ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bubonic plague: ಮನೆಯಲ್ಲಿ ಬೆಕ್ಕು ಸಾಕ್ತೀರಾ?! ಹಾಗಿದ್ರೆ ಹುಷಾರ್, ನಿಮಗೂ ಬರಬಹುದು ಮಾರಣಾಂತಿಕವಾದ ಈ ರೋಗ

01:47 PM Feb 14, 2024 IST | ಹೊಸ ಕನ್ನಡ
UpdateAt: 01:47 PM Feb 14, 2024 IST
Advertisement

Bubonic plague: ಸಾಕು ಪ್ರಾಣಿಗಳಾದ ಬೆಕ್ಕು, ನಾಯಿಗಳೆಂದರೆ ಹಲವರಿಗೆ ಬಲು ಪ್ರೀತಿ. ಮನೆಯಲ್ಲಿ ಇವುಗಳಿಗೆ ಮನೆಯ ಸದಸ್ಯರಷ್ಟೇ ಪ್ರಾಮುಖ್ಯತೆ ಇರುತ್ತದೆ. ಜೊತೆಗೆ ಊಟ, ಪಕ್ಕದಲ್ಲೇ ಮಲಗಿಸಿಕೊಳ್ಳುವುದು ಹೀಗೆ ಎಲ್ಲದರಲ್ಲೂ ಅವು ಬೇಕಾಗಿರುತ್ತವೆ. ಆದರೀಗ ಅಘಾತಕಾರಿ ಸತ್ಯವೊಂದು ಬಯಲಾಗಿದ್ದು, ಸಾಕುಬೆಕ್ಕಿನಿಂದ ಮಾರಣಾಂತಿಕ ರೋಗವೊಂದು ಮನುಷ್ಯರಿಗೆ ಬರುತ್ತಿದೆ ಎಂದು ವರದಿಯಾಗಿದೆ.

Advertisement

 

ಹೌದು, ಅದು 14ನೇ ಶತಮಾನದ ಕಾಲ. ಅಮೆರಿಕದ ಒರೆಗಾನ್‌ನಲ್ಲಿ ಉಲ್ಬಣಗೊಂಡಿದ್ದ ಬುಬೊನಿಕ್ ಪ್ಲೇಗ್(Bubonic plague) ಎಂಬ ರೋಗ ಬರೋಬ್ಬರಿ 50 ಮಿಲಿಯನ್ ಜನರ ಸಾವಿಗೆ ಕಾರಣವಾಗಿತ್ತು. ಈ ರೋಗ ಮತ್ತೆ ಪತ್ತೆಯಾಗಿದೆ. ಅಘಾತಕಾರಿ ಸಂಗತಿ ಎಂದರೆ ಈ ರೋಗವು ಸಾಕು ಬೆಕ್ಕಿನಿಂದ ಹರಡುತ್ತದೆ!!

Advertisement

 

ಏನಿದು ಖಾಯಿಲೆ?

ಬ್ಲ್ಯಾಕ್ ಡೆತ್ ಎಂದು ಕರೆಯಲ್ಪಡುವ ಈ ಪ್ಲೇಗ್‌ ಸಾಂಕ್ರಾಮಿಕ ಸಮಯದಲ್ಲಿ ಮಧ್ಯಯುಗದಲ್ಲಿ ಯುರೋಪಿನ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರ ಸಾವಿಗೆ ಕಾರಣವಾಗಿತ್ತು. ಹಿಂದೆ ಇದಕ್ಕೆ ಚಿಕಿತ್ಸೆಯೂ ಇರಲ್ಲಿಲ್ಲ. ಈಗ ಚಿಕಿತ್ಸೆ ನೀಡಬಹುದಾದರೂ ಅಪಾಯಕಾರಿಯಾಗಿ ಉಳಿದಿದೆ.

 

ಈ ರೋಗದ ಲಕ್ಷಣಗಳೇನು?

ಹಠಾತ್ ಜ್ವರ, ವಾಕರಿಕೆ, ದೌರ್ಬಲ್ಯ, ಶೀತ ಮತ್ತು ಸ್ನಾಯು ನೋವುಗಳ ಹಠಾತ್ ಆಕ್ರಮಣವನ್ನು ಬುಬೊನಿಕ್ ಪ್ಲೇಗ್‌ನ ಲಕ್ಷಣಗಳು ಒಳಗೊಂಡಿದೆ. ಸೋಂಕಿತ ಪ್ರಾಣಿ ಅಥವಾ ಚಿಗಟಕ್ಕೆ ಒಡ್ಡಿಕೊಂಡ ಎರಡರಿಂದ ಎಂಟು ದಿನಗಳ ನಂತರ ಬಬೊನಿಕ್ ಪ್ಲೇಗ್‌ನ ರೋಗಲಕ್ಷಣಗಳು ಪ್ರಾರಂಭವಾಗುತ್ತವೆ.

 

ಏನೇನು ಸಮಸ್ಯೆ ತರುತ್ತದೆ?

ಬುಬೊನಿಕ್ ಪ್ಲೇಗ್‌ನ್ನು ಮೊದಲೇ ಗುರುತಿಸದಿದ್ದರೆ ರಕ್ತಪ್ರವಾಹ ಮತ್ತು ಶ್ವಾಸಕೋಶದ ಸೋಂಕುಗಳಿಗೆ ಕಾರಣವಾಗಬಹುದು. ರೋಗದ ಈ ರೂಪಗಳು ಹೆಚ್ಚು ತೀವ್ರವಾಗಿರುತ್ತವೆ ಮತ್ತು ಚಿಕಿತ್ಸೆ ನೀಡಲು ಕಷ್ಟಕರವಾಗುತ್ತದೆ

ಇದನ್ನೂ ಓದಿ : ಬಿಜೆಪಿಗೆ ಮರಳುವ ಭಯ,ಲಕ್ಷ್ಮಣ ಸವದಿಗೆ ಬಂಪರ್ ಗಿಫ್ಟ್ ನೀಡಿದ ಸಿದ್ದರಾಮಯ್ಯ!!

Advertisement
Advertisement