ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

By Election: ದೇಶಾದ್ಯಂತ ನಡೆದ ಉಪಚುನಾವಣೆ- ಮತ್ತೆ ಮುಗ್ಗರಿಸಿದ NDA, ಇಂಡಿಯಾ ಕೂಟಕ್ಕೆ ಭರ್ಜರಿ ಗೆಲುವು !!

By Election: ಉಪಚುನಾವಣೆಯ ಫಲಿತಾಂಶ ನಿನ್ನೆ (Assembly ByPoll Result) ಪ್ರಕಟವಾಗಿದ್ದು, NDA ಕೂಟ ಮತ್ತೆ ಮುಗ್ಗರಿಸಿ ಇಂಡಿಯಾ ಕೂಟದೆದುರು ತಲೆ ಬಾಗಿದೆ.
08:33 AM Jul 14, 2024 IST | ಸುದರ್ಶನ್
UpdateAt: 08:33 AM Jul 14, 2024 IST
Advertisement

By Election: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ನಿನ್ನೆ (Assembly ByPoll Result) ಪ್ರಕಟವಾಗಿದ್ದು, NDA ಕೂಟ ಮತ್ತೆ ಮುಗ್ಗರಿಸಿ ಇಂಡಿಯಾ ಕೂಟದೆದುರು ತಲೆ ಬಾಗಿದೆ.

Advertisement

ಹೌದು, ಈ ವಿಧಾನಸಭೆ ಉಪ ಚುನಾವಣೆಯನ್ನು(Assembly By Election) ಬಿಜೆಪಿ(BJP)ಯ ಅಗ್ನಿ ಪರೀಕ್ಷೆ ಎಂದು ಪರಿಗಣಿಸಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ವಿಫಲವಾದ ಕಾರಣಕ್ಕೆ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿತ್ತು. ಆದರೂ ಎನ್‌ಡಿಎ ಮಿತ್ರ ಪಕ್ಷಗಳಿಂದ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು. ಈ ಚುನಾವಣೆ ಬಳಿಕ ನಡೆದ ಮೊದಲ ಉಪ ಚುನಾವಣೆಯಲ್ಲಿಯೂ ಬಿಜೆಪಿಗೆ ಆಘಾತ ಎದುರಾಗಿದೆ.

ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಲ್ಲಿ (Assembly Bypoll Result) ಇಂಡಿಯಾ ಒಕ್ಕೂಟ (INDIA Alliance) 10 ಸ್ಥಾನಗಳಲ್ಲಿ ಗೆಲುವು ಸಾಧಿಸಿ NDA ಕೂಟಕ್ಕೆ ಸೆಡ್ಡು ಹೊಡೆದಿದೆ. ಆದ್ರೆ ಆಡಳಿತ ಪಕ್ಷದ ಭಾಗವಾಗಿರುವ ಬಿಜೆಪಿ (BJP) ಕೇವಲ 2 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಒಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ. ಈ ಮೂಲಕ ಉಪಚುನಾವಣೆಯಲ್ಲೂ ಮೋದಿಗೆ ಭಾರೀ ಮುಖಭಂಗವಾಗಿದೆ.

Advertisement

ಇಂಡಿಯಾ ಕೂಟ ಗೆದ್ದ ಕ್ಷೇತ್ರಗಳು:
ಪಶ್ಚಿಮ ಬಂಗಾಳದ ನಾಲ್ಕು ಸ್ಥಾನಗಳು ಟಿಎಂಸಿ ಪಾಲಾಗಿವೆ. ಹಿಮಾಚಲ ಪ್ರದೇಶದ (Himachala Pradesh) ಮೂರು ಸ್ಥಾನಗಳ ಪೈಕಿ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಅಲ್ಲದೇ ಉತ್ತರಾಖಂಡದ ಎರಡೂ ಸ್ಥಾನಗಳನ್ನು ಗೆದ್ದುಕೊಂಡಿದೆ. ಪಂಜಾಬ್‌ ಕ್ಷೇತ್ರ ಎಎಪಿ ಪಾಲಾದರೆ, ತಮಿಳುನಾಡಿನ ಒಂದು ಕ್ಷೇತ್ರ ಡಿಎಂಕೆ ಗೆದ್ದುಕೊಂಡಿದೆ

ಬಿಜೆಪಿಗೆ 2 ಸ್ಥಾನ:
ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಕೇವಲ 2 ಕ್ಷೇತ್ರಗಳನ್ನು ಮಾತ್ರ ಗೆದ್ದುಕೊಂಡಿದೆ. ಹಿಮಾಚಲ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ತಲಾ ಒಂದೊಂದು ಸ್ಥಾನವನ್ನು ಗೆದ್ದುಕೊಂಡಿದೆ.

ಅಂದಹಾಗೆ ಪಶ್ಚಿಮ ಬಂಗಾಳ, ಉತ್ತರಾಖಂಡ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ತಮಿಳುನಾಡು, ಪಂಜಾಬ್ ಮತ್ತು ಬಿಹಾರ ರಾಜ್ಯಗಳ 13 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಶನಿವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿತ್ತು. ಜುಲೈ 10ರಂದು ಈ ಕ್ಷೇತ್ರಗಳಿಗೆ ಮತದಾನ ನಡೆದಿತ್ತು.

Ananth Ambani Marriage: ಅಂಬಾನಿ ಮಗನ ಮದುವೆ ಮಹೋತ್ಸವದಲ್ಲಿ ಪ್ರಧಾನಿ ಭಾಗಿ – ಮೋದಿ ಕೊಟ್ಟ ಉಡುಗೊರೆ ಏನು?

Related News

Advertisement
Advertisement