For the best experience, open
https://m.hosakannada.com
on your mobile browser.
Advertisement

Alto Car : BMW, ಬೆಂಝ್‌ ಅಂತ ಐಷಾರಾಮಿ ಕಾರಿಗೂ ಸಾಧ್ಯವಿಲ್ಲ ಭಾರತದ ಈ ಚಿಕ್ಕ ಕಾರಿನ ದಾಖಲೆ ಮುರಿಯಲು !!

Alto Car: ಐಶಾರಾಮಿ ಕಾರು ಕಂಪೆನಿಗಳು ಕೂಡ ಇಂದು ಭಾರತದತ್ತ ಮುಖ ಮಾಡುತ್ತಿವೆ. ಆದ್ರೆ ಯಾವ ಶ್ರೀಮಂತ ಕಾರುಗಳಿಗೂ ಕೂಡ ನಮ್ಮ ಭಾರತದ ಈ ಒಂದು ಚಿಕ್ಕ ಕಾರಿನ ದಾಖಲೆ ಮುರಿಯಲು ಸಾಧ್ಯವಾಗಿಲ್ಲ. 
06:25 AM May 07, 2024 IST | ಸುದರ್ಶನ್
UpdateAt: 07:00 AM May 07, 2024 IST
alto car   bmw  ಬೆಂಝ್‌ ಅಂತ ಐಷಾರಾಮಿ ಕಾರಿಗೂ ಸಾಧ್ಯವಿಲ್ಲ ಭಾರತದ ಈ ಚಿಕ್ಕ ಕಾರಿನ ದಾಖಲೆ ಮುರಿಯಲು

Alto Car: ಭಾರತವು ಆಟೋಮೊಬೈಲ್ ಕ್ಷೇತ್ರದಲ್ಲಿ ಇಂದು ಮುಂಚೂಣಿಯಲ್ಲಿ ಮುನ್ನುಗ್ಗುತ್ತಿದೆ. ಐಶಾರಾಮಿ ಕಾರು ಕಂಪೆನಿಗಳು ಕೂಡ ಇಂದು ಭಾರತದತ್ತ ಮುಖ ಮಾಡುತ್ತಿವೆ. ಆದ್ರೆ ಯಾವ ಶ್ರೀಮಂತ ಕಾರುಗಳಿಗೂ ಕೂಡ ನಮ್ಮ ಭಾರತದ ಈ ಒಂದು ಚಿಕ್ಕ ಕಾರಿನ ದಾಖಲೆ ಮುರಿಯಲು ಸಾಧ್ಯವಾಗಿಲ್ಲ.

Advertisement

ಇದನ್ನೂ ಓದಿ: Shrinagar: ಸೈನಿಕರ ಮೇಲೆ ದಾಳಿ ಮಾಡಿದ ಇಬ್ಬರು ಪಾಕ್ ಉಗ್ರರ ತಲೆಗೆ 20 ಲಕ್ಷ ಬಹುಮಾನ ಘೋಷಿಸಿದ ವಾಯುಪಡೆ !

Advertisement

ದೇಶದ ಹೆಸರಾಂತ ಮತ್ತು ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಭಾರತದಲ್ಲಿ ಬಿಡುಗಡೆಗೊಳಿಸಿರುವ ಅದೊಂದು ಕಾರಿನ ದಾಖಲೆಯನ್ನು ಇಂದಿಗೂ BMW, ಬೆಂಝ್‌ ಅಂತ ಐಷಾರಾಮಿ ಕಾರಿಗೂ ಹಿಂದಿಕ್ಕಲು ಸಾಧ್ಯವಾಗಿಲ್ಲ. ನಿಮಗನಿಸಬಹುದು ಇವರು ಮಾರುತಿ 800(Maruti 800) ಕಾರಿನ ಬಗ್ಗೆ ಹೇಳುತ್ತಿರಬಹುದು ಎಂದು. ಅದರ ಬಗ್ಗೆ ಮಾತನಾಡುವುದೇ ಬೇಡ ಬಿಡಿ, ಯಾಕೆಂದರೆ ಅದು ಎವರ್ ಗ್ರೀನ್ ಕಾರು. ಮತ್ಯಾವುದು? ಎಂದು ಆಲೋಚಿಸ್ತಿದ್ದೀರಾ? ಅದುವೇ ಮಾರುತಿ ಸುಸುಕಿ ಆಲ್ಟೋ. ಹೌದು, ಈ ಕಾರಿನ ಬಗ್ಗೆ ನೀವು ತಿಳಿಯದೇ ಇರೋ ಎಷ್ಟೋ ವಿಚಾರಗಳಿವೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್ ವಿಡಿಯೋಗಳ ವೈರಲ್ ರುವಾರಿ ಡಿಕೆ ಶಿವಕುಮಾರ್ - ವಕೀಲ ದೇವರಾಜೇಗೌಡ ಆರೋಪ !!

ಹೌದು, ಮಾರುತಿ ಸುಜುಕಿ ಆಲ್ಟೋ, 5 ಮಿಲಿಯನ್ ಯುನಿಟ್‌ಗಳ (50 ಲಕ್ಷ ಕಾರುಗಳ) ಮಾರಾಟದ ಮೈಲಿಗಲ್ಲನ್ನು ದಾಟಿದ ಭಾರತದ ಏಕೈಕ ಕಾರು ಎಂದು ನಿಮಗೆ ತಿಳಿದಿದೆಯೇ? 2000 ರಲ್ಲಿ ಬಿಡುಗಡೆಯಾದ ಜನಪ್ರಿಯ ಹ್ಯಾಚ್ ಬ್ಯಾಕ್ ಇಲ್ಲಿಯವರೆಗೆ ಸುಮಾರು 5.06 ಮಿಲಿಯನ್ ಯುನಿಟ್‌ಗಳ ಮಾರಾಟವನ್ನು ಕಂಡಿದೆ. ಈ ಮೂಲಕ ಮಾರುತಿ ಸುಜುಕಿಯ ಜನಪ್ರಿಯ ಹ್ಯಾಚ್‌ಬ್ಯಾಕ್‌ ಆಲ್ಟೋ(Alto) ಭಾರತದಲ್ಲಿ 50 ಲಕ್ಷ ಗ್ರಾಹಕರ ಮನೆ ಸೇರುವ ಮೂಲಕ ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ. ಇದರಿಂದಾಗಿ ಭಾರತೀಯರ ಹೃದಯಕ್ಕೆ ಹತ್ತಿರವಾದ ಕಾರುಗಳಲ್ಲಿ ಇದೂ ಒಂದು ಎಂಬುದು ಸಾಬೀತಾಗಿದೆ.

ಅಂದಹಾಗೆ ಬಡ ಕುಟುಂಬಗಳಿಂದ ಹಿಡಿದು ಮಧ್ಯಮ ವರ್ಗದವರೆಗೆ ಕೈಗೆಟುಕುವ ದರದಲ್ಲಿ ಸಿಗುವುದರಿಂದ ಹೆಚ್ಚಾಗಿ ಮಾರುತಿ ಆಲ್ಟೋ ಮಾರಾಟವಾಗುತ್ತದೆ. ಯಾವ ಮಟ್ಟಿಗೆ ಅಂದ್ರೆ ಇದು ಎಂದಿಗೂ ಮುರಿಯಲಾಗದ ದಾಖಲೆಯನ್ನು ನಿರ್ಮಿಸಿ ತನ್ನ ಹತ್ತಿರಕ್ಕೂ ಯಾವುದೇ ಬ್ರಾಂಡ್‌ ನಿಲ್ಲದಂತೆ ನಂ.1 ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಒಟ್ಟಿನಲ್ಲಿ ಮಾರುತಿ ಸುಜುಕಿ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಪ್ರಾಬಲ್ಯ ಉಳಿಸಿಕೊಂಡು ಬಂದಿದೆ.

ಮೊದಲ ಪೀಳಿಗೆಯ ಆಲ್ಟೋ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು 2000ರ ಸೆಪ್ಟೆಂಬರ್ 27 ರಂದು. ಇದಾದ ಬಳಿಕ ಶೀಘ್ರವಾಗಿ ಜನಪ್ರಿಯತೆಯನ್ನು ಗಳಿಸಿದ ಆಲ್ಟೋ 2004ರ ಹೊತ್ತಿಗೆ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಯನ್ನೂ ಗಳಿಸಿತ್ತು. ಅಂದಿನಿಂದ ಇಂದಿನವರೆಗೆ ಎರಡು ದಶಕಕ್ಕೂ ಹೆಚ್ಚಿನ ಯಶಸ್ವಿ ಪಯಣವನ್ನು ಆಲ್ಟೋ ಮುಂದುವರಿಸಿದೆ. ಈ ಮೂಲಕ ದೇಶದಲ್ಲಿ ಹೆಚ್ಚು ಪಯಣ ಅವಧಿಯ ಪಯಣ ಮುಂದುವರಿಸಿರುವ ವಾಹನಗಳಲ್ಲಿ ಇದೂ ಸೇರಿದೆ. ಇದರೊಂದಿಗೆ ಆಲ್ಟೋ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಮುಂದುವರಿಸಿದೆ.

ಆದರೆ ವಿಷಾದ ಎಂದರೆ ಸದ್ಯ ಆಲ್ಟೋ, ಆಲ್ಟೋ 800 ಮ್ಯಾನಿಫ್ಯಾಕ್ಚರಿಂಗ್ ಅನ್ನು ಕಂಪೆನಿ ನಿಲ್ಲಿಸಿದೆ. ಪ್ರಸ್ತುತ, ಮಾರುತಿ ಸುಜುಕಿ ಆಲ್ಟೋ ಕೆ 10 ಮಾತ್ರ ಮಾರಾಟದಲ್ಲಿದೆ. ಏಪ್ರಿಲ್ 1, 2023 ರಿಂದ ಜಾರಿಗೆ ಬಂದ ಬಿಎಸ್ 6 ಹಂತ - 2 ಮಾನದಂಡಗಳಿಗೆ ಅನುಸಾರವಾಗಿ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆದ ಆಲ್ಟೋ 800 ಅನ್ನು ಮಾರ್ಚ್ 2023 ರಲ್ಲಿ ನಿಲ್ಲಿಸಲಾಯಿತು. ಮಾರುತಿ ಸುಜುಕಿ ಆಲ್ಟೋ ಕೆ10 ಪ್ರಸ್ತುತ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.3.99 ಲಕ್ಷದಿಂದ ರೂ.5.96 ಲಕ್ಷಗಳಾಗಿದೆ.

Advertisement
Advertisement
Advertisement