ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bengaluru: ಕನ್ನಡ ನಾಮಫಲಕ ಅಳವಡಿಕೆ: 13 ರವರೆಗೆ ಗಡುವು ವಿಸ್ತರಣೆ

09:14 AM Mar 01, 2024 IST | ಹೊಸ ಕನ್ನಡ
UpdateAt: 10:03 AM Mar 01, 2024 IST
Image credit Source: Kannada Prabha
Advertisement

ಬೆಂಗಳೂರು: ನಗರದಲ್ಲಿನ ಎಲ್ಲ ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಉದ್ದಿಮೆಗಳಲ್ಲಿ ಕನ್ನಡ ನಾಮಫಲಕ ಅಳವಡಿಸಲು ನೀಡಿದ್ದ ಗಡುವನ್ನು ಮತ್ತೆ ಎರಡು ವಾರ ವಿಸ್ತರಿಸಲಾಗಿದೆ.

Advertisement

ಇದನ್ನೂ ಓದಿ: Bengaluru: ಜೆಸಿಬಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ; ಸುಟ್ಟವರ ಆಸ್ತಿ ಜಪ್ತಿ

ನಾಮಫಲಕಗಳಲ್ಲಿ ಶೇ. 60 ಕನ್ನಡ ಬಳಸದ ಮಳಿಗೆಗಳ ವ್ಯಾಪಾರ ಪರವಾನಗಿ ಅಮಾನತುಗೊಳಿಸಿ, ಫೆ.29ರಿಂದ ಬೀಗ ಹಾಕಲು ನಿರ್ಧರಿಸಲಾಗಿತ್ತು. ಆದರೆ, ಹಲವು ಮಳಿಗೆಗಳ ಮಾಲೀಕರು ಕಾಲಾವಕಾಶ ಕೋರಿದ್ದು, ಡಿಸಿಎಂ ಡಿ. ಕೆ.ಶಿವಕುಮಾರ್ ಸೂಚನೆಯಂತೆ ಮಾ.13ರವರೆಗೆ ಗಡುವು ವಿಸ್ತರಿಸಲಾಗಿದೆ. ''ಬಿಬಿಎಂಪಿಯಿಂದ ಪರವಾನಗಿ ಪಡೆದಿರುವ 52,134 ಮಳಿಗೆಗಳ ಪೈಕಿ 3,044 ಉದ್ದಿಮೆಗಳಷ್ಟೇ ನಾಮಫಲಕ ಗಳಲ್ಲಿ ಶೇ. 60ರಷ್ಟು ಕನ್ನಡ ಬಳಸಿಲ್ಲ.

Advertisement

 

ನಗರದಲ್ಲಿ ಪರವಾನಗಿ ಪಡೆಯದಿರುವ 2 ಲಕ್ಷಕ್ಕೂ ಅಧಿಕ ಮಳಿಗೆಗಳಿವೆ. ಪರವಾನಗಿ ಪಡೆಯದ ಮಳಿಗೆಗಳ ಮಾಲೀಕರೂ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕು. ಇಲ್ಲವಾದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ," ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.

Advertisement
Advertisement