ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bengaluru Karaga: ಬೆಂಗಳೂರಿಗರೇ ಗಮನಿಸಿ, ಇಂದು, ನಾಳೆ ಸಂಚಾರ ಮಾರ್ಗದಲ್ಲಿ ಬದಲಾವಣೆ

Bengaluru Karaga: ಸುತ್ತಮುತ್ತ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧನೆ ಮಾಡಿ ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಮಾಹಿತಿ ನೀಡಿದ್ದಾರೆ. 
09:45 AM Apr 23, 2024 IST | ಸುದರ್ಶನ್
UpdateAt: 09:49 AM Apr 23, 2024 IST
Advertisement

Bengaluru Karaga: ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯಸ್ವಾಮಿ ಬೆಂಗಳೂರು (Dharmarayaswamy Bengaluru karaga) ಉತ್ಸವವು ದಿನಾಂಕ 23-04-2024 ರಿಂದ ದಿ.24-04-2024 ರ ಬೆಳಗ್ಗೆ 6 ಗಂಟೆಯವರೆಗೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಉತ್ಸವಕ್ಕೆ ಬರುವ ಕಾರಣ ತಿಗಳರ ಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನದ ಸುತ್ತಮುತ್ತ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧನೆ ಮಾಡಿ ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಮಾಹಿತಿ ನೀಡಿದ್ದಾರೆ.

Advertisement

ಇದನ್ನೂ ಓದಿ:  Neha Hiremath: ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ; ವಿಶೇಷ ನ್ಯಾಯಾಲಯ ಸ್ಥಾಪನೆ

ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದ ಮೂಲಕ ಮೆರವಣಿಗೆ ಆರಂಭವಾಗಿ, ಕಬ್ಬನ್ಪೇಟೆ, ಗಾಣಿಗರಪೇಟೆ, ಅವೆನ್ಯೂರಸ್ತೆ ಮೂಲಕ ಕೆಆರ್ ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇವಾಲಯಕ್ಕೆ ಬಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ಮೂಲಕ ರಾಣಾಸಿಂಣ್ ಪೇಟೆ, ಅಕ್ಕಿಪೇಟೆ, ಅರಳಿಪೇಟೆ, ಓಟಿಸಿ ರಸ್ತೆ, ಮಸ್ತಾನ್ ಸಾಹೇಬ್ ದರ್ಗಾ, ಬಳೆಪೇಟೆ ಮುಖ್ಯರಸ್ತೆ, ಕೆಜಿ ರಸ್ತೆ, ಎಸ್ ಪಿ ರಸ್ತೆ ಮೂಲಕ ಅಣ್ಣಮ್ಮ ದೇವಾಲಯಕ್ಕೆ ಬರುತ್ತದೆ.

Advertisement

ಇದನ್ನೂ ಓದಿ:  Anaconda Snake: ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 10 ಅನಕೊಂಡ ಹಾವು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪತ್ತೆ

ಪುನಃ ಅದೇ ಮಾರ್ಗವಾಗಿ ಸಂಚರಿಸಿ, ಕಿಲ್ಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅವೆನ್ಯೂ ರಸ್ತೆ ಕ್ರಾಸ್, ಆರ್ಟಿ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣಕಲ್ ಪೇಟೆ ಮೂಲಕ ದಿನಾಂಕ 24-04-2024 ರಂದು ಬೆಳಗ್ಗೆ ಆರು ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯಕ್ಕೆ ಸೇರುತ್ತದೆ.

ಸಿಟಿ ಮಾರುಕಟ್ಟೆ ವೃತ್ತದಿಂದ ಅವೆನ್ಯೂರಸ್ತೆಯ ಮೂಲಕ ಮೈಸೂರು ಬ್ಯಾಂಕ್ ವೃತ್ತದವರೆಗೆ ಎಲ್ಲಾ ಮಾದರಿಯ ವಾಹನ ಸಂಚಾರ ನಿಷೇಧಿಸಲಾಗಿದೆ.

ಮೆರವಣಿಗೆ ಇಲ್ಲಿಗೆ ತಲುಪಿದಾಗ, ಎಎಸ್ ಚಾರ್ ರಸ್ತೆಯಿಂದ ಸಿಟಿ ಮಾರುಕಟ್ಟೆ ವೃತ್ತದ ಕಡೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಮೆರವಣಿಗೆ ಇಲ್ಲಿಗೆ ತಲುಪಿದಾಗ, ಮೆಡಿಕಲ್ ಕಾಲೇಜು ಕಡೆಯಿಂದ ಮಾರ್ಕೆಟ್ ವೃತ್ತದ ಕಡೆಗೆ ಬರುವ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ.

ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಇಲ್ಲಿದೆ;

ಎಸ್ಜೆಪಿ ರಸ್ತೆ- ಟೌನ್ ಹಾಲ್, ಕೆಂಪೇಗೌಡರಸ್ತೆ - ಈ ಮೂಲಕ ಸಂಚರಿಸಬಹುದು.

ಮೈಸೂರು ರಸ್ತೆಯ ಎಎಸ್ ಚಾರ್ ರಸ್ತೆಯಲ್ಲಿ ಬಲ ತಿರುವು ಬ್ರಿಯಾಂಡ್ ವೃತ್ತ-ರಾಯನ್ ವೃತ್ತ- ಈ ಮೂಲಕ ಸಂಚರಿಸಬಹುದು.

ಚಾಮರಾಜಪೇಟೆಯ ಕಡೆಯಿಂದ ಬರುವ ವಾಹನಗಳು ಪ್ರೋ.ಶಿವಶಂಕರ ವೃತ್ತದ ಮೂಲಕ ಜೆಸಿ ರಸ್ತೆಯನ್ನು ಪ್ರವೇಶಿಸಿ ಟೌನ್ ಹಾಲ್ ಕಡೆಗೆ ಸಂಚರಿಸಬಹುದು.

ವಾಹನ ಪಾರ್ಕಿಂಗ್ ಗೆ ಗೊತ್ತು ಮಾಡಲಾದ ಸ್ಥಳಗಳು

ಬನ್ನಪ್ಪ ಪಾರ್ಕ ಹಾಗೂ ಪುರಭವನ, ಬಿಬಿಎಂಪಿ ಮಾರ್ಕೆಟ್ ಕಾಂಪ್ಲೆಕ್ಸ್ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

Advertisement
Advertisement