ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Basavarj Bommai: ಪ್ರತಾಪ್ ಸಿಂಹಗೆ ಈ ಸಲ ಯಾಕೆ ಟಿಕೆಟ್ ಕೊಡಲಿಲ್ಲ ಗೊತ್ತಾ? ಬೊಮ್ಮಾಯಿ ಬಿಚ್ಚಿಟ್ಟರು ಹೊಸ ಸತ್ಯ!!

02:40 PM Mar 21, 2024 IST | ಕೆ. ಎಸ್. ರೂಪಾ
UpdateAt: 05:24 PM Mar 26, 2024 IST
Advertisement

Basavarj Bommai: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ 20 ಕ್ಷೇತ್ರಗಳಿಗೆ ಬಿಜೆಪಿ ಅಚ್ಚರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ ಹಲವು ಹಾಲಿ ಸಂಸದರಿಗೆ ಕೋಕ್ ನೀಡಲಾಗಿದೆ. ಆದರೆ ಅವರಲ್ಲಿ ಹೆಚ್ಚು ಸದ್ದು ಮಾಡಿದ ವಿಚಾರ ಅಂದ್ರೆ ಯುವ ನಾಯಕ ಪ್ರತಾಪ್ ಸಿಂಹಗೆ(Pratap Simha) ಈ ಸಲ ಬಿಜೆಪಿ ಟಿಕೆಟ್ ನೀಡದಿರುವುದು. ಹೈಕಮಾಂಡ್ ಯಾಕೆ ಹೀಗೆ ಮಾಡಿತು ಎಂದು ಅನೇಕ ಅಭಿಮಾನಿಗಳಿಗೆ, ಮತದಾರರಿಗೆ ಯಕ್ಷ ಪ್ರಶ್ನೆಯಾಗಿತ್ತು. ಆದರೀಗ ಇದಕ್ಕೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai) ಉತ್ತರ ನೀಡಿದ್ದಾರೆ.

Advertisement

ಇದನ್ನೂ ಓದಿ: B N Bacche Gowda: ಬಿಜೆಪಿಗೆ ರಾಜೀನಾಮೆ ನೀಡಿದ ಚಿಕ್ಕಬಳ್ಳಾಪುರದ ಹಾಲಿ ಸಂಸದ ಬಚ್ಚೇಗೌಡ !!

ಹೌದು, ಕೊಡಗು-ಮೈಸೂರು ಕ್ಷೇತ್ರದಿಂದ 2 ಅವಧಿಗೆ ಸಂಸದರಾಗಿ ಆಯ್ಕೆಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಪ್ರತಾಪ್ ಸಿಂಹ ಅವರ ಈ ಸಲದ ಟಿಕೆಟ್ ಯದುವೀರ್ ಅವರ ಪಾಲಾಗಿದೆ. ಆದರೆ ಯುವ ನೇತಾರ, ನಾಯಕನಿಗೆ ಬಿಜೆಪಿ ಯಾಕೆ ಹೀಗೆ ಮಾಡಿತು ಎಂದು ಎಲ್ಲರೂ ಬೇಸರ ಪಟ್ಟುಕೊಂಡಿದ್ದರು. ಆದರೆ ಇದೀಗ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಬೊಮ್ಮಾಯಿ ಅವರು ಪ್ರತಾಪ್ ಸಿಂಹಗೆ ಟಿಕೆಟ್ ಏಕೆ ನೀಡಲಿಲ್ಲ ಅನ್ನೋದನ್ನು ಹೇಳಿದ್ದಾರೆ.

Advertisement

ಇದನ್ನೂ ಓದಿ: DV Sadanada Gowda: ನಾನು ಬಿಜೆಪಿ ಬಿಡುವುದಿಲ್ಲ, ಕಾಂಗ್ರೆಸ್‌ ಸೇರುವುದಿಲ್ಲ : ಮಾಜಿ ಸಚಿವ ಡಿ. ವಿ. ಸದಾನಂದ

ಮೊದಲಿಗೆ ಪ್ರತಾಪ್ ಸಿಂಹರನ್ನು ಹಾಡಿ ಹೊಗಳಿದ ಬೊಮ್ಮಾಯಿ ಪ್ರತಾಪ್ ಯುವ ನಾಯಕರಾಗಿ, ಎರಡು ಅವಧಿಗೆ ಸಂಸದರಾಗಿ ನಿರೀಕ್ಷೆ ಮೀರಿ ಕೆಲಸ ಮಾಡಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮ, ಕೆಲಸ ನೆರವೇರಿಸಿದ್ದಾರೆ. ಆದರೆ ವರಿಷ್ಠರು ಪ್ರಯೋಗದ ದೃಷ್ಟಿಯಿಂದ, ಬದಲಾವಣೆ ತರುವ ಉದ್ದೇಶದಿಂದ, ಹೊಸಬರಿಗೆ ಅವಕಾಶ ಕೊಡುವ ಯೋಜನೆಯೊಂದಿಗೆ ಈ ಸಲ ಬೇರೆಯವರಿಗೆ ಟಿಕೆಟ್ ನೀಡಿದ್ದಾರೆ. ಅವಕಾಶ ಇವರು ಕ್ಷೇತ್ರಗಳಲ್ಲಿ ಇದು ನಡೆದಿದೆ ಅಷ್ಟೇ. ಇದರ ಹಿಂದೆ ಬೇರಾವ ಉದ್ದೇಶ ಇಲ್ಲ, ಪ್ರತಾಪ್ ಅವರು ಮುಂದೆಯೂ ನಮ್ಮೊಂದಿಗೆ ಇರುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Neha Sharma: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾಳೆ ಬಾಲಿವುಡ್ ನ ಈ ಹಾಟ್ ಬೆಡಗಿ

Advertisement
Advertisement