಳೋದು ಯಾರು?

Camille Alexander: ಮಹಿಳೆ ಹಣ ಗಳಿಸುವ ವಿಧಾನ ಕೇಳಿದರೆ ನೀವೇ ಶಾಕ್ ಆಗ್ತೀರಾ. ಯಾಕೆಂದರೆ ಆಕೆ ತನ್ನ ಕಂಕುಳಿನ ಕೂದಲಿಂದ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಾಳೆ.
11:21 AM Apr 26, 2024 IST | ಸುದರ್ಶನ್
UpdateAt: 11:26 AM Apr 26, 2024 IST
camille alexander  ತನ್ನ ಕಂಕುಳು  ಖಾಸಗಿ ಭಾಗದ ಕೂದಲು ಮಾರಿ ಲಕ್ಷ ಲಕ್ಷ ಗಳಿಸುತ್ತಾಳೆ ಈಕೆ   ಕೊಳ್ಳೋದು ಯಾರು
Advertisement

Camille Alexander: ಜನರು ಹಣ ಗಳಿಸಲು ಸಾಕಷ್ಟು ಮಾರ್ಗಗಳನ್ನು ಅನುಸರಿಸುತ್ತಾರೆ. ನ್ಯಾಯಯುತವಾಗಿ ಕೆಲವರು ದುಡಿಮೆ ಮಾಡಿದರೆ ಇನ್ನು ಕೆಲವರು ಅನ್ಯದಾರಿಯಲ್ಲಿ ಸಂಪಾದನೆ ಮಾಡುತ್ತಾರೆ. ಮತ್ತೆ ಕೆಲವರ ಸಂಪಾದನೆಯೇ ಡಿಫ್ರೆಂಟ್ ಅನ್ನಬಹುದು. ಕೇಳೋಕೆ ವಿಚಿತ್ರ ಅನಿಸುತ್ತೆ. ಅಂತೆಯೇ ಇಲ್ಲೊಬ್ಬಳು ಮಹಿಳೆ ಹಣ ಗಳಿಸುವ ವಿಧಾನ ಕೇಳಿದರೆ ನೀವೇ ಶಾಕ್ ಆಗ್ತೀರಾ. ಯಾಕೆಂದರೆ ಆಕೆ ತನ್ನ ಕಂಕುಳಿನ ಕೂದಲಿಂದ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಾಳೆ.

Advertisement

ಇದನ್ನೂ ಓದಿ:  Bath Tips: ಬೆತ್ತಲಾಗಿ ಸ್ನಾನ ಮಾಡ್ತೀರ? ಅಯ್ಯಯ್ಯೋ, ಹಾಗಾದ್ರೆ ಈ ಸುದ್ಧಿ ಓದಲೇಬೇಕು

ಇದು ನಿಮಗೆ ಅಚ್ಚರಿ ಅನಿಸ್ಬೋದು, ಶಾಕ್ ಆಗ್ಬೋದು, ಇಲ್ಲ ಅಸಹ್ಯ ಕೂಡ ಆಗ್ಬೋದು. ಆದರೆ ಇದು ಸತ್ಯ. ಹೌದು, ಲಂಡನ್‌ ಮೂಲದ ಖ್ಯಾತ ಸಂಗೀತಗಾರ್ತಿ ಮತ್ತು ರೂಪದರ್ಶಿ ಕ್ಯಾಮಿಲ್ಲೆ ಅಲೆಕ್ಸಾಂಡರ್(Camille Alexander 25) ತನ್ನ ಕಂಕುಳ ಕೂದಲು ಸೇರಿದಂತೆ ಖಾಸಗಿ ಭಾಗಗಳ ಕೂದಲು ಭಾರೀ ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಾಳಂತೆ. ಅವಳ ಕೂದಲನ್ನು ಖರೀದಿಸಲು ಆಕೆಯ ಅಭಿಮಾನಿಗಳು ಮುಗಿಬೀಳುತ್ತಾರಂತೆ.

Advertisement

ಇದನ್ನೂ ಓದಿ: Parliment Election : ಮಂಗಳೂರು ಮತಗಟ್ಟೆ - ಬಿಜೆಪಿ ಕಾರ್ಯಕರ್ತನಿಂದ ಗೂಂಡಾಗಿರಿ !!

ಹೌದು, ಡೈಲಿ ಸ್ಟಾರ್ ವರದಿಯ ಪ್ರಕಾರ, ಸುಮಾರು 4 ವರ್ಷಗಳ ಹಿಂದೆ ಕೊರೊನಾ ಕಾಲದಲ್ಲಿ ಈಕೆ ವ್ಯಾಕ್ಸಿಂಗ್ ಮತ್ತು ಶೇವಿಂಗ್ ಮಾಡೋದನ್ನು ನಿಲ್ಲಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ಕೂದಲು ಮಾರುತ್ತಿದ್ದು, ಭಾರೀ ಬೇಡಿಕೆಯಿಂದ ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ. ಸದ್ಯ ಕ್ಯಾಮಿಲ್ಲೆ ತನ್ನ ದೇಹದ ಕೂದಲನ್ನು ಎಂದಿಗೂ ಕತ್ತರಿಸುವುದಿಲ್ಲ. ಸಮಾಜ ರೂಪಿಸಿದ ಸೌಂದರ್ಯದ ನಿಯಮಗಳನ್ನು ಪಾಲಿಸಲೇಬೇಕಾದ ಒತ್ತಡಕ್ಕೆ ಸಿಲುಕಿದ್ದ ಆಕೆ ಎಲ್ಲವನ್ನೂ ಬಿಟ್ಟು ಸಾರ್ವಜನಿಕವಾಗಿ ತಲೆಗೂದಲು ಕತ್ತರಿಸುದಿಲ್ಲವಂತೆ.

ಯಾರು ಈಕೆಯ ಕೂದಲು ಖರೀದಿಸುತ್ತಾರೆ?

ಎ ವಾಯ್ಡ್ ಎಂಬ ಮ್ಯೂಸಿಕ್ ಬ್ಯಾಂಡ್ ಹೊಂದಿದ್ದ ಕ್ಯಾಮಿಲ್ಲೆ ಗಾಯನದಿಂದಲೇ ಲಕ್ಷ ಲಕ್ಷ ಸಂಪಾದಿಸುತ್ತಿದ್ದಳು. ಆದರೆ ಕೊರೊನಾ ಕಾಲದಲ್ಲಿ ಮ್ಯೂಸಿಕ್ ಬ್ಯಾಂಡ್ನಿಂದ ಆರ್ಥಿಕ ನಷ್ಟವನ್ನು ಹೊಂದಿದ್ದರಿಂದ ಸೈಟ್ ಓನ್ಲಿ ಫ್ಯಾನ್ಸ್‌ನಲ್ಲಿ ತನ್ನ ಖಾತೆಯನ್ನು ಪ್ರಾರಂಭಿಸಲು ನಿರ್ಧರಿಸಿದಳು. ಅಂದಿನಿಂದ ಅವಳು ವಯಸ್ಕ ಚಂದಾದಾರಿಕೆ ಅಂದರೆ ಕೇವಲ ಅಭಿಮಾನಿಗಳಿಗಾಗಿ ಕೂದಲು ಮಾರಾಟದ ವ್ಯಾಪಾರವನ್ನು ಪ್ರಾರಂಭಿಸಿದಳು. ಈಗ ಜನರು ಆಕೆಯ ಕೂದಲಿನ ಬಗ್ಗೆ ಹುಚ್ಚರಾಗಿದ್ದು, ಆಕೆಯ ಕೂದಲನ್ನು ಖರೀದಿಸಲು ದೊಡ್ಡ ಮೊತ್ತವನ್ನು ಪಾವತಿಸುತ್ತಾರೆ.

ಅಚ್ಚರಿಯ ವಿಚಾರವೆಂದರೆ ಗ್ರಾಹಕರು ಒಮ್ಮೆ ಆಕೆಯ ಕೂದಲನ್ನು ಜೋಡಿಸಿದ ಬ್ರಷ್ ಅನ್ನು ಖರೀದಿಸಲು ಬೇಡಿಕೆಯಿಟ್ಟಿದ್ದರಂತೆ. ಅಷ್ಟೇ ಅಲ್ಲ, ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಖಾಸಗಿ ಅಂಗದ ಕೂದಲು ಕತ್ತರಿಸಿ ಮಾರುತ್ತಾಳೆ. ತನ್ನ ಖಾಸಗಿ ಅಂಗದ ಕೂದಲಿಗೂ ಬೇಡಿಕೆ ಇದೆ ಎಂದು ಕ್ಯಾಮಿಲ್ಲೆ ಅಲೆಕ್ಸಾಂಡರ್ ಹೇಳಿದ್ದಾಳೆ. ಗ್ರಾಹಕರು ಹಿಂದೊಮ್ಮೆ ಕ್ಯಾಮಿಲ್ಲೆ ಅಲೆಕ್ಸಾಂಡರ್ ಅವರಿಂದ 30 ಸಾವಿರ ರೂಪಾಯಿಗೆ ಒಳಉಡುಪುಗಳನ್ನು ಖರೀದಿಸಿದ್ದಾರಂತೆ !!

ತಿಂಗಳಿಗೆ ಎಷ್ಟು ಸಂಪಾದನೆ?

ಕ್ಯಾಮಿಲ್ಲೆ, ಓನ್ಲಿ ಫ್ಯಾನ್ಸ್ ಖಾತೆಯಲ್ಲಿ ಯಾವುದೇ ನಗ್ನ ವಿಡಿಯೋ ಅಥವಾ ವಿಡಿಯೋವನ್ನು ಹಂಚಿಕೊಳ್ಳೋದಿಲ್ಲ. ಆಕೆ ತನ್ನ ದೇಹದ ಕೂದಲು ಕಾಣಿಸಿಕೊಳ್ಳುವ ಫೋಟೋಗಳನ್ನು ಕ್ಲಿಕ್ಕಿಸಿ ಹಾಕ್ತಿರುತ್ತಾಳೆ. ಆಕೆ ಫೋಟೋ ಹಾಗೂ ಆಕೆ ಕೂದಲಿಗೆ ಬೇಡಿಕೆ ಇದ್ದು, ಜನರು ಕ್ಯಾಮಿಲ್ಲೆ ವಸ್ತುಗಳನ್ನು ಖರೀದಿ ಮಾಡ್ತಾರೆ. ಕ್ಯಾಮಿಲ್ಲೆ ಈ ವಸ್ತುಗಳ ಮಾರಾಟದ ಮೂಲಕವೇ ತಿಂಗಳಿಗೆ ಎರಡು ಲಕ್ಷಕ್ಕಿಂತ ಹೆಚ್ಚು ರೂಪಾಯಿ ಸಂಪಾದನೆ ಮಾಡ್ತಾಳೆ.

Advertisement
Advertisement
Advertisement