Arvind kejriwal: ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅವರ ಪತ್ನಿ ಸುನೀತಾ ಸಿಎಂ ಆಗುವ ಸಾಧ್ಯತೆ
Arvind kejriwal: ಅರವಿಂದ್ ಕೇಜ್ರವಾಲ್ ಅವರ ಬಂಧನ
ಅವಧಿ ವಿಸ್ತರಣೆಯೊಂದಿಗೆ, ಅವರು ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆಯೇ ಅಥವಾ ಅವರು ರಾಜೀನಾಮೆ ನೀಡಿದರೆ ಅವರ ಸ್ಥಾನವನ್ನು ಯಾರು ಮುಂದುವರೆಸುತ್ತಾರೆ ಎಂಬ ಊಹಾಪೋಹಗಳು ಎದ್ದಿವೆ.
ಇದನ್ನೂ ಓದಿ: Dead body Found in Water Tank: ಟ್ಯಾಂಕರ್ ನಲ್ಲಿದ್ದ ಕೊಳೆತ ಮೃತದೇಹ : ಮೂರು ದಿನಗಳ ಕಾಲ ಅದೇ ನೀರು ಕುಡಿದ ಜನರು ಆತಂಕ
ಕೇಜ್ರಿವಾಲ್ ಜೈಲಿನಿಂದ ದೆಹಲಿ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಆಮ್ ಆದ್ಮಿ ಪಕ್ಷ ಸ್ಪಷ್ಟಪಡಿಸಿದೆ ಆದರೆ ಬಿಜೆಪಿ ವಿಭಿನ್ನವಾಗಿ ಯೋಚಿಸುತ್ತಿದೆ. ಕೇಜ್ರಿವಾಲ್ ಬಂಧನವಾದಾಗಿನಿಂದಲೂ ಅವರ ಧ್ವನಿಯಾಗಿದ್ದ ಅವರ ಪತ್ನಿ ಸುನೀತಾ ಅವರು ಮುಂದಿನ ಸಿಎಂ ಆಗಬಹುದು ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ಇದನ್ನೂ ಓದಿ: Kadaba News: ತಾಯಿ ಹಾಗೂ ಒಂದು ವರ್ಷದ ಮಗುವಿನ ಮೃತ ದೇಹ ನೇತ್ರಾವತಿ ನದಿಯಲ್ಲಿ ಪತ್ತೆ
ಈ ಕುರಿತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಲಾಲು ಯಾದವ್ ಮೂವ್ ಅನ್ನು ಯೋಜಿಸುತ್ತಿದ್ದಾರೆ ಮತ್ತು ಕೇಜ್ರೀವಾಲ್ ಅವರ ಪತ್ನಿ ಸುನೀತಾ ಅವರನ್ನು ಮುಂದಿನ ದೆಹಲಿ ಸಿಎಂ ಎಂದು ಹೆಸರಿಸಲಾಗುವುದು ಎಂದು ಹೇಳಿದ್ದಾರೆ, ಇದು ತೊಂಬತ್ತರ ದಶಕದಲ್ಲಿ ರಾಬ್ರಿ ದೇವಿ ಬಿಹಾರವನ್ನು ನೆನಪಿಸುತ್ತದೆ. ಮೇವು ಹಗರಣದಲ್ಲಿ ಆಗಿನ ಸಿಎಂ ಲಾಲು ಯಾದವ್ ಜೈಲು ಪಾಲಾದಾಗ ಸಿಎಂ ಆಗಿ ರಾಬ್ರಿ ದೇವಿ ಆಡಳಿತ ನಡೆಸಿದ್ದರು ಎಂದು ಹೇಳಿದ್ದಾರೆ.
ಮದ್ಯದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಬಂಧನದ ನಂತರ ಸುನೀತಾ ಕೇಜ್ರಿವಾಲ್ ದೆಹಲಿಯ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಆಕೆ ತನ್ನ ಸಂಗಾತಿಗೆ ತಮ್ಮ ಬೆಂಬಲವನ್ನು ನೀಡುವಂತೆ ಜನರನ್ನು ವಿನಂತಿಸುತ್ತಿದ್ದಾರೆ. ಇದರ ಜೊತೆಗೆ WhatsApp ಅಭಿಯಾನವನ್ನು ಸಹ ಪ್ರಾರಂಭಿಸಿದ್ದಾರೆ.
"ನೀವು ಅವರಿಗೆ ನಿಮ್ಮ ಶುಭಾಶಯಗಳು, ಪ್ರಾರ್ಥನೆಗಳು ಅಥವಾ ಇನ್ನಾವುದೇ ಸಂದೇಶವನ್ನು ಕಳುಹಿಸಬಹುದು. ನಾನು ಅದನ್ನು ಜೈಲಿನಲ್ಲಿ ಅವರಿಗೆ ತಲುಪಿಸುತ್ತೇನೆ" ಎಂದು ಅವರು "ಕೇಜ್ರಿವಾಲ್ ಕೊ ಆಶೀರ್ವಾದ್" ಅಭಿಯಾನಕ್ಕಾಗಿ WhatsApp ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ.
ಕೇಜ್ರಿವಾಲ್ ಅವರನ್ನು "ಸಚ್ಚ ದೇಶ ಭಕ್ತ" ಎಂದು ಕರೆದ ಅವರು, ನಿನ್ನೆ ನ್ಯಾಯಾಲಯದಲ್ಲಿ ದೆಹಲಿ ಸಿಎಂ ಹೇಳಿಕೆಯನ್ನು ಶ್ಲಾಘಿಸಿದರು. "ನ್ಯಾಯಾಲಯದಲ್ಲಿ ಅವರು ಮಾತನಾಡುವ ರೀತಿಗೆ ಸಾಕಷ್ಟು ಧೈರ್ಯ ಬೇಕು. "ಸಚೇ ದೇಶ್ ಭಕ್ತ ಹ್ ವೋಹ್" ಎಂದು ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಮುಂದಿನ ಸಿಎಂ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ಬಿಜೆಪಿ ಹಾಗೂ ಇತರ ವಿರೋಧ ಪಕ್ಷಗಳು ಹೇಳುತ್ತಿವೆ.