For the best experience, open
https://m.hosakannada.com
on your mobile browser.
Advertisement

Crime News: ನಮಾಜ್‌ ಟೈಂನಲ್ಲಿ ಹನುಮಾನ್‌ ಚಾಲೀಸ್‌ ಹಾಕ್ತೀಯಾ ಅಂತಾ ಯುವಕನಿಗೆ ಮನಸೋ ಇಚ್ಛೆ ಹಲ್ಲೆ; ಎಫ್‌ಐಆರ್‌ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ಯಾಕೆ

08:12 AM Mar 18, 2024 IST | ಹೊಸ ಕನ್ನಡ
UpdateAt: 09:53 AM Mar 18, 2024 IST
crime news  ನಮಾಜ್‌ ಟೈಂನಲ್ಲಿ ಹನುಮಾನ್‌ ಚಾಲೀಸ್‌ ಹಾಕ್ತೀಯಾ ಅಂತಾ ಯುವಕನಿಗೆ ಮನಸೋ ಇಚ್ಛೆ ಹಲ್ಲೆ  ಎಫ್‌ಐಆರ್‌ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ಯಾಕೆ

Bengaluru Crime News: ಭಕ್ತಿಗೀತೆ ಹಾಡುಗಳನ್ನು ಹಾಕಿದ್ದಕ್ಕೆ ಐದಾರು ಮುಸ್ಲಿಂ ಯುವಕರಿಂದ ಯುವಕನೋರ್ವನ ಮೇಲೆ ಹಲ್ಲೆ ನಡೆದಿರುವ ಕುರಿತು ಬೆಂಗಳೂರಿನ ಸಿದ್ದಣ್ಣ ಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿ ನಡೆದಿದೆ.

Advertisement

ಇದನ್ನೂ ಓದಿ: Vehicle Rules: ದೇಶಾದ್ಯಂತ ಕಾರು ಹೊಂದಿರುವವರಿಗೆ ಬಂತು ಹೊಸ ರೂಲ್ಸ್ !!

ಮುಖೇಶ್‌ ಎಂಬಾತನೇ ಹಲ್ಲೆಗೊಳಗಾದ ಯುವಕ ಈತ ವರ್ಧಮಾನ್‌ ಟೆಲಿಕಾಮ್‌ ಎಂಬ ಮೊಬೈಲ್‌ ಶಾಪ್‌ ನಡೆಸುತ್ತಿದ್ದು, ಸಂಜೆ ಸಮಯ ಮೊಬೈಲ್‌ ಶಾಪ್‌ನಲ್ಲಿ ಭಕ್ತಿಗೀತೆ ಹಾಕುತ್ತಿದ್ದ ಯುವಕ, ಈ ಸಮಯದಲ್ಲಿ ಅಂಗಡಿಗೆ ಬಂದ ನಾಲ್ಕೈದು ಮುಸ್ಲಿಂ ಯುವಕರು ಸಂಜೆ ನಮಾಜ್‌ ಸಮಯದಲ್ಲಿ ಹನುಮಾನ್‌ ಚಾಲೀಸ್‌ ಹಾಕ್ತೀಯ ಎಂದು ಕಿರಿಕ್‌ ಮಾಡಿದ್ದರು. ಮೊಬೈಲ್‌ ಸ್ಪೇರ್‌ ಪಾರ್ಟ್ಸ್‌ ಅಂಗಡಿಯಿಂದ ಹೊರಗೆಳೆದು ಮುಖೇಶ್‌ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ ಈ ಮುಸ್ಲಿಂ ಯುವಕರು.

Advertisement

ಇದನ್ನೂ ಓದಿ: Daskhina Kannada (Mangaluru): ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥನ ಮನೆಗೆ ನುಗ್ಗಿ ದಾಂಧಲೆ; ಶಾಸಕನ ಬೆಂಬಲಿಗರಿಂದ ಜೀವ ಬೆದರಿಕೆ, ಪುತ್ತೂರು ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲು

ಈ ಕುರಿತು ಹಲ್ಲೆಗೊಳಗಾದ ಯುವಕ ಮುಖೇಶ್‌ ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್‌ ಮಾಡಲು ಹಿಂದೇಟು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಠಾಣೆ ಮುಂದೆ ಜಮಾಯಿಸಿದ ಜನರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಎಫ್‌ಐಆರ್‌ ದಾಖಲು ಮಾಡುವವರೆಗೆ ಇಲ್ಲಿಂದ ತೆರಳುವುದಿಲ್ಲ ಎಂದು ಎಚ್ಚರಿಕೆ ನೀಡಿದ ಬಳಿಕ ಎಫ್‌ಐಆರ್‌ ದಾಖಲು ಮಾಡಿ ತನಿಖೆಗೆ ಮುಂದಾಗಿದ್ದಾರೆ.

ಈ ಪುಂಡರು ಕಳೆದ 15ದಿನಗಳಿಂದ ಅಂಗಡಿ ಮುಂದೆ ನಿಂತು ಕಿರುಕುಳ ನೀಡುತ್ತಿದ್ದು, ಇಂದು ಏಕಾಏಕಿ ಕಿರಿಕ್‌ ತೆಗೆದು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲಸೂರು ಗೇಟ್‌ ಪೊಲೀಸ್‌ ಠಾಣೆ ಮುಂದೆ ಜಮಾಯಿಸಿದ ವರ್ತಕರು ಆರೋಪಿಗಳ ಬಂಧವಾಗಬೇಕು ಅಲ್ಲಿಯವರೆಗೆ ಹೋರಾಟ ನಿಲ್ಲಿಸುವುದಿಲ್ಲ. ನಾಳೆ ಸಂಜೆಯೊಳಗೆ ಹಲ್ಲೆ ಮಾಡಿದ ಪುಂಡರ ಬಂಧನವಾಗಬೇಕು, ಇಲ್ಲದಿದ್ದರೆ ಸಂಪೂರ್ಣ ಚಿಕ್ಕಪೇಟೆ ಬಂದ್‌ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ವರ್ತಕರು ನೀಡಿದ್ದಾರೆ.

ಹೆಚ್ಚಿನ ಜನರು ಜಮಾಯಿಸಿದ ಕಾರಣ ಪೊಲೀಸ್‌ ಠಾಣೆಯ ಮುಂದೆ ಬಿಗಿ ಬಂದೋಬಸ್ತ್‌ ಮಾಲಾಗಿತ್ತು. ಇಬ್ಬರು ಎಸಿಪಿ, ಒಂದು ಕೆಸಿಆರ್‌ಪಿ ತುಕಡಿ, ಮೂವರು ಇನ್ಸ್‌ಪೆಕ್ಟರ್‌ ಸೇರಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

Advertisement
Advertisement