ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Child Birth: ಮುದ್ದಾದ ಮೂರು ಗಂಡು ಮಕ್ಕಳ ಹೆತ್ತ ಕಟ್ಟಡ ಕಾರ್ಮಿಕ ಮಹಿಳೆ

12:33 PM Feb 09, 2024 IST | ಹೊಸ ಕನ್ನಡ
UpdateAt: 12:36 PM Feb 09, 2024 IST
Advertisement

ಬೆಂಗಳೂರಿನಲ್ಲು ಮಹಲುಗಳ ನಿರ್ಮಾಣ ಕಾರ್ಯದಲ್ಲಿ ಬೆವರು ಸುರಿಸಿ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕ ಮಹಿಳೆಯೊಬ್ಬರು ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಘಟನೆಯೊಂದು ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ನಡೆದಿದೆ.

Advertisement

ಇದನ್ನೂ ಓದಿ: Uttarkhand: ಉತ್ತರಖಾಂಡ ಮದರಸಾ ತೆರವು ಪ್ರಕರಣಕ್ಕೆ ಸ್ಪೋಟಕ ತಿರುವು - ಪೋಲೀಸರನ್ನು ಜೀವಂತ ಸುಡಲು ಪ್ಲಾನ್ ಮಾಡಿದ್ದ ಮುಸ್ಲಿಮರು !!

ಕೊಲ್ಲೂರು ಗ್ರಾಮ ನಿವಾಸಿ, 22 ವಯಸ್ಸಿನ ನಿಂಗಮ್ಮ ಈಶಪ್ಪ ಲಾಡ್ಲಾಪುರ ಎಂಬ ಮಹಿಳೆಯೇ ಮೂರು ಮಕ್ಕಳ ಹೆತ್ತ ಮಹಾತಾಯಿ. ಗುರುವಾರ ಸಂಜೆ ಹೆರಿಗೆಯ ನೋವು ಕಾಣಿಸಿಕೊಂಡಿದ್ದು, ಆ ಪ್ರಯುಕ್ತ ಗ್ರಾಮದ ಆಶಾ ಕಾರ್ಯಕರ್ತೆ ನಾಗಮ್ಮ ಕಲ್ಕುಂದಿ, ಎಂಟು ತಿಂಗಳ ಗರ್ಭಿಣಿ ಮಹಿಳೆ ನಿಂಗಮ್ಮಳನ್ನು ಕೊಲ್ಲೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ದಾಖಲು ಮಾಡಿದ್ದಾರೆ.

Advertisement

ಒಂದು ಮಗು ಎರಡು ಕೆಜಿ, ಇನ್ನೊಂದು ಮಗು ಎರಡು ಕೆಜಿ 400 ಗ್ರಾಂ, ಮೂರನೇ ಮಗು ಒಂದು ಕೆಜಿ ತೂಕಕ್ಕೆ ಕಡಿಮೆಯಿದ್ದು ಜನಿಸಿದ್ದಾರೆ. ಹೆರಿಗೆಯಾದ ನಂತರ ತಾಯಿ, ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಾಣಂತಿ ಇಬ್ಬರು ಮಕ್ಕಳು ಆರೋಗ್ಯವಾಗಿದ್ದು, ಒಂದು ಮಗು ಮಾತ್ರ ವಿಶೇಷ ಚಿಕಿತ್ಸೆಯಲ್ಲಿದೆ.

Advertisement
Advertisement