For the best experience, open
https://m.hosakannada.com
on your mobile browser.
Advertisement

IDBI Recruitment 2023: ಬ್ಯಾಂಕ್ ಆಫ್ ಇಂಡಿಯಾ ಅಧೀನದ ಈ ಸಂಸ್ಥೆಯಲ್ಲಿದೆ ಕೈತುಂಬಾ ಸಂಬಳದ ಭರ್ಜರಿ ಉದ್ಯೋಗವಕಾಶ !!

03:27 PM Nov 22, 2023 IST | ಅಶ್ವಿನಿ ಹೆಬ್ಬಾರ್
UpdateAt: 03:48 PM Nov 22, 2023 IST
idbi recruitment 2023  ಬ್ಯಾಂಕ್ ಆಫ್ ಇಂಡಿಯಾ ಅಧೀನದ ಈ ಸಂಸ್ಥೆಯಲ್ಲಿದೆ ಕೈತುಂಬಾ ಸಂಬಳದ ಭರ್ಜರಿ ಉದ್ಯೋಗವಕಾಶ
Advertisement

IDBI Recruitment 2023:ಇಂದಿನ ಕಾಲದಲ್ಲಿ ನೆಚ್ಚಿನ ಉದ್ಯೋಗ ಪಡೆಯುವುದು ಸುಲಭದ ಮಾತಲ್ಲ. ನೀವೇನಾದರೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಅರಸುತ್ತಿದ್ದರೆ ಇಲ್ಲಿದೆ ನಿಮಗೆ ಮುಖ್ಯ ಮಾಹಿತಿ!!ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ(IDBI) ಐಡಿಬಿಐ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ನೇಮಕಾತಿ 2023(IDBI Recruitment 2023) ಒಟ್ಟು 2100 ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

Advertisement

ಹುದ್ದೆಯ ವಿವರ:
ನೇಮಕಾತಿ ಸಂಸ್ಥೆ: ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ.
ಹುದ್ದೆ: ಜುನಿಯರ್‌ ಅಸಿಸ್ಟೆಂಟ್‌ ಮ್ಯಾನೇಜರ್‌ (ಜೆಎಎಂ) ಗ್ರೇಡ್ 'ಒ' ಮತ್ತು ಎಕ್ಸಿಕ್ಯೂಟಿವ್ - ಸೇಲ್ಸ್ & ಆಪರೇಷನ್ಸ್.
ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (JAM): 800
ಕಾರ್ಯನಿರ್ವಾಹಕ - ಮಾರಾಟ ಮತ್ತು ಕಾರ್ಯಾಚರಣೆಗಳು (ESO): 1300
ಒಟ್ಟು ಹುದ್ದೆಗಳು: 2,100

(IDBI) ಗುತ್ತಿಗೆ ಆಧಾರದ ಮೇರೆಗೆ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್ 'ಒ' ಮತ್ತು ಎಕ್ಸಿಕ್ಯೂಟಿವ್ - ಸೇಲ್ಸ್ & ಆಪರೇಷನ್ಸ್ (ESO) ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು idbibank.in ನಲ್ಲಿನ ಅಧಿಕೃತ ಪೋರ್ಟಲ್ ಮೂಲಕ IDBI ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ನೇಮಕಾತಿ 2023 ಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 22 ರಿಂದ ಡಿಸೆಂಬರ್ 6, 2023 ರವರೆಗೆ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಅರ್ಜಿ ಶುಲ್ಕವು 1,000 ರೂಪಾಯಿಯಾಗಿದೆ.

Advertisement

ಅರ್ಹತಾ ಮಾನದಂಡಗಳು:
* ಈ ಹುದ್ದೆಗೆ ಶೈಕ್ಷಣಿಕ ಅರ್ಹತೆ ಪದವಿ ಮುಗಿಸಿರಬೇಕು.
* ಅರ್ಜಿ ಸಲ್ಲಿಸಲು ವಯೋಮಿತಿ ಪರಿಗಣಿಸಿದರೆ, 20 ರಿಂದ 25 ವರ್ಷಗಳು. SC, OBC ಮತ್ತು ST ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯಿರಲಿದೆ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
* ಮೊದಲಿಗೆ, idbibank.in ನಲ್ಲಿ IDBI ನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.
* ವೃತ್ತಿ ವಿಭಾಗಕ್ಕೆ ಹೋಗಿ, ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (JAM), ಗ್ರೇಡ್ 'O' ಮತ್ತು ಎಕ್ಸಿಕ್ಯೂಟಿವ್ - ಸೇಲ್ಸ್ ಮತ್ತು ಆಪರೇಷನ್ಸ್ (ESO) 2024-25 ರ ನೇಮಕಾತಿಯನ್ನು ಅನ್ವೇಷಿಸಿ .
* 'ಆನ್‌ಲೈನ್‌ನಲ್ಲಿ ಅನ್ವಯಿಸು' ಕ್ಲಿಕ್ ಮಾಡಿಕೊಳ್ಳಿ.
* ಅರ್ಜಿ ನಮೂನೆಯನ್ನು ನೋಂದಾಯಿಸಿ ಮತ್ತು ಭರ್ತಿ ಮಾಡಿಕೊಳ್ಳಿ.
* ಎಲ್ಲಾ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿಕೊಂಡು, ಅರ್ಜಿ ಶುಲ್ಕವನ್ನು ಪಾವತಿಸಿ.
* ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿಕೊಂಡು, IDBI ಅರ್ಜಿ ನಮೂನೆಯನ್ನು ಸಲ್ಲಿಸಿ.

ನವೆಂಬರ್‌ 22ರಿಂದ ಡಿಸೆಂಬರ್‌ 6 2023 ರವರೆಗೆ ನೋಂದಣಿ ಮಾಡಬಹುದು. ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಆನ್‌ಲೈನ್ ಲಿಖಿತ ಪರೀಕ್ಷೆಯು ಡಿಸೆಂಬರ್ 30 (ESO) ಹುದ್ದೆಗೆ ಮತ್ತು 31, 2023 ರಂದು (ಜೆಎಎಂ) ಹುದ್ದೆಗೆ ಪರೀಕ್ಷೆ ನಡೆಯಲಿದೆ.

https://idbibank.in

Advertisement
Advertisement
Advertisement