For the best experience, open
https://m.hosakannada.com
on your mobile browser.
Advertisement

Assembly Session : ಗಾಂಧಿ ಮೇಲೋ, ಬಸವಣ್ಣ ಮೇಲೋ ?! ಅಧಿವೇಶನದಲ್ಲಿ ಹುಟ್ಟಿಕೊಂಡಿತು ಹೊಸ ವಿವಾದ

04:05 PM Dec 05, 2023 IST | ಅಶ್ವಿನಿ ಹೆಬ್ಬಾರ್
UpdateAt: 04:07 PM Dec 05, 2023 IST
assembly session   ಗಾಂಧಿ ಮೇಲೋ  ಬಸವಣ್ಣ ಮೇಲೋ    ಅಧಿವೇಶನದಲ್ಲಿ ಹುಟ್ಟಿಕೊಂಡಿತು ಹೊಸ ವಿವಾದ
Image source: Vijaya Karnataka

Assembly Session : ಇತ್ತೀಚೆಗಷ್ಟೇ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ (Belagavi suvarna soudha) ವೀರ ಸಾವರ್ಕರ್‌ ಅವರ ಫೋಟೊ (Veer savarkar Photo) ಅಳವಡಿಸಲು ಬಿಜೆಪಿ ಸರ್ಕಾರ ಮುಂದಾದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಸ್ಪೀಕರ್‌ ಯು.ಟಿ. ಖಾದರ್‌ (Speaker UT Khader) ಅವರೇ ಸಾವರ್ಕರ್‌ ಫೋಟೊ ಉಳಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ, ಅಧಿವೇಶನದಲ್ಲಿ (Assembly Session)ಮತ್ತೊಂದು ಚರ್ಚೆ ಶುರುವಾಗಿದೆ.

Advertisement

ಆಡಳಿತ ಪಕ್ಷದ ಹಿರಿಯ ಶಾಸಕರಾಗಿರುವ ಕಾಂಗ್ರೆಸ್‌ ನಾಯಕ ಬಸವರಾಜ ರಾಯರೆಡ್ಡಿ ಸುವರ್ಣ ಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಯಾರ ಪೋಟೋ ಇರಬೇಕು ಎನ್ನುವ ಪ್ರಶ್ನೆ ಹಾಕಿದ್ದಾರೆ. ಗಾಂಧಿ ಮೇಲೋ, ಬಸವಣ್ಣ ಮೇಲೋ?‌ (Who is on top? Gandhi or Basavanna?) ಇದಕ್ಕೆ ನಿಖರ ಉತ್ತರ ಸಿಗಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ನ ಬಸವರಾಜ್ ರಾಯರೆಡ್ಡಿ ಮಂಗಳವಾರದ ಅಧಿವೇಶನದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಲು ಮುಂದಾಗಿದ್ದು, ನಿಯಮಗಳನುಸಾರ ವಿಧಾನಸಭಾ ಸಭಾಂಗಣದಲ್ಲಿ ಯಾವುದೇ ಫೋಟೊ ಹಾಕುವಂತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: OPS: ಹಳೆ ಪಿಂಚಣಿ ಜಾರಿ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್- ಸರ್ಕಾರಿ ನೌಕರರಿಗೆ ಖುಷಿಯೋ ಖುಷಿ

Advertisement

ವಿಧಾನಸೌಧದಲ್ಲಿಗ ಜಗಜ್ಜೋತಿ ಬಸವೇಶ್ವರರ ಪೋಟೊವನ್ನು ಮೇಲೆ ಹಾಕಲಾಗಿದೆ. ಅದರ ಕೆಳಗೆ ಗಾಂಧೀಜಿ ಪೋಟೊ ಇದೆ. ಹಾಗಿದ್ದರೆ ಯಾರ ಫೋಟೊ ನಿಜಕ್ಕೂ ಮೇಲಿರಬೇಕು ಎಂಬ ವಿಷಯವನ್ನು ಚರ್ಚಿಸಿ ಅಂತಿಮ ತೀರ್ಮಾನ ಪಡೆಯಲು ಶಾಸಕ ಬಸವರಾಜ ರಾಯ ರೆಡ್ಡಿ ತೀರ್ಮಾನ ಮಾಡಿದ್ದಾರಂತೆ. ಈ ನಿಟ್ಟಿನಲ್ಲಿ ಸಭಾಂಗಣದಲ್ಲಿ ಫೋಟೊ ಹಾಕುವ ಸಂದರ್ಭ ಮಾರ್ಗಸೂಚಿ ಪಾಲನೆ ಮಾಡಬೇಕಾಗಿದ್ದು, ಆ ಮಾರ್ಗಸೂಚಿ ಏನು ಎನ್ನುವುದರ ಬಗ್ಗೆ ಸ್ಪಷ್ಟ ಉತ್ತರ ನೀಡುವಂತೆ ಒತ್ತಾಯಿಸಿ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಲು ರಾಯರೆಡ್ಡಿ ತೀರ್ಮಾನ ಮಾಡಿದ್ದಾರಂತೆ.

Advertisement
Advertisement