Infosys,TCS Salary: ದೇಶದ ಈ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗಿಗಳಿಗೆ ಕೊಡೋ ಸಂಬಳ ಎಷ್ಟು ಗೊತ್ತಾ?! ಅಬ್ಬಬ್ಬಾ.. ಕೇಳಿದ್ರೆ ಶಾಕ್ ಆಗ್ತೀರಾ
Infosys,TCS Salary: ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಲ್ಲರೂ ಒಳ್ಳೆಯ ನೌಕರಿ ಪಡೆಯಬೇಕು ಎಂದು ಬಯಸುವುದು ಸಹಜ. ಅದರಲ್ಲಿಯೂ ಇನ್ಫೋಸಿಸ್ (Infosys),ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ವಿಪ್ರೋ( WIPRO)ಎಚ್ಸಿಎಲ್ ಟೆಕ್ನಾಲಜೀಸ್ ಈ ರೀತಿಯ ಕಂಪನಿಗಳಲ್ಲಿ ಕೆಲಸ ಮಾಡಬೇಕು ಎನ್ನುವುದು ಹೆಚ್ಚಿನವರ ಕನಸು.ಆದರೆ, ಈ ಕಂಪನಿಗಳಲ್ಲಿ ಸಿಗುವ ಸಂಬಳ ಎಷ್ಟು ಗೊತ್ತಾ???
ಇದನ್ನು ಓದಿ: Bollywood:ಈ ಖ್ಯಾತ ನಟಿಗೆ ಕುಟುಂಬದಿಂದಲೇ ದೈಹಿಕ ದೌರ್ಜನ್ಯ, ಗಂಡನಿದಲೇ ಚಿತ್ರ ಹಿಂಸೆ - ವೈರಲ್ ಆಯ್ತು ಶಾಕಿಂಗ್ ವಿಡಿಯೋ
# ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್):
ಮಧ್ಯಮ ಮಟ್ಟದ ಪುರುಷ ಉದ್ಯೋಗಿಗಳಿಗೆ ಸರಾಸರಿ ಸಂಭಾವನೆ 2023 ರಲ್ಲಿ 14.23 ಲಕ್ಷ ರೂ. ಆಗಿದೆ.ಅದೇ ರೀತಿ, ಮಧ್ಯಮ ಮಟ್ಟದ ಮಹಿಳಾ ಉದ್ಯೋಗಿಗಳಿಗೆ ಸರಾಸರಿ ಸಂಭಾವನೆ 11.62 ಲಕ್ಷ ರೂ. ಇರುತ್ತದೆ.
# ವಿಪ್ರೋ:
ವಿಪ್ರೋ ಕಂಪನಿಯಲ್ಲಿ ಉದ್ಯೋಗಿಗಳಿಗೆ ಸರಾಸರಿ ಸಂಭಾವನೆ ವಾರ್ಷಿಕ 8.9 ಲಕ್ಷ ರೂ. ಆಗಿದೆ. ಇನ್ನು 2022 ಕ್ಕೆ ಹೋಲಿಕೆ ಮಾಡಿದರೆ 13.43%. ಶೇಕಡಾವಾರು ಹೆಚ್ಚಳ ಕಂಡಿದೆ.
# ಇನ್ಫೋಸಿಸ್:
ಇನ್ಫೋಸಿಸ್ ಕಂಪನಿಯಲ್ಲಿ ಉದ್ಯೋಗಿಗಳ ಸರಾಸರಿ ಸಂಭಾವನೆ ವಾರ್ಷಿಕ 9 ಲಕ್ಷ ರೂ. ಆಗಿರುತ್ತದೆ. ಇನ್ನೂ 2022ರಲ್ಲಿ ಹೋಲಿಸಿದರೆ 10.52%. ಶೇಕಡಾವಾರು ಹೆಚ್ಚಳವಾಗಿದೆ.
# ಲಾರ್ಸೆನ್ ಮತ್ತು ಟೂಬ್ರೊ (ಎಲ್&ಟಿ):
ಎಲ್&ಟಿಯಲ್ಲಿ ಉದ್ಯೋಗಿಗಳ ಸರಾಸರಿ ಸಂಭಾವನೆ ವಾರ್ಷಿಕ 8.88 ಲಕ್ಷ ರೂ. ಇರುತ್ತದೆ.
# ಎಚ್ಸಿಎಲ್ ಟೆಕ್ನಾಲಜೀಸ್:
ಎಚ್ಸಿಎಲ್ನಲ್ಲಿ ಉದ್ಯೋಗಿಗಳ ಸರಾಸರಿ ಸಂಭಾವನೆ ವಾರ್ಷಿಕ 11.3 ಲಕ್ಷ ರೂ. ಆಗಿರುತ್ತದೆ. 2022 ಕ್ಕೆ ಹೋಲಿಕೆ ಮಾಡಿದರೆ 0.01%. ಶೇಕಡಾವಾರು ಹೆಚ್ಚಳ ಕಂಡಿದೆ.
ಇದನ್ನು ಓದಿ: Bigg Boss: ಬಿಗ್ ಬಾಸ್ ಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ !! ಇವರೇ ನೋಡಿ ಆ ಖ್ಯಾತ ಸೆಲೆಬ್ರಿಟಿ !!