Ayodhya: ಬಾಲ ರಾಮನಿಗೆ ಇಂದು ಸೂರ್ಯ ತಿಲಕ
Ayodhya: ಬಾಲ ರಾಮನ ಮೂರ್ತಿಯ ಹಣೆಯ ಮೇಲೆ ಮಧ್ಯಾಹ್ನ 12.16ರ ಸುಮಾರಿಗೆ 5 ನಿಮಿಷಗಳ ಕಾಲ 'ಸೂರ್ಯ ತಿಲಕ' ಮೂಡಲಿದೆ.
08:58 AM Apr 17, 2024 IST
|
ಸುದರ್ಶನ್
UpdateAt: 08:58 AM Apr 17, 2024 IST
Advertisement
Ayodhya: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ತಲೆಯತ್ತಿದ ಬಳಿಕ ಮೊದಲ ರಾಮನವಮಿ ಉತ್ಸವಕ್ಕೆ ಐತಿಹಾಸಿಕ ನಗರಿ ಸಜ್ಜಾಗಿದೆ. ಬುಧವಾರ (ಏ.17) ಬಾಲ ರಾಮನ ಮೂರ್ತಿಯ ಹಣೆಯ ಮೇಲೆ ಮಧ್ಯಾಹ್ನ 12.16ರ ಸುಮಾರಿಗೆ 5 ನಿಮಿಷಗಳ ಕಾಲ 'ಸೂರ್ಯ ತಿಲಕ' ಮೂಡಲಿದೆ.
Advertisement
ಈ ಸಂಭ್ರಮಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದೆ. 25 ಲಕ್ಷ ಭಕ್ತರು ರಾಮ ಲಲ್ಲಾನ ದರ್ಶನ ಪಡೆಯುವ ನಿರೀಕ್ಷೆ ಇದೆ.
ಮಂದಿರ ಪ್ರಾಂಗಣದ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಅಳವಡಿಸಿರುವ ಮಸೂರಗಳು ಸೂರ್ಯನ ಕಿರಣವು ಬಾಲರಾಮನ ಮೂರ್ತಿಯ ಹಣೆಯನ್ನು ತಿಲಕ ರೂಪದಂತೆ ಸ್ಪರ್ಶಿಸಲಿದೆ. ವಿಗ್ರಹವು ಸೂರ್ಯನ ಶಾಖ ತಡೆದು ಕೊಳ್ಳಲು 'ಆಪ್ರೊಮೆಕಾನಿಕಲ್' ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಜ್ಞರು ಹೇಳಿದ್ದಾರೆ. ಈ ಕ್ಷಣವನ್ನು ಭಕ್ತರು ಕಣ್ಣುಂಬಿಕೊಳ್ಳಲು ಮಂದಿರದ ಸುತ್ತಮುತ್ತ 100 ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.
Advertisement
Advertisement