BJP MP Kangana: ಸಂಸದೆ, ಚಿತ್ರ ನಟಿ ಕಂಗನಾ ರಾಣಾವತ್ ರಿಂದ ಸಾರ್ವಜನಿಕರಿಗೆ ಹೊಸ ರೂಲ್ಸ್ ಜಾರಿ
BJP MP Kangana: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದೆಯಾಗಿರುವ ಚಿತ್ರನಟಿ ಕಂಗನಾ ರಣಾವತ್ ಅವರು ಹೊಸ ರೂಲ್ಸ್ ಒಂದು ಜಾರಿಗೆ ತಂದಿದ್ದಾರೆ. ರೂಲ್ಸ್ ಪ್ರಕಾರ, ನನ್ನನ್ನು ಭೇಟಿಯಾಗಲು ಬರುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು ಎಂದು ಸಂಸದೆ ಒಬ್ಬರು ಹೇಳಿದ್ದು ಇದೀಗ ಎಲ್ಲೆಡೆ ಚರ್ಚೆಗೆ ಕಾರಣ ಆಗಿದೆ.
ಹೌದು, ಪೂಜೆಯ ನಂತರ ತಮ್ಮ ಕಚೇರಿಯಲ್ಲಿ ಕೆಲಸ ಆರಂಭಿಸಿದ ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಕಂಗನಾ (BJP MP Kangana) , ಮಂಡಿ ಲೋಕಸಭಾ ಕ್ಷೇತ್ರದ ಜನರು ನನ್ನನ್ನು ಭೇಟಿ ಮಾಡಲು ಬಯಸಿದರೆ, ಅವರು ಆಧಾರ್ ಕಾರ್ಡ್ ತಂದರೆ ಒಳ್ಳೆಯದು ಏಕೆಂದರೆ ಅವರು ಮಂಡಿ ಸಂಸದೀಯ ಕ್ಷೇತ್ರದವರೇ ಅಥವಾ ಬೇರೆ ಜನರಿರಬಹುದಾ ಎಂಬುದು ತಿಳಿಯುತ್ತದೆ ಎಂದು ಕಂಗನಾ ಹೇಳಿದ್ದಾರೆ.
Daiva Miracle: ಕರಾವಳಿಯಲ್ಲಿ ದೈವ ಪವಾಡ; 24 ಗಂಟೆಯಲ್ಲಿ ಕಳ್ಳನನ್ನು ಹಿಡಿದು ಕೊಟ್ಟ ದೈವ
Advertisement
ಅಲ್ಲದೆ ನನ್ನನ್ನು ಭೇಟಿಯಾಗಲು ಬರುವವರು ಯಾವುದೇ ರೀತಿಯ ತೊಂದರೆಯಾಗದಂತೆ ತಮ್ಮ ಭೇಟಿಯ ಉದ್ದೇಶವನ್ನು ಪೇಪರ್‌ನಲ್ಲಿ ಬರೆದುಕೊಳ್ಳಬೇಕು, ಎಂದು ಹೇಳಿದ್ದಾರೆ. ನಿಮ್ಮ ಸಂಸದೀಯ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳನ್ನು ಸಹ ಪತ್ರದಲ್ಲಿ ಬರೆಯಬೇಕು, ಇದರಿಂದ ನೀವು ಯಾವುದೇ ನಷ್ಟ ಎದುರಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.
ಆಧಾರ್ ಕಾರ್ಡ್ ಹೊಂದಿರುವುದು ಅವಶ್ಯಕ. ಇದರಿಂದ ನೀವು ಯಾವುದೇ ಅನಾನುಕೂಲತೆಯನ್ನು ಎದುರಿಸುವುದಿಲ್ಲ. ನೀವು ಮೇಲಿನ ಹಿಮಾಚಲ ಪ್ರದೇಶದವರಾಗಿದ್ದರೆ ನಮ್ಮ ಕುಲು ಮನಾಲಿ ಮನೆಗೆ ಬನ್ನಿ. ನೀವು ಮಂಡಿಯವರಾಗಿದ್ದರೆ ಮಂಡಿ ಕಚೇರಿಗೆ ಬನ್ನಿ. ನೀವು ಹಿಮಾಚಲದ ಕೆಳಗಿನವರಾಗಿದ್ದರೆ ಸದಾ ಘಾಟ್‌ನಲ್ಲಿರುವ ನನ್ನ ಕಚೇರಿಗೆ ಬನ್ನಿ. ಕೆಲಸದ ವಿಚಾರವಾಗಿ ಯಾರನ್ನಾದರೂ ಖುದ್ದಾಗಿ ಭೇಟಿಯಾದರೆ ತುಂಬಾ ಒಳ್ಳೆಯದು ಎಂದಿದ್ದಾರೆ ಕಂಗನಾ. ಜನರು ತಮ್ಮ ಸಮಸ್ಯೆಗಳನ್ನು ಅಂಚೆ ಮೂಲಕವೂ ಹೇಳಬಹುದು. ಹೇಳಿಕೊಂಡಿದ್ದಾರೆ.
ಆದರೆ ಈ ಕುರಿತು ಮಂಡಿಯಿಂದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯಾಗಿದ್ದ ಮತ್ತು ಪ್ರಸ್ತುತ ಹಿಮಾಚಲ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿರುವ ವಿಕ್ರಮಾದಿತ್ಯ ಸಿಂಗ್, ಜನಪ್ರತಿನಿಧಿಯೊಬ್ಬರು ತಮ್ಮ ಸಂಸದೀಯ ಕ್ಷೇತ್ರದ ಜನರಿಗೆ ಬೇಕಾದರೆ ಬರಲಿ ಎಂದು ಹೇಳುವುದು ಉತ್ತಮ ನಡವಳಿಕೆಯಲ್ಲ, ಸ್ವಂತ ರಾಜ್ಯದವರೇ ಆಗಿರಲಿ, ಪ್ರವಾಸಿಗರೇ ಇರಲಿ, ಸಾರ್ವಜನಿಕ ಪ್ರತಿನಿಧಿಗಳು ಎಲ್ಲರನ್ನೂ ಭೇಟಿಯಾಗಬೇಕು ಎಂದು ಕಂಗನಾ ರಣಾವತ್ ವಿರುದ್ಧ ವ್ಯಂಗ್ಯವಾಡಿದ್ದು, ಆದರೆ ನೀವು ನನ್ನನ್ನು ಭೇಟಿಯಾಗಲು ಬಯಸಿದರೆ ಆಧಾರ್ ಕಾರ್ಡ್ ಅಗತ್ಯವಿಲ್ಲ ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
Ripponpet: ಮೂತ್ರ ವಿಸರ್ಜನೆ ಮಾಡುತ್ತಿರುವಾಗ ಕರೆಂಟ್ ಶಾಕ್; ವಿದ್ಯಾರ್ಥಿ ಸಾವು