ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Boy Urinating In Lift : ಸೊಕ್ಕು ಹೆಚ್ಚಾಗಿ ಲಿಫ್ಟ್ ಒಳಗೆ ಮೂತ್ರ ವಿಸರ್ಜಿಸಿದ ಬಾಲಕ - ಅಲ್ಲೇ ರಿಟರ್ನ್ಸ್ ಆಯ್ತು 'ಕರ್ಮ' !! ವಿಡಿಯೋ ನೋಡಿದ್ರೆ ನೀವೂ ಶಾಕ್ ಆಗ್ತೀರಾ

10:09 AM Dec 17, 2023 IST | ಅಶ್ವಿನಿ ಹೆಬ್ಬಾರ್
UpdateAt: 10:41 AM Dec 17, 2023 IST
Advertisement

Boy Urinating In Lift: ಸಾಮಾನ್ಯವಾಗಿ ಬಾಲ್ಯದಲ್ಲಿ ಕೆಲ ಮಕ್ಕಳು ತರಲೆ, ತಂಟೆ,ಬೇಕೆಂದು ಉಳಿದವರಿಗೆ ಉಪಟಳ ಕೊಡುವುದು ಸಹಜ. ಆದರೆ, ಇದೆ ವರ್ತನೆ ಮುಂದುವರಿದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನುವುದು ಸುಳ್ಳಲ್ಲ. ಬಾಲಕನೊಬ್ಬ ಲಿಫ್ಟ್ ನಲ್ಲಿ ಮಾಡಿದ ಕಿತಾಪತಿಯಿಂದ ತಾನೇ ಫಜೀತಿಗೆ ಸಿಲುಕಿದ ಘಟನೆ ವರದಿಯಾಗಿದೆ.

Advertisement

ಕೆಲವು ಪುಂಡ ಮಕ್ಕಳು ಪಕ್ಕದ ಮನೆಯವರ ಕಿಟಕಿ ಬಾಗಿಲಿಗೆ ಕಲ್ಲು ಎಸೆಯುವ, ಶಾಲೆಯಲ್ಲಿ ಸಹಪಾಟಿಗಳ ಜೊತೆ ಬೇಕೆಂದು ಜಗಳವಾಡುವುದು. ಸಾರ್ವಜನಿಕ ವಸ್ತುಗಳನ್ನು ಹಾಳು ಮಾಡುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಅದೇ ರೀತಿ ಬಾಲಕನೊಬ್ಬ ಪುಂಡಾಟ ಮೆರೆಯಲು ಹೋಗಿ ತಾನೇ ಸಂಕಷ್ಟಕ್ಕೆ ಸಿಲುಕಿದ ವೀಡಿಯೋ ವೈರಲ್ (Viral Video)ಆಗಿದೆ.

ಬಾಲಕನೊಬ್ಬ ಲಿಫ್ಟ್ ಒಳಗಡೆ ಮೂತ್ರವಿಸರ್ಜನೆ ಮಾಡಿ(Boy Urinating In Lift) ದುರ್ವರ್ತನೆ ತೋರಿದ್ದು, ಇದಾದ ಕೆಲವು ಹೊತ್ತಿನಲ್ಲಿ ಲಿಫ್ಟ್ ಕೆಟ್ಟು ಹೋಗಿದೆ. ಇದರಿಂದ ಬಾಲಕ ಪೇಚಿಗೆ ಸಿಲುಕಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಮಾಡಿದುನ್ನೋ ಮಹರಾಯ ಎಂಬ ಮಾತಿನಂತೆ ಆಗಿಬಿಟ್ಟಿದೆ. ಕರ್ಮ ಯಾರನ್ನು ಸುಮ್ಮನೆ ಬಿಡೋದಿಲ್ಲ ಎಂಬುದಕ್ಕೆ ಇದಕ್ಕೆ ಉತ್ತಮ ಉದಾಹರಣೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

@NoContextHumans ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಡಿಸೆಂಬರ್ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6.2 ಮಿಲಿಯನ್ ವೀಕ್ಷಣೆ ಪಡೆದಿದೆ. 22 ಸೆಕೆಂಡಿರುವ ವಿಡಿಯೋದಲ್ಲಿ ಲಿಫ್ಟ್ ಒಳಗಡೆ ನಿಂತಿದ್ದ ಬಾಲಕನೊಬ್ಬ ಏಕಾಏಕಿ ಪ್ಯಾಂಟ್ ಜಿಪ್ ಓಪನ್ ಮಾಡಿ ಇಲೆವೇಟರ್ ಕಂಟ್ರೋಲ್ ಪ್ಯಾನಲ್ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈತನ ದುರ್ನಡತೆಗೆ ಸರಿಯಾಗಿ ಲಿಫ್ಟ್ ಒಳಗೆ ಲೈಟ್ಸ್ ಆನ್ ಆಫ್ ಆಗಿ ಲಿಫ್ಟ್ ನಿಂತುಹೋಗುವ ದೃಶ್ಯವಾವಳಿ ವೈರಲ್ ಆಗಿದೆ. ವೈರಲ್ ಆದ ಈ ವೀಡಿಯೋ ತರಹೇವಾರಿ ಕಾಮೆಂಟ್ಸ್ ಪಡೆದುಕೊಂಡಿದೆ.

 

Related News

Advertisement
Advertisement