Tiger Dance In Bangaluru: ಬೆಂಗ್ಳೂರು ಕಂಬಳದಲ್ಲಿ ಕರಾವಳಿ ಹುಲಿಕುಣಿತ- ಕಾತುರರಾಗಿ ಕುಳಿತ ಜನ
Tiger Dance In Bangaluru: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು ಮತ್ತೆ ನಾಳೆ ಅದ್ದೂರಿಯಾಗಿ ಕಂಬಳ (Kambala) ನಡೆಯುತ್ತಿದೆ. ಕಂಬಳದ ಮೆರುಗು ಈಗಾಗಲೇ ರಂಗೇರಿದೆ. ಮುಖ್ಯವಾಗಿ ಕಂಬಳ ಕಾರ್ಯಕ್ರಮಕ್ಕೆ ನಟ, ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ದೀಪ ಬೆಳಗಿಸಿ ಕಂಬಳಕ್ಕೆ ಚಾಲನೆ ನೀಡಿದರು. ಬಳಿಕ ಗಂಗಾರತಿ ಮಾಡುವ ಮೂಲಕ ಕಂಬಳ ಕರೆಗೆ ಪೂಜೆ ಸಲ್ಲಿಸಲಾಯಿತು.
ಜೊತೆಗೆ ಕಂಬಳದ ಮೆರುಗು ಹೆಚ್ಚಿಸಲು ಹುಲಿ ಕುಣಿತ ಸಹ (Tiger Dance In Bangaluru) ನಡೆಯಲಿದೆ. ಹೌದು, ಕಂಬಳದಲ್ಲಿ ಹುಲಿ ಕುಣಿತ ಆಯೋಜನೆ ಮಾಡಲಾಗಿದ್ದು, 15 ಮಂದಿ ಹುಲಿ ಕುಣಿತ ಮಾಡಲಿದ್ದಾರೆ. ಕಂಬಳದಲ್ಲಿ ಕರಾವಳಿ ಜಾನಪದ ನೃತ್ಯ ಹುಲಿ ನೃತ್ಯ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ ನಂತರ ಹುಲಿ ಡ್ಯಾನ್ಸ್ ನಡೆಯಲಿದ್ದು, 15 ಮಂದಿ ಬಣ್ಣ ಹಚ್ಚಿಕೊಂಡು ರೆಡಿಯಾಗ್ತಿದ್ದಾರೆ.
ಅಷ್ಟೇ ಅಲ್ಲದೇ ಕರಾವಳಿ ಭಾಗದ ವಿವಿಧ ಜಾನಪದ ಸಂಸ್ಕೃತಿಗಳ ಆಯೋಜನೆ ಮಾಡಲಾಗಿದೆ. ಜನ ಕಂಬಳ ಜೊತೆ ಅಲ್ಲಿನ ಹುಲಿ ಡ್ಯಾನ್ಸ್, ಮತ್ತು ಇತರೇ ಕಾರ್ಯಕ್ರಮ ಕೂಡ ಎಂಜಾಯ್ ಮಾಡಬಹುದು.
ಇದನ್ನೂ ಓದಿ: ಉದ್ಯೋಗ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ - ವರ್ಕ್ ಫ್ರಮ್ ಹೋಮ್ ಬದಲು ಬರ್ತಿದೆ ಹೊಸ ಟ್ರೆಂಡ್ !!