ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

CAA Rules: ಸಿಎಎ ವಿರುದ್ಧ ವಿಶ್ವಸಂಸ್ಥೆ ಅಪಸ್ವರ

09:19 AM Mar 14, 2024 IST | ಹೊಸ ಕನ್ನಡ
UpdateAt: 10:22 AM Mar 14, 2024 IST
Advertisement

CAA Rules: "ಪೌರತ್ವ ತಿದ್ದುಪಡಿ ಕಾಯಿದೆ(ಸಿಎಎ) ಮೂಲಭೂತವಾಗಿ ತಾರತಮ್ಯದ ನಡೆಯಾಗಿದೆ.'' ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ. '2019ರಲ್ಲಿ ವಿಶ್ವಸಂಸ್ಥೆ ಅಭಿಪ್ರಾಯಪಟ್ಟಂತೆ ಸಿಎಎ ಸ್ವಾಭಾವಿಕವಾಗಿ ತಾರತಮ್ಯ ಭರಿತವಾಗಿದೆ. ಜತೆಗೆ ಇದು ಭಾರತೀಯ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ,'' ಎಂದು ರಾಯಿಟರ್ಸ್ ಸುದ್ದಿಸಂಸ್ಥೆಗೆ ವಿಶ್ವಸಂಸ್ಥೆಯ ಪ್ರಧಾನ ಆಯುಕ್ತರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ: PM Modi: ಬಿರುಸುಗೊಂಡ ಬಿಜೆಪಿ ಪ್ರಚಾರ; ಮಾ.16,18 ರಂದು ಮೋದಿ ಕ್ಯಾಂಪೇನ್‌ ಶುರು

"ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವ ಹಾಗೂ ಎಲ್ಲ ಸಮುದಾಯಗಳಿಗೆ ಸಮಾನ ಹಕ್ಕುಗಳು ನೆಲದ ಕಾನೂನು ಅಡಿಯಲ್ಲಿ ದೊರಕಬೇಕು. ಇದು ಪ್ರಜಾಪ್ರಭುತ್ವದ ಭೌಗೋಳಿಕವಾದ ಮೂಲಭೂತ ಸಿದ್ಧಾಂತಗಳಲ್ಲಿ ಪ್ರತಿಪಾದನೆಯಾಗಿದೆ,'' ಎಂದು ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಶ್ವಸಂಸ್ಥೆಯ ನಿಲುವಿಗೆ ಅಮೆರಿಕ ಸರಕಾರದ ಕೆಲವು ಇಲಾಖೆಗಳು ಬೆಂಬಲ ಸೂಚಿಸಿವೆ ಎಂದು ವರದಿಯಾಗಿದೆ.

Advertisement

ಇದನ್ನೂ ಓದಿ: CAA: ಸಿಎಎ ನೆರವಿಗೆ ಸಹಾಯವಾಣಿ ಪ್ರಾರಂಭ

Advertisement
Advertisement