For the best experience, open
https://m.hosakannada.com
on your mobile browser.
Advertisement

Elon Musk: ಡ್ರಗ್ಸ್ ಸೇವನೆಯಿಂದ ಟೆಸ್ಲಾ ಕಂಪನಿ ಮುನ್ನಡೆಸಲು ಸಾಧ್ಯವಾಗಿದೆ : ಮಾದಕವಸ್ತು ಬಳಕೆ ಸಮರ್ಥಿಸಿಕೊಂಡ ಎಲೋನ್ ಮಸ್ಕ್

12:21 PM Mar 20, 2024 IST | ಹೊಸ ಕನ್ನಡ
UpdateAt: 12:27 PM Mar 20, 2024 IST
elon musk  ಡ್ರಗ್ಸ್ ಸೇವನೆಯಿಂದ ಟೆಸ್ಲಾ ಕಂಪನಿ ಮುನ್ನಡೆಸಲು ಸಾಧ್ಯವಾಗಿದೆ   ಮಾದಕವಸ್ತು ಬಳಕೆ ಸಮರ್ಥಿಸಿಕೊಂಡ ಎಲೋನ್ ಮಸ್ಕ್
Advertisement

ಮಾನಸಿಕ ಖಿನ್ನತೆಗೆ ಒಳಗಾದ ಅನೇಕ ಮಂದಿ ಯಾವುದಾದರೂ ಒಂದು ವ್ಯಸನಕ್ಕೆ ಒಳಗಾಗುವುದು ಸಾಮಾನ್ಯ. ಅದರಲ್ಲೂ ಹಣವಂತರು ಡ್ರಗ್ಸ್ ಗಳನ್ನು ಕೊಳ್ಳುವುದಕ್ಕೆ ಮುಂದಾಗುತ್ತಾರೆ. ಇದೀಗ ಈ ಸಾಲಿಗೆ ಪ್ರಪಂಚದ  ಶ್ರೀಮಂತ ಉದ್ಯಮಿ ಎಲನ್ ಮಸ್ಕ್ ಅವರು ತಾನು ಡ್ರಗ್ಸ್ ಬಳಸುವುದರ ಕುರಿತು ಮುಕ್ತವಾಗಿ ಹಂಚಿಕೊಂಡಿದ್ದಾರೆ.

Advertisement

ಇದನ್ನೂ ಓದಿ: CCTV Footage: ಅಪ್ಪನ ತೋಳಿನಲ್ಲಿದ್ದ ಮಗು ಕೈ ಜಾರಿ ಮೂರನೇ ಮಹಡಿಯಿಂದ ಬಿದ್ದು ದಾರುಣ ಸಾವು

ಮಾನಸಿಕ ಖಿನ್ನತೆಯ ನಿವಾರಣೆಗಾಗಿ ಕೆಟಾಮಿನ್ ಎಂಬ ಡ್ರಗ್ ಅನ್ನು  ತೆಗೆದುಕೊಳ್ಳುತ್ತಿದ್ದು, ಟೆಸ್ಲಾ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಲು ಅದು ನನಗೆ ನೆರವು ನೀಡಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

Advertisement

ಇದನ್ನೂ ಓದಿ: Mangaluru News: ಲೋಕಸಭೆ ಚುನಾವಣೆ; ಮಂಗಳೂರು ಪೊಲೀಸರಿಂದ 19 ರೌಡಿಶೀಟರ್‌ಗಳ ಗಡಿಪಾರು

ಕೆಲ ದಿನಗಳ ಹಿಂದಷ್ಟೇ, ಎಲನ್ ಮಸ್ಕ್ ಡ್ರಗ್ಸ್ ಸೇವಿಸುತ್ತಾರೆ. ಅವರ ಈ ಅಭ್ಯಾಸ ಟೆಸ್ಲಾ ಸೇರಿದಂತೆ ಅವರ ವಿವಿಧ ಕಂಪನಿಗಳ ಆಡಳಿತ ಮಂಡಳಿ ಸದಸ್ಯರಲ್ಲಿ ಕಳವಳಕ್ಕೆ ಕಾರಣವಾಗಿದೆ ಎಂದು ವರದಿಯಾಗಿತ್ತು.

ಇದರ ಬೆನ್ನಲ್ಲೇ ತಮ್ಮ ಡ್ರಗ್ಸ್ ಸೇವನೆ ಕುರಿತು ಮುಕ್ತವಾಗಿ ಮಾತನಾಡಿರುವ  ಮಸ್ಕ್ 'ಕೆಲವೊಂದು ವೇಳೆ ನನ್ನ ಮಾನಸಿಕ ಸ್ಥಿತಿ ಹದಗೆಟ್ಟಿರುತ್ತದೆ, ಅದನ್ನು ಮಾನಸಿಕ ಖಿನ್ನತೆ ಎನ್ನಬಹುದು. ಆದರೆ ಇಂಥ ವೇಳೆ ವೈದ್ಯರ ಸಲಹೆ ಮೇರೆಗೆ  ವಾರಕ್ಕೆ ಒಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಕೆಟಾಮಿನ್ ಸೇವಿಸುತ್ತೇನೆ. ಇದರಿಂದಾಗಿ ನನ್ನ ನಕಾರಾತ್ಮಕ ಮನಸ್ಥಿತಿಯಿಂದ ಹೊರಬರಲು ನೆರವಾಗುತ್ತದೆ ಎಂದು ಹಂಚಿಕೊಂಡಿದ್ದಾರೆ.

Advertisement
Advertisement
Advertisement