For the best experience, open
https://m.hosakannada.com
on your mobile browser.
Advertisement

Donald Trump: ಅಮೆರಿಕ ಅಧ್ಯಕ್ಷ ಚುನಾವಣೆಗೂ ಮುನ್ನ ನೀಲಿ ಚಿತ್ರ ತಾರೆ ಜತೆ ಮಾಡಿಕೊಂಡ ಎಡವಟ್ಟು! ಟ್ರಂಪ್‌ಗೆ ಕೋರ್ಟ್ ನಿಂದ ಬಿಗ್ ಶಾಕ್‌!

Donald Trump: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈಗಾಗಲೇ ಗೆದ್ದಿರುವ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರಿಗೆ ನ್ಯೂಯಾರ್ಕ್‌ನ ನ್ಯಾಯಾಲಯವೊಂದು ದೊಡ್ಡ ಆಘಾತ ನೀಡಿದೆ.
03:53 PM Jun 01, 2024 IST | ಸುದರ್ಶನ್
UpdateAt: 03:53 PM Jun 01, 2024 IST
donald trump  ಅಮೆರಿಕ ಅಧ್ಯಕ್ಷ ಚುನಾವಣೆಗೂ ಮುನ್ನ ನೀಲಿ ಚಿತ್ರ ತಾರೆ ಜತೆ ಮಾಡಿಕೊಂಡ ಎಡವಟ್ಟು   ಟ್ರಂಪ್‌ಗೆ ಕೋರ್ಟ್ ನಿಂದ ಬಿಗ್ ಶಾಕ್‌
Advertisement

Donald Trump: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈಗಾಗಲೇ ಗೆದ್ದಿರುವ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರಿಗೆ ನ್ಯೂಯಾರ್ಕ್‌ನ ನ್ಯಾಯಾಲಯವೊಂದು ದೊಡ್ಡ ಆಘಾತ ನೀಡಿದೆ. ಹೌದು, ಇದರಿಂದಾಗಿ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಚುನಾವಣೆಯಲ್ಲಿ ಭಾಗವಹಿಸುವ ಮುನ್ನ ತಮ್ಮ ಹೆಸರಲ್ಲಿ ಒಂದು ಕಳಂಕ ಹೊತ್ತಂತೆ ಆಗಿದೆ.

Advertisement

ತಮ್ಮ ಜತೆ ಟ್ರಂಪ್‌ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಆರೋಪ ಮಾಡಿದ್ದ ನೀಲಿ ಚಿತ್ರ ತಾರೆಯ ಮಾತು ತಪ್ಪಿಸಲು ಹಣ ಪಾವತಿಸಿ, ಆ ಹಣಕಾಸು ವ್ಯವಹಾರವನ್ನು ಮುಚ್ಚಿಡಲು ಉದ್ಯಮಗಳ ದಾಖಲೆಗಳನ್ನೇ ಮರೆಮಾಚಿದ ಆರೋಪ ಸಂಬಂಧ ಟ್ರಂಪ್‌ ದೋಷಿ ಎಂದು ಕೋರ್ಟ್‌ ತೀರ್ಪು ನೀಡಿದೆ.

ಇದೀಗ ಕ್ರಿಮಿನಲ್‌ ಅಪರಾಧ ಪ್ರಕರಣವೊಂದರಲ್ಲಿ ದೋಷಿಯಾದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಕೀರ್ತಿಗೆ ಟ್ರಂಪ್‌ ತುತ್ತಾಗಿದ್ದು, ತೀರ್ಪಿನಿಂದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಗೆ ಟ್ರಂಪ್‌ಗೆ ಯಾವುದೇ ಸಮಸ್ಯೆ ಇಲ್ಲವಾದರೂ, ಮತದಾರರ ಆಕ್ರೋಶ ಎದುರಿಸಬೇಕಾದ ಭೀತಿ ಇದೆ.

Advertisement

ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವವರಿಗೆ ಕನಿಷ್ಠ 35 ವರ್ಷ ವಯಸ್ಸಾಗಿರಬೇಕು, 14 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ ಪ್ರಜೆಯಾಗಿರಬೇಕು ಎಂದು ಅಮೆರಿಕ ಸಂವಿಧಾನ ಹೇಳುತ್ತದೆ. ಆದರೆ ಅಪರಾಧಿ ಅಥವಾ ಜೈಲಿನಲ್ಲಿರುವ ವ್ಯಕ್ತಿ ಸ್ಪರ್ಧಿಸಬಾರದು ಎಂಬ ನಿರ್ಬಂಧವಿಲ್ಲ. ಹೀಗಾಗಿ ಟ್ರಂಪ್‌ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ಜೈಲಿಗೆ ಹೋದರೂ ಅವರು ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಗೆದ್ದ ಮೇಲೂ ಜೈಲಿನಿಂದಲೇ ಪ್ರಮಾಣವಚನ ಸ್ವೀಕರಿಸಬಹುದಾಗಿದೆ. ಸದ್ಯ ಶಿಕ್ಷೆಯ ಪ್ರಮಾಣವನ್ನು ಜು.11ರಂದು ನ್ಯೂಯಾರ್ಕ್‌ ನ್ಯಾಯಾಲಯ ಪ್ರಕಟಿಸಲಿದೆ. ಅಂದು ಅವರಿಗೆ ಶಿಕ್ಷೆಯಾದರೂ, ಮೊದಲ ಬಾರಿ ಅಪರಾಧ ಎದುರಿಸುತ್ತಿರುವ ಕಾರಣ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಂಪತ್ತು ನಿಮ್ಮನು ಆಕರ್ಷಿಸಲು ಈ 3 ಕುಬೇರ ಮಂತ್ರಗಳನ್ನು ಪಠಿಸಿದರೆ ಸಾಕು! 

Advertisement
Advertisement
Advertisement