ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

BMTC Bus: ಹೊಸ ವರ್ಷಕ್ಕೆ ಬಿಎಂಟಿಸಿ ಕಡೆಯಿಂದ ಬಿಗ್ ಗಿಫ್ಟ್! ಇಲ್ಲಿದೆ ನೋಡಿ ನ್ಯೂ ಅಪ್ಡೇಟ್

11:40 AM Dec 20, 2023 IST | ಹೊಸ ಕನ್ನಡ
UpdateAt: 11:59 AM Dec 20, 2023 IST
Advertisement

ಹೊಸವರ್ಷ ಇನ್ನೇನು ಬರ್ತಾ ಇದೆ. ಇದಕ್ಕಂತೂ ಎಲ್ಲರೂ ತುಂಬಾ ಕಾತುರತೆಯಿಂದ ಕಾಯ್ತಾ ಕೂಡ ಇದ್ದಾರೆ. 2023 ಹೇಗೆ ಮುಗಿಯಿತು ಅಂತ ಗೊತ್ತೇ ಆಗಿಲ್ಲ ಅಲ್ವಾ? 2024 ಕೂಡ ಹಾಗೆ ಆಗುತ್ತಾ ಅಂತ ನೋಡಬೇಕು ಅಷ್ಟೇ. ಇವುಗಳ ನಡುವೆ ಬಿಎಂಟಿಸಿ ಒಂದು ಗುಡ್ ನ್ಯೂಸ್ ಕೊಟ್ಟಿದೆ. ಏನು ಅಂತ ತಿಳಿಯೋಣ ಬನ್ನಿ.

Advertisement

ಬಿಎಂಟಿಸಿ ಹೊಸದಾಗಿ 100 ಹೊಸ ನಾನ್-ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಬೆಂಗಳೂರಿನ ರಸ್ತೆಗೆ ಇಳಿಸಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಬಸ್​ಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ಇದನ್ನೇ ಕೆಲ ಕಿಡಿಗೇಡಿಗಳು ಲಾಭವನ್ನಾಗಿ ಮಾಡಿಕೊಳ್ಳುತ್ತಿರೋ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹೊಸ ನಾನ್ ಎಸಿ ಎಲೆಕ್ಟ್ರಿಕ್ ಬಸ್ಗಳನ್ನು ಟಾಟಾ ಮೋಟಾರ್ಸ್ ತಯಾರಿಸಿದ್ದು, ಬೆಂಗಳೂರು ನಗರ ಮತ್ತು ಉಪನಗರ ಪ್ರದೇಶಗಳು ಸೇರಿದಂತೆ 12 ಮಾರ್ಗಗಳಲ್ಲಿ ಬಸ್ಗಳು ಕಾರ್ಯನಿರ್ವಹಿಸಲಿವೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.

ಇದನ್ನು ಓದಿ: KSRTC ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್- ಪುರುಷರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ವಿತರಣೆ !!

Advertisement

ಬಿಎಂಟಿಸಿ ನಿಗಮವು ಸರ್ಜಾಪುರ, ಚಂದಾಪುರ, ಬನ್ನೇರುಘಟ್ಟ ರಸ್ತೆ ಮತ್ತಿತರ ಮಾರ್ಗಗಳಲ್ಲಿ ಈ ಬಸ್‌ಗಳನ್ನು ಓಡಿಸುವ ಸಾಧ್ಯತೆಯಿದೆ. ಬಸ್ ದರಗಳು ಸಾಮಾನ್ಯ ಬಸ್‌ಗಳ ಟಿಕೆಟ್ ದರಕ್ಕೆ ಸಮನಾಗಿರುತ್ತದೆ. ಶಕ್ತಿ ಯೋಜನೆಯ ಫಲಾನುಭವಿಗಳು ಈ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಟ್ಟಾರೆ ಉಚಿತ ಪ್ರಯಾಣದ ಫಲಾನುಭವಿ ಮಹಿಳೆಯರು ಸೇರಿದಂತೆ ಪ್ರಯಾಣಿಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

ಒಟ್ಟಿನಲ್ಲಿ ಹೊಸ ವರ್ಷಕ್ಕೆ ಹೊಸ ಬಸ್ಗಳು ಬರ್ತಾ ಇರೋದು ನಿಜಕ್ಕೂ ಸಾರ್ವಜನಿಕರಿಗೆ ಕೃಷಿ ಕೊಡುವಂತಹ ವಿಚಾರವೇ ಹೌದು. ಮುಂದಿನ ದಿನದಲ್ಲಿ ಈ ವಿಷಯದ ಬಗ್ಗೆ ಇನ್ನಷ್ಟು ಅಪ್ಡೇಟ್ಗಳನ್ನು ಕೊಡಲಾಗುತ್ತೆ.

Advertisement
Advertisement