For the best experience, open
https://m.hosakannada.com
on your mobile browser.
Advertisement

Child Trade: ಅಯ್ಯೋ ದೇವ್ರೇ ಇದೆಂತಾ ದಂಧೆ ಮಾರ್ರೆ?! ಒಂದು ಮಗು ಹೆತ್ತರೆ ತಾಯಿಗೂ, ಏಜೆಂಟ್ ಗೂ ಸಿಗುತ್ತೆ ಲಕ್ಷ ಲಕ್ಷ ಕ್ಯಾಶ್ !!

04:13 PM Nov 28, 2023 IST | ಅಶ್ವಿನಿ ಹೆಬ್ಬಾರ್
UpdateAt: 04:22 PM Nov 28, 2023 IST
child trade  ಅಯ್ಯೋ ದೇವ್ರೇ ಇದೆಂತಾ ದಂಧೆ ಮಾರ್ರೆ   ಒಂದು ಮಗು ಹೆತ್ತರೆ ತಾಯಿಗೂ  ಏಜೆಂಟ್ ಗೂ ಸಿಗುತ್ತೆ ಲಕ್ಷ ಲಕ್ಷ ಕ್ಯಾಶ್
Advertisement

Child trade : ಬಡತನದ ಹಿನ್ನೆಲೆಯುಳ್ಳ ಕಾರ್ಮಿಕ ಕುಟುಂಬಗಳ ಮಹಿಳೆಯರನ್ನು ಮೊದಲೇ ಗುರುತಿಸಿ ಅವರು ಗರ್ಭ ಧರಿಸಿದ ಕೂಡಲೇ ಮಗುವನ್ನು ಬುಕ್‌ ಮಾಡಿಕೊಂಡು ಬಳಿಕ, ಹೆರಿಗೆಯಾಗುತ್ತಿದ್ದಂತೆಯೇ ಆ ಮಗುವನ್ನು ಖರೀದಿ ಮಾಡುವ(Child Trade) ಅತ್ಯಂತ ಭಯಾನಕ ಕಾರ್ಯಾಚರಣೆ ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Advertisement

ಬೆಂಗಳೂರಿನಲ್ಲಿ ನವಜಾತ ಶಿಶುಗಳ (Newborn babies) ಉತ್ಪತ್ತಿ ಹಾಗೂ ಮಾರಾಟ ದಂಧೆಯೊಂದು (Child Trade) ನಡೆಯುತ್ತಿರುವ ಕುರಿತು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದು, ಈ ಕೃತ್ಯ ನಡೆಸುತ್ತಿದ್ದ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಮನೆಯಲ್ಲಿ ಆರ್ಥಿಕ ಸಂಕಷ್ಟ ಇರುವ ಮಹಿಳೆಯರನ್ನು ಟಾರ್ಗೆಟ್‌ ಮಾಡಿಕೊಂಡು ಈ ದಂಧೆ ನಡೆಸಲಾಗುತ್ತದೆ. ಅದರಲ್ಲಿ ಈಗಾಗಲೇ ಎರಡ್ಮೂರು ಮಕ್ಕಳಿದ್ದು ಮತ್ತೆ ಗರ್ಭಿಣಿಯಾಗಿ ಕಷ್ಟದಲ್ಲಿರುವ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಕಾರ್ಯಾಚರಣೆ (BANGALORE NEWS)ನಡೆಸಲಾಗುತ್ತದೆ. ಇದು ಮಕ್ಕಳನ್ನು ಹೆತ್ತು ಕೊಡುವ ಒಂದು ವ್ಯಾಪಾರಿ ದಂಧೆಯಾಗಿದ್ದು, ಇದರಲ್ಲಿ ಗರ್ಭ ಧರಿಸಿ ಮಗುವನ್ನು ಹೆತ್ತು ಕೊಟ್ಟರೆ ಆ ಮಹಿಳೆಗೆ ಮೂರು ಲಕ್ಷ ನೀಡಲಾಗುತ್ತದೆ. ಇದನ್ನು ಮಕ್ಕಳ ಅವಶ್ಯಕತೆಯಿರುವ ಗ್ರಾಹಕರಿಗೆ ಎಂಟು ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗುತ್ತದೆ.ಇಲ್ಲಿ ಏಜೆಂಟರಿಗೆ 5 ಲಕ್ಷ ರೂ. ಸಿಗುತ್ತದಂತೆ.

ಮೊದಲು ಮಗುವನ್ನು ಮಾರಾಟ ಮಾಡಬಹುದಾದ ಹೆಣ್ಮಕ್ಕಳನ್ನು ಗುರುತಿಸಿ, ಅವರ ಜತೆಗೆ ಮಗುವನ್ನು ಹೆತ್ತು ಕೊಡುವ ಗುಪ್ತ ಒಪ್ಪಂದವನ್ನು ಮಾಡಿಕೊಳ್ಳುತ್ತಾರಂತೆ. ಇದಾದ ಬಳಿಕ, ಮಗು ಹುಟ್ಟಿದ ನಂತರ ಆಸ್ಪತ್ರೆಯಿಂದ ಮಗು ಅದರ ಮೂಲ ಗ್ರಾಹಕರಿಗೆ ಹಸ್ತಾಂತರವಾಗುತ್ತದಂತೆ. ಇದರ ನಡುವೆ,ಮಗು ಹೆತ್ತು ಕೊಟ್ಟ ಕುಟುಂಬಕ್ಕು ಹಣ ಸಂದಾಯವಾಗುತ್ತದೆ. ಮಗುವನ್ನು ಹೆತ್ತು ಕೊಡುವ ಮಹಿಳೆಗೆ ಮಕ್ಕಳ ಮಾರಾಟ ಜಾಲ ಮೂರು ಲಕ್ಷ ರೂ. ಕೊಟ್ಟು ಮಗುವನ್ನು ಖರೀದಿ ಮಾಡಿಕೊಂಡು ಬಳಿಕ ಮೊದಲೇ ಬುಕ್‌ ಮಾಡಿಕೊಂಡ ಗ್ರಾಹಕರಿಗೆ ಕನಿಷ್ಠ ಅಂದರು ಎಂಟು ಲಕ್ಷ ರೂ.ಗಳಿಗೆ ಈ ಟೀಮ್ ಮಾರಾಟ ಮಾಡುತ್ತದೆ. ಕೆಲವೊಮ್ಮೆ ಈ ಮೊತ್ತ 10ರಿಂದ 15 ಲಕ್ಷದವರೆಗೆ ತಲುಪಬಹುದಂತೆ. ಇನ್ನೊಂದು ವಿಧಾನದಲ್ಲಿ ಈ ಮಹಿಳೆಯರನ್ನು ಅಕ್ರಮವಾಗಿ ಬಾಡಿಗೆ ತಾಯಿಯರಂತೆ ಕೂಡ ಬಳಸಲಾಗುತ್ತದೆ. ಈ ಕೃತ್ಯದಲ್ಲಿ ಕೆಲವು ವೈದ್ಯರ ನೆಟ್‌ವರ್ಕ್‌ ಮೂಲಕ ಕೂಡ ನಡೆಯುತ್ತದೆ.

Advertisement

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಈ ದಂಧೆ ವ್ಯಾಪಿಸಿದ್ದು, ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಮಾರಾಟವಾಗಿದ್ದ 10 ಮಕ್ಕಳ ವಿಳಾಸ ಲಭ್ಯವಾಗಿದೆ ಎನ್ನಲಾಗಿದೆ. ಈ ಕಂದಮ್ಮಗಳು ಹುಟ್ಟಿದ 15ರಿಂದ 20 ದಿನಗಳ ಒಳಗೆ ಮಾರಾಟ ಮಾಡಲಾಗಿದೆ ಎನ್ನಲಾಗಿದೆ.ಪೊಲೀಸರು ಬಂಧಿತ ಆರೋಪಿಗಳಿಂದ ಮಾಹಿತಿ ಕಲೆ ಹಾಕಿದ್ದು, ಈ ದಂಧೆಯಲ್ಲಿ(Child trade accused) ಎಂಟು ವರ್ಷಗಳ ಅನುಭವ ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: 7th Pay Commission Updates: ಸರ್ಕಾರಿ ನೌಕರರಿಗೆ ಭರ್ಜರಿ ಜಾಕ್ ಪಾಟ್- ವೇತನದಲ್ಲಿ 18,000ದಿಂದ 50, 000 ವರೆಗೆ ಹೆಚ್ಚಳ!! ಇಲ್ಲಿದೆ ಪಕ್ಕಾ ಲೆಕ್ಕ

Advertisement
Advertisement
Advertisement