For the best experience, open
https://m.hosakannada.com
on your mobile browser.
Advertisement

K S Eshwarappa: ಈಶ್ವರಪ್ಪ ಬಂಡಾಯ ಸ್ಪರ್ಧೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ?!

K S Eshwarappa: ಪಕ್ಷೇತರವಾಗಿ ಕಣಕ್ಕಿಳಿಯಲು ಮುಂದಾಗಿರುವ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ನನ್ನ ಸ್ಪರ್ಧೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಹೇಳಿದ್ದಾರೆ.
12:19 PM Apr 05, 2024 IST | ಸುದರ್ಶನ್
UpdateAt: 12:19 PM Apr 05, 2024 IST
k s eshwarappa  ಈಶ್ವರಪ್ಪ ಬಂಡಾಯ ಸ್ಪರ್ಧೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್
Advertisement

K S Eshwarappa: ಯಡಿಯೂರಪ್ಪ(Yadiyurappa) ಹಾಗೂ ಕುಟುಂಬ ರಾಜಕಾರಣದ ವಿರುದ್ಧ ಬಂಡಾಯವೆದ್ದು ಶಿವಮೊಗ್ಗದಿಂದಲೇ ಪಕ್ಷೇತರವಾಗಿ ಕಣಕ್ಕಿಳಿಯಲು ಮುಂದಾಗಿರುವ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ(KS Eshwarappa) ನನ್ನ ಸ್ಪರ್ಧೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: Weather Update: ಬಿಸಿಲಿನ ಬೇಗೆಗೆ, ಬಸವಳಿದ ಬೆಂಗಳೂರಿಗರಿಗೆ ತಂಪೆರವ ಸುದ್ದಿ ನೀಡಿದ ಹವಾಮಾನ ಇಲಾಖೆ

ಬಂಡಾಯ ಅಭ್ಯರ್ಥಿ ಬಿಜೆಪಿ(BJP) ನಾಯಕ ಕೆಎಸ್ ಈಶ್ವರಪ್ಪಗೆ ಕೆಲವು ದಿನಗಳ ಹಿಂದೆ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ(Amith Shah) ಕರೆ ಮಾಡಿ ಮಾತನಾಡಿ, ದೆಹಲಿಗೆ ಬರುವಂತೆಯೂ ಸೂಚಿಸಿದ್ದರು. ಆದರೆ ಇದನ್ನು ಗೌಪ್ಯವಾಗಿಡುವುದನ್ನು ಬಿಟ್ಟು ಈಶ್ವರಪ್ಪನವರು ಬಹಿರಂಗಪಡಿಸಿ ದೆಹಲಿಗೆ ತೆರಳಿದ್ದರು. ಇದದರಿಂದ ಕೆರಳಿದ ಅಮಿತ್ ಶಾ ಈಶ್ವರಪ್ಪನವರಿಗೆ ಭೇಟಿ ಮಾಡಲು ಅವಕಾಶ ಕೊಡದೆ ಹಾಗೇ ವಾಪಸ್ ಕಳಿಸಿದ್ದಾರೆ.

Advertisement

ಇದನ್ನೂ ಓದಿ: Puttur: ಪ್ರೀತಿ-ಪ್ರೇಮ ವಿಚಾರ; ಹುಡುಗಿ ವಿಷಯಕ್ಕೆ ಬರಬೇಡ ಎಂದು ಯುವಕನಿಗೆ ಹಲ್ಲೆ, ಜೀವಬೆದರಿಕೆ; ಪ್ರಕರಣ ದಾಖಲು

ಹೌದು, ಅಮಿತ್‌ ಶಾ(Amith Sha) ಅವರ ಭೇಟಿಗೆ ಅವಕಾಶ ಸಿಗದೆ, ಬೆಂಗಳೂರಿನತ್ತ ವಾಪಸ್‌ ಆಗಿದ್ದಾರೆ. ಇದನ್ನೇ ಬಂಡವಾಳವಾಗಿ, ಪಾಸಿಟಿವ್ ಆಗಿ ತೆಗೆದುಕೊಂಡಿರುವ ಈಶ್ವರಪ್ಪ ನನ್ನ ಸ್ಪರ್ಧೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಅಂದರೆ ನನ್ನನ್ನು ಭೇಟಿಯಾಗುವುದು ಬೇಡ ಎಂದು ಅಮಿತ್ ಶಾ ಹೇಳಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗುವುದಿಲ್ಲ. ಈಶ್ವರಪ್ಪ ಚುನಾವಣೆಗೆ ನಿಲ್ಲಲಿ, ರಾಘವೇಂದ್ರ ಚುನಾವಣೆಯಲ್ಲಿ ಸೋಲಲಿ. ಈ ಸಂದೇಶವನ್ನು ಕೇಂದ್ರ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ ಅಮಿಶ್ ಶಾ ದೆಹಲಿಗೆ ಬರಲು ಹೇಳಿದ್ದರು ಅಷ್ಟು ದೊಡ್ಡವರು ಕರೆದಾಗ ಗೌರವ ಕೊಟ್ಟು ದೆಹಲಿಗೆ ಹೋದೆ. ರಾಜೇಶ್ ಜಿ ಅವರ ಮನೆಗೆ ತೆರಳಲು ಸೂಚಿಸಿದ್ದರು ನಾನು ದೆಹಲಿ ತಲುಪಿ ಅಮಿತ್ ಶಾ ಮನೆಗೆ ಫೋನ್ ಮಾಡಿದೆ ಫೋನ್ ಮೂಲಕ‌ಭೇಟಿ ಅವಶ್ಯಕತೆ ಇಲ್ಲ ಎಂದು ತಿಳಿಸಿದರು ವಾಪಸು ಮನೆಗೆ ಹೋಗಲು ತಿಳಿಸಿದರು. ಹೀಗಾಗಿ ಮರಳಿ ಬಂದಿದ್ದೇನೆ ಎಂದು ಹೇಳಿದ್ದಾರೆ.

ಈಶ್ವರಪ್ಪ ಬಂಡಾಯವೇಕೆ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಈಶ್ವರಪ್ಪನವರಿಗೆ ಈ ಸಲ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ, ಮುಂದೆ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮಗ ಕಾಂತೇಶ್ ಗೆ ಹಾವೇರಿ ಲೋಕಸಭಾ ಟಿಕೆಟ್ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಹಾವೇರಿ ಲೋಕಸಭೆ ಕ್ಷೇತ್ರ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಹೈಕಮಾಂಡ್‌ ಬಿಗ್‌ ಶಾಕ್‌ ನೀಡಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್‌ ನೀಡಿತ್ತು. ಇದರಿಂಗಾಗಿ ಕೊಟ್ಟ ಮಾತಿಗೆ ಬಿ ಎಸ್‌ ಯಡಿಯೂರಪ್ಪ ಅವರು ತಪ್ಪಿದ್ದಾರೆ, ನನಗೆ ಮೋಸವಾಗಿದೆ ಎಂದು ಕೆ ಎಸ್‌ ಈಶ್ವರಪ್ಪ ಅವರು, ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಚಿಂತಿಸಿದ್ದಾರೆ.

Advertisement
Advertisement
Advertisement