For the best experience, open
https://m.hosakannada.com
on your mobile browser.
Advertisement

Women Stripped: ಮಹಿಳೆಯನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿದ ನಾಲ್ವರು ಮಹಿಳೆಯರ ಬಂಧನ

Women Stripped: ನಾಲ್ವರು ಮಹಿಳೆಯರು ಸೇರಿ 30 ವರ್ಷದ ಮಹಿಳೆಯನ್ನು ಥಳಿಸಿ, ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಹೀನಾಯ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
03:50 PM Mar 27, 2024 IST | ಸುದರ್ಶನ್
UpdateAt: 03:50 PM Mar 27, 2024 IST
women stripped  ಮಹಿಳೆಯನ್ನು ವಿವಸ್ತ್ರಗೊಳಿಸಿ  ಮೆರವಣಿಗೆ ಮಾಡಿದ ನಾಲ್ವರು ಮಹಿಳೆಯರ ಬಂಧನ
Advertisement

Women Stripped: ನಾಲ್ವರು ಮಹಿಳೆಯರು ಸೇರಿ 30 ವರ್ಷದ ಮಹಿಳೆಯನ್ನು ಥಳಿಸಿ, ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಹೀನಾಯ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಪ್ರಕರಣ ಸಂಬಂಧ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

Advertisement

ಬಚೋರಾ ಗ್ರಾಮದಲ್ಲಿ ಸೋಮವಾರ ನಾಲ್ವರು ಮಹಿಳೆಯರು 30 ವರ್ಷದ ಮಹಿಳೆಯನ್ನು ಬಲವಂತವಾಗಿ ಮನೆಯಿಂದ ಹೊರಗೆಳೆದು ಥಳಿಸಿ ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಅವಮಾನ ಮಾಡಿದ್ದಾರೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ (ಗ್ರಾಮೀಣ) ಸುನಿಲ್ ಮೆಹ್ರಾ ತಿಳಿಸಿದ್ದಾರೆ.

ಎಲ್ಲಾ ನಾಲ್ವರು ಆರೋಪಿ ಮಹಿಳೆಯರನ್ನು ಬುಧವಾರ ಬಂಧಿಸಲಾಯಿತು ಎಂದು ಅವರು ಹೇಳಿದರು.
ಗ್ರಾಮಕ್ಕೆ ಭೇಟಿ ನೀಡಿದ್ದು, ಈಗ ಅಲ್ಲಿ ಶಾಂತಿ ನೆಲೆಸಿದೆ ಎಂದರು. ಆದರೆ ಸಂತ್ರಸ್ತೆ ಅವಮಾನದಿಂದ ವಿಚಲಿತಳಾಗಿ ತನ್ನ ಪೋಷಕರ ಮನೆಗೆ ಹೋಗಿದ್ದಾಳೆ ಎಂದು ಅವರು ಹೇಳಿದರು.

Advertisement

ಗ್ರಾಮದ ಕೆಲವು ಯುವಕರು ಅವಮಾನಕರ ಕೃತ್ಯದ ವೀಡಿಯೋ ಚಿತ್ರೀಕರಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅಂಥಹವರನ್ನು ಗುರುತಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ ಪಿ ತಿಳಿಸಿದ್ದಾರೆ.

ಆರೋಪಿ ಮಹಿಳೆಯರು ಸಂತ್ರಸ್ತೆಯನ್ನು ಮನೆಯಿಂದ ಹೊರಗೆಳೆದು ವಿವಸ್ತ್ರಗೊಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆಯ ಸಮಯದಲ್ಲಿ ಸಂತ್ರಸ್ತ ಮಹಿಳೆ ಪರಿಪರಿಯಾಗಿ ಮನವಿ ಮಾಡಿದರು, ಆದರೆ ಆರೋಪಿಗಳು ಆಕೆಯನ್ನು ಬಿಡದೆ ಬಹಿರಂಗವಾಗಿ ಆಕೆಯ ಬಟ್ಟೆಗಳನ್ನು ಹರಿದು ಹಾಕಿದರು ಎಂದು ಅವರು ಹೇಳಿದರು.

ಪ್ರಕರಣ ಸಂಬಂಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 354-ಎ (ಲೈಂಗಿಕ ಕಿರುಕುಳ) ಮತ್ತು 452 (ತಪ್ಪಾಗಿ ತಡೆಯುವುದು ಮತ್ತು ಹಲ್ಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Udupi Nejaru Case: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಆರೋಪಿ ಪ್ರವೀಣ್‌ ಚೌಗುಲೆ ನ್ಯಾಯಾಲಯಕ್ಕೆ ಹಾಜರು

Advertisement
Advertisement
Advertisement