ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bengaluru: ಸಮಯ ಮುಗಿದರೂ ಅಂಗಡಿಗಳಲ್ಲಿ ಕನ್ನಡ ನಾಮಫಲಕ ಹಾಕದವರಿಗೆ ದೊಡ್ಡ ಆಘಾತ- ಹೊಸ ಆದೇಶ !!

10:59 PM Mar 14, 2024 IST | ಹೊಸ ಕನ್ನಡ
UpdateAt: 08:03 AM Mar 15, 2024 IST
Advertisement

Bengaluru ನಲ್ಲಿ ಅಂಗಡಿ ಮುಂಗಟ್ಟುಗಳಿಗೆ ಕನ್ನಡ ನಾಮಫಲಕವನ್ನು(Kannada name board)ಹಾಕಬೇಕೆಂದು ಬಹು ತಿಂಗಳಂದ ಕನ್ನಡ ಪರ ಸಂಘಟನೆಗಳು ಆಗ್ರಹಿಸುತ್ತಿವೆ. ಸರ್ಕಾರ ಕೂಡ ಇದಕ್ಕೆ ಬೆಂಬಲ ನೀಡಿವೆ. ಆದರೆ ಇನ್ನೂ ಕೂಡ ಹಲವರು ತಮ್ಮ ಅಂಗಡಿಯ ನಾಮಫಲಕಗಳನ್ನು ಇತರ ಭಾಷೆಗಳಲ್ಲಿ ಬರೆದಿದ್ದು, ಬದಲಾಯಿಸದೆ ಅಸಡ್ಡೆ ತೋರಿವೆ. ಇದೀಗ ಇಂಥವರಿಗೆ ಬಿಸಿ ಮುಟ್ಟಿಸಲು ಬಿಬಿಎಂಪಿ ತಯಾರಿ ನಡೆಸಿದೆ.

Advertisement

ಇದನ್ನೂ ಓದಿ: Petrol-Desel price: ಲೋಕಸಭಾ ಚುನಾವಣೆಗೆ ಕೇಂದ್ರದಿಂದ ಗಿಫ್ಟ್- ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ !!

Advertisement

ಹೌದು, ಅಂಗಡಿ-ಮುಂಗಟ್ಟುಗಳು, ಮಾಲ್ ಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಇರಬೇಕು ಅಂತ ನೀಡಿದ್ದ 2 ತಿಂಗಳ ಗಡುವು ಮುಗಿದು ಹೋಗಿದೆ. ಇಷ್ಟಾದರೂ ಕನ್ನಡ ನಾಮಫಲಕ ಹಾಕದವರಿಗೆ, ಕ್ಯಾರೆ ಎನ್ನದ ಅಂಗಡಿ ಮಾಲೀಕರಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿದ್ದು ನೋಟಿಸ್ ನೀಡಿ ಟ್ರೇಡ್ ಲೈಸೆನ್ಸ್ ರದ್ದು ಮಾಡಿದೆ.

ಕೆಲ ಸಮಯದ ಹಿಂದೆ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಕನ್ನಡ ನಾಮಫಲಕ ಹಾಕಲು ನೀಡಿ ದಿನಾಂಕವನ್ನು ಮುಂದುಹಾಕಿ 2 ವಾರಗಳ ಗಡುವು ನೀಡಿ ಟ್ವೀಟ್‌ ಮಾಡಿದ್ದರು. ಅಲ್ಲದೆ ಶೇ. 60ರಷ್ಟು ಕನ್ನಡ ನಾಮಫಲಕ ಅಳವಡಿಸದಿದ್ದರೆ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆ ನೀಡಿತ್ತು. ಅಂಗಡಿ ಲೈಸೆನ್ಸ್ ರದ್ದು ಮಾಡಿ ಬೀಗ ಹಾಕುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿತ್ತು.

ಇಷ್ಟು ಸಮಯ ನೀಡಿದರೂ ಕೆಲವು ಮಾಲಿಕರು ಉದ್ಧಟತನ ತೋರಿದ್ದಾರೆ.

Advertisement
Advertisement