ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Pratima Murder Case: ಗಣಿ-ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಕೇಸ್‌ನಲ್ಲಿ ಬಿಗ್‌ಟ್ವಿಸ್ಟ್‌; ಇಲ್ಲಿದೆ ಅಸಲಿ ಕಾರಣ!!!

08:52 AM Nov 19, 2023 IST | ಮಲ್ಲಿಕಾ ಪುತ್ರನ್
UpdateAt: 09:50 AM Nov 19, 2023 IST
Advertisement

Pratima Murder Case: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ (Pratima Murder Case) ಕೊಲೆ ಪ್ರಕರಣ ಕುರಿತು ಇದೀಗ ಮುಖ್ಯವಾದ ಮಾಹಿತಿಯೊಂದು ಬಯಲಾಗಿದೆ. ಇದೀಗ, ಪೊಲೀಸರ (Police) ವಿಚಾರಣೆಯ ಸಂದರ್ಭ ಹಣ, ಚಿನ್ನಾಭರಣಕ್ಕಾಗಿ ಕೊಲೆ ಮಾಡಿರುವುದಾಗಿ ಆರೋಪಿ ಕಿರಣ್‌ ಬಾಯಿ ಬಿಟ್ಟಿದ್ದಾನೆ. ಪ್ರತಿಮಾ ಅವರನ್ನು ಕೊಲೆ ಮಾಡಿ, ಮನೆಯಲ್ಲಿದ್ದ ಚಿನ್ನಾಭರಣ, ಹಣ ಕದ್ದು ಈತ ಪರಾರಿಯಾಗಿದ್ದ. ಐದು ಲಕ್ಷ ರೂ.ನಗದು, ಮೂರರಿಂದ ನಾಲ್ಕು ಲಕ್ಷ ಮೌಲ್ಯದ ಎರಡು ಚಿನ್ನದ ಬಳೆ, ಬ್ರೇಸ್‌ಲೇಟ್‌ ನ್ನು ಆರೋಪಿ ಕದ್ದು ಪರಾರಿಯಾಗಿದ್ದು, ಇದೀಗ ಈ ಕೊಲೆಗೆ ನಿಜವಾದ ಕಾರಣ ಬಯಲಿಗೆ ಬಂದಿದೆ.

Advertisement

ಈ ಮೊದಲು ಆರೋಪಿ ಕಿರಣ್‌  ಕೊಲೆ ಮಾಡಿ ತಪ್ಪಿಸಿದ್ದು, ಅನಂತರ ಪೊಲೀಸರು ಬಂಧಿಸಿದಾಗ, ಬೇರೆಯೇ ಕಥೆ ಕಟ್ಟಿ ಹೇಳಿದ್ದ.  ಈತ " ನಾನು ಪ್ರತಿಮಾ ಮೇಡಂ ಅವರ ಕಾರು ಚಾಲಕನಾಗಿದ್ದೆ. ನನ್ನನ್ನು ಇತ್ತೀಚೆಗೆ ಕೆಲಸದಿಂದ ತೆಗೆಯಲಾಗಿತ್ತು. ನನ್ನನ್ನು ಕ್ಷಮಿಸಿ, ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಹೇಳಲು ಹೋಗಿದ್ದೆ. ಆದರೆ ಮೇಡಂ ಒಪ್ಪಲಿಲ್ಲ. ಅದಕ್ಕೆ ಕೋಪ ಬಂದು ಕೊಲೆ ಮಾಡಿದೆ ಎಂದು ಹೇಳಿ ಅಲ್ಲಿಯೇ ಇದ್ದ ಹದಿನೈದು ಸಾವಿರ ರೂಪಾಯಿ ತೆಗೆದುಕೊಂಡು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದೆ" ಎಂಬ ಹೇಳಿಕೆ ನೀಡಿದ್ದ.

ಈತ  ಹಣ ಚಿನ್ನಾಭರಣ ದೋಚಿ, ಕೊಣನಕುಂಟೆ ಬಳಿಯ ಗೆಳೆಯ ಶಿವು ನಿವಾಸದಲ್ಲಿ ಇಟ್ಟಿದ್ದ. "ಈ ಹಣ ಒಬ್ಬರು ನನಗೆ ಕೊಡಬೇಕಿತ್ತು. ಈಗ ಕೊಟ್ಟಿದ್ದಾರೆ. ಹಣ ನಿನ್ನ ಮನೆಯಲ್ಲಿ ಇರಲಿ. ನಾನು ಮಲೆ ಮಹದೇಶ್ವರ ಬೆಟ್ಟ ಹೋಗಿ ಬಂದ ಮೇಲೆ ತೆಗೆದುಕೊಂಡು ಹೋಗುತ್ತೇನೆ ಎಂದು ಗೆಳೆಯನಿಗೆ ಹೇಳಿದ್ದ" ಎಂದು ವರದಿಯಾಗಿದೆ. ಆದರೆ ಗೆಳೆಯನಿಗೆ ಇದು ಯಾವ ಹಣ ಎಂದು ತಿಳಿದಿರಲಿಲ್ಲ.

Advertisement

ಪೊಲೀಸರು ಶಿವು ಅನ್ನು ಸಾಕ್ಷಿಯಾಗಿ ಮಾಡಿ, ಕಿರಣ್‌ನಿಂದ ಐದು ಲಕ್ಷ ನಗದು, ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇದು ಹಣ ದೋಚಲೆಂದೇ ಮಾಡಿದ ಕೃತ್ಯ ಎಂದು ಕಾಣುತ್ತದೆ. ತಲಘಟ್ಟಪುರ ಇನ್ಸ್‌ಪೆಕ್ಟರ್‌ ಜಗದೀಶ್‌ ಅವರ ನೇತೃತ್ವದಲ್ಲಿ ಈ ಕೊಲೆ ತನಿಖೆ ನಡೆಯುತ್ತಿದೆ.

ಇದೀಗ ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Udupi Crime News: ನೇಜಾರಿನಲ್ಲಿ ಒಂದೇ ಕುಟುಂಬದ ಹತ್ಯೆ ಪ್ರಕರಣ; ಕೊಲೆಗೆ ವೃತ್ತಿ ತರಬೇತಿಯನ್ನು ಬಳಸಿದ ನರಹಂತಕ ಪ್ರವೀಣ್ ಚೌಗಲೆ !

Advertisement
Advertisement