Bengaluru: ಯೆಮನ್ ಯುವಕನ ದೇಹದಲ್ಲಿ 2 ವರ್ಷದಿಂದ ಸಿಲುಕಿಕೊಂಡಿದ್ದ ಬುಲೆಟ್ ಹೊರ ತೆಗೆದ ಬೆಂಗಳೂರು ವೈದ್ಯರು
Bengaluru: ನಮ್ಮ ಬೆಂಗಳೂರು ಗ್ರೀನ್ ಸಿಟಿ, ಐಟಿ ಸಿಟಿ ಹೀಗೆ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಬೆಂಗಳೂರು, ಇಡೀ ವಿಶ್ವದಲ್ಲಿ ಅತ್ಯುತ್ತಮ ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಅದಕ್ಕೆ ನಿದರ್ಶನವೆಂಬಂತೆ 21 ವರ್ಷ ವಯಸ್ಸಿನ ಯುವಕನ ದೇಹದಲ್ಲಿ ಎರಡು ವರ್ಷಗಳಿಂದ ಸಿಲುಕಿದ್ದ ಬುಲೆಟ್'ನ್ನು ನಮ್ಮ ಬೆಂಗಳೂರು ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ, ಹೊರತೆಗೆದಿದ್ದಾರೆ.
ಸಾಮಾನ್ಯವಾಗಿ ಅರಬ್ ದೇಶಗಳಲ್ಲಿ ಆಗಾಗ ಯುದ್ಧಗಳು ಸಂಭವಿಸುತ್ತಿರುತ್ತವೆ ಆ ರೀತಿಯ ಯುದ್ಧಗಳಲ್ಲಿ ಪಾಲ್ಗೊಂಡಿದ್ದ ಯುವಕನಿಗೆ ಒಮ್ಮೆ ಯುದ್ಧದಲ್ಲಿ ಅನೇಕ ಗುಂಡುಗಳು ಹೊಕ್ಕಿದ್ದವು ಈ ವೇಳೆ ಆತನ ತೋಳಿನ ಮೂಳೆ ಮುರಿದಿತ್ತು ತದನಂತರ ಅಲ್ಲಿನ ವೈದ್ಯರು ಗುಂಡುಗಳನ್ನು ಹೊರ ತೆಗೆದು ಅದನ್ನು ಸರಿಪಡಿಸಿದ್ದರು.
ಇದನ್ನೂ ಓದಿ: K S Eshwarappa: ನನ್ನನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ಕಾರ್ಯಕರ್ತರ ಕರೆಗಳು ಬರುತ್ತಿವೆ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
ಆದರೆ ಅದರಲ್ಲಿ ಒಂದು ಗುಂಡು ಮಾತ್ರ ಅವನ ಬಲ ಶ್ವಾಸಕೋಶದಲ್ಲಿ ಸಿಲುಕಿಕೊಂಡಿತ್ತು. ಆದರೆ ಗುಂಡು ಪತ್ತೆಹಚ್ಚಲು ಯೆಮನ್ ವೈದ್ಯರಿಗೆ ಸಾಧ್ಯವಾಗಲಿಲ್ಲ.
ಬಳಿಕ ವಾಸಿಮ್ ನಗರದಲ್ಲಿ ಲಭ್ಯವಿರುವ ಇಂತಹ ಶಸ್ತ್ರಚಿಕಿತ್ಸೆಗಳ ಬಗ್ಗೆ ಓದಿದ ನಂತರ ಬೆಂಗಳೂರಿಗೆ ಶಸ್ತ್ರ ಚಿಕಿತ್ಸೆಗೆ ಬಂದಿದ್ದರು. ಆದರೆ ಆತನಿಗೆ ನಿರಂತರ ಕೆಮ್ಮು, ಉಸಿರಾಟದ ತೊಂದರೆ ಮತ್ತು ಕಫದಲ್ಲಿ ರಕ್ತ ಸೇರಿದಂತೆ ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದ. ವೈದ್ಯರು ಎಕ್ಸ್-ರೇ ಮಾಡಿದ ನಂತರ, ಎದೆಯೊಳಗೆ ಗುಂಡು ಇರುವುದನ್ನು ಪತ್ತೆ ಹಚ್ಚಿದ್ದಾರೆ.
ಎಕ್ಸ್ರೇಯಲ್ಲಿ ಶ್ವಾಸಕೋಶ, ಯಕೃತ್ತು, ಹೃದಯ ಮತ್ತು ಡಯಾಫ್ರಾಮ್‌ಗಳ ನಡುವೆ 4x2x2 ಸೆಂ.ಮೀ ಗುಂಡು ಇರುವುದು ಪತ್ತೆಯಾಗಿದೆ.
ಆಸ್ಟರ್ ಆರ್‌ವಿ ಆಸ್ಪತ್ರೆಯ ಕಾರ್ಡಿಯೊಥೊರಾಸಿಕ್ ನಾಳೀಯ ಶಸ್ತ್ರಚಿಕಿತ್ಸಕ ಡಾ. ದಿವಾಕರ್ ಭಟ್ ಅವರು ಎರಡು ಸುದೀರ್ಘ ಶಸ್ತ್ರಚಿಕಿತ್ಸೆಯನ್ನು ಮಾಡಿ, ಅಲ್ಲಿ ಅವರು ಇತರ ಅಂಗಗಳಿಗೆ ಹಾನಿಯಾಗದಂತೆ ಬುಲೆಟ್ ಅನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.